»   » ಸೃಜನ್ ಲೋಕೇಶ್ 'ಸಪ್ನೋಂಕಿ ರಾಣಿ' ಐಶ್ವರ್ಯಾ

ಸೃಜನ್ ಲೋಕೇಶ್ 'ಸಪ್ನೋಂಕಿ ರಾಣಿ' ಐಶ್ವರ್ಯಾ

Posted By:
Subscribe to Filmibeat Kannada

ಎಲ್ಲರ ನಿದ್ದೆಗೆಡಿಸಲು ಕನ್ನಡಕ್ಕೆ ಮುದ್ದಾದ ಅರಗಿಣಿ ಐಶ್ವರ್ಯಾ ಎಂಟ್ರಿ ಕೊಡುತ್ತಿದ್ದಾರೆ. 'ಸಪ್ನೋಂಕಿ ರಾಣಿ' ಚಿತ್ರಕ್ಕೆ ಆಗಮಿಸಿದ್ದಾರೆ. ಮೈಸೂರಿನಿಂದ ಆಗಮಿಸಿ ಬೆಂಗಳೂರಿನಲ್ಲಿ ಕೆಲವು ದಿವಸಗಳ ಚಿತ್ರೀಕರಣ ಮುಗಿಸಿ ಇದೀಗ ಚಿಕ್ಕಮಗಳೂರಿಗೆ ಪ್ರಯಾಣ ಬೆಳಸಿರುವ ಸನ್ ಶೈನ್ ಮೂವೀಸ್ ಅವರ ಚೊಚ್ಚಲ ಸಿನೆಮಾ 'ಸಪ್ನೋಂಕಿ ರಾಣಿ'.

ಈಗ ದ್ವಿತೀಯ ಹಂತದ ಚಿತ್ರೀಕರಣವನ್ನು ಐಶ್ವರ್ಯಾ ಅವರೊಂದಿಗೆ ಪ್ರಾರಂಭಿಸಿದೆ. ಐಶ್ವರ್ಯಾ ಅವರಿಗೆ ಚಿಕ್ಕ ಪಾತ್ರಗಳಲ್ಲಿ 'ಸ್ವೀಟಿ' ಹಾಗೂ ಹಾಫ್ ಮೆಂಟಲ್' ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಅನುಭವವಿದೆ. ಈ ಚಿತ್ರಕ್ಕೆ ಮಗ ಶಾನ್ ಕಥೆ ಹಾಗೂ ಚಿತ್ರಕಥೆ ಬರದರೆ ಅಪ್ಪ ಹೆಸರಾಂತ ನಿರ್ದೇಶಕ ಎ. ಆರ್. ಬಾಬು ನಿರ್ದೇಶನ ಮಾಡುತ್ತಿದ್ದಾರೆ.

Srujan Lokesh 'Sapno Ki Rani' Aishwarya

ಸೃಜನ್ ಲೋಕೇಶ್ ಅವರು ಚಿತ್ರದ ಕಥಾ ನಾಯಕರು. ಅವಿನಾಶ್, ಶೋಭಾರಾಜ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಮಿತ್ರ, ದಿಲೀಪ್, ಅಶೋಕ್, ಚೇತನ್, ಚಿಕ್ಕಣ್ಣ, ಸೋಯಲ್ ಹಾಗೂ ಇತರರು ತಾರಾಬಳಗದಲ್ಲಿದ್ದಾರೆ.

ಛಾಯಾಗ್ರಾಹಕ ಜೆ ಎಸ್ ವಾಲಿ ಅವರು ಡಿಜಿಟಲ್ ಹಾಗೂ ಮಾಮೂಲಿ ಫಿಲ್ಮ್ ಅನ್ನು ಬಳಸಿ ಚಿತ್ರೀಕರಣ ಮಾಡುತ್ತಲಿದ್ದಾರೆ. ಧರ್ಮ ವಿಶ್ ಅವರ ರಾಗ ಸಂಯೋಜನೆ, ಸುರೇಶ್ ಅವರ ಸಂಕಲನ, ಮಾಸ್ ಮಾದ ಅವರ ಸಾಹಸ, ಹೈಟ್ ಮಂಜು ಅವರ ನೃತ್ಯ ನಿರ್ದೇಶನೆ ಇದೆ.

ಯೋಗರಾಜ್ ಭಟ್, ವಿ ನಾಗೇಂದ್ರ ಪ್ರಸಾದ್, ವಿ ಮನೋಹರ್, ರವಿಕಿರಣ್ ಅವರ ಸಾಹಿತ್ಯವಿದೆ. ಚಂದ್ರ ಜಿ (ಅಪ್ಪಯ್ಯ) ಟಿ ಗಂಗರಾಜು ಅವರು ಈ ಚಿತ್ರದ ಸಹ ನಿರ್ಮಾಪಕರು. ಅರುಣ್ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. (ಒನ್ಇಂಡಿಯಾ ಕನ್ನಡ)

English summary
Actress Aishwarya plays a lead role opposite to Srujan Lokesh in 'Sapnon Ki Rani' (Dream Girl). The film is being directed by A R Babu and produced by Indramma Govindaraju. Shaan has written the story, screenplay and dialogues of the film.
Please Wait while comments are loading...