For Quick Alerts
  ALLOW NOTIFICATIONS  
  For Daily Alerts

  ಟಗರು ಚಿತ್ರ ನೋಡಲಿರುವ 'ಬಚ್ಚನ್' ಜೋಡಿ

  By Pavithra
  |

  ಟಗರು ಸಿನಿಮಾ ಬಿಡುಗಡೆ ಆಗಿದ್ದು ಆಯ್ತು ರಾಜ್ಯಾದ್ಯಂತ ಅಭಿಮಾನಿಗಳು ಒಂದಲ್ಲ ಎರಡಲ್ಲ ಮೂರ್ನಾಲ್ಕು ಬಾರಿ ಸಿನಿಮಾವನ್ನ ನೋಡಿದ್ದು ಆಯ್ತು. ಚಿತ್ರ ನೋಡಿದವರೆಲ್ಲರೂ ಹೇಳುತ್ತಿರುವ ಮಾತು ಒಂದೇ ಸಿನಿಮಾ ಸೂಪರ್.

  ಇನ್ನು ಟಗರು ಚಿತ್ರದಲ್ಲಿ ಸಾಕಷ್ಟು ಕಲಾವಿದರು ಅಭಿನಯ ಮಾಡಿದ್ದು ಪ್ರತಿಯೊಬ್ಬರು ಸಿನಿಮಾಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ಸಖತ್ ಖುಷಿ ಆಗಿದ್ದಾರೆ. ಅದಷ್ಟೇ ಅಲ್ಲದೆ ಸೂರಿ ಅಂತಹ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆಯನ್ನ ವ್ಯಕ್ತ ಪಡಿಸುತ್ತಿದ್ದಾರೆ. ಕಾರಣ ಇಷ್ಟೇ ಟಗರು ಚಿತ್ರದಲ್ಲಿ ಬಂದು ಹೋಗುವ ಸಣ್ಣ ಪಾತ್ರಗಳನ್ನು ಜನರು ಗುರುತಿಸುವಂತಾಗಿದೆ.

  ಚಂದನವನದಲ್ಲಿ ಮಿನುಗುತ್ತಿದೆ ಪುನರ್ವಸು ಚಂದನವನದಲ್ಲಿ ಮಿನುಗುತ್ತಿದೆ ಪುನರ್ವಸು

  ಪ್ರೇಕ್ಷಕರು ಮೆಚ್ಚಿಕೊಂಡ ಟಗರು ಸಿನಿಮಾವನ್ನ ಈಗ ಸ್ಯಾಂಡಲ್ ವುಡ್ ಕಲಾವಿದರು ನೋಡುವ ಸಂದರ್ಭ ಬಂದಿದೆ. ಬಿಡುಗಡೆ ಆದ ದಿನವೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಿನಿಮಾರಂಗದ ಸಾಕಷ್ಟು ತಂತ್ರಜ್ಞರು ಚಿತ್ರವನ್ನ ವೀಕ್ಷಣೆ ಮಾಡಿದ್ದರು. ಆದರೆ ಈಗ ಬಚ್ಚನ್ ಜೋಡಿ ಟಗರು ಸಿನಿಮಾವನ್ನ ನೋಡಿ ಎಂಜಾಯ್ ಮಾಡಲಿದ್ದಾರೆ.

  ಟಗರು ನೋಡಲಿರುವ ಬಚ್ಚನ್ ಜೋಡಿ

  ಟಗರು ನೋಡಲಿರುವ ಬಚ್ಚನ್ ಜೋಡಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾವನ್ನ ವಾರಾಂತ್ಯಕ್ಕೆ 'ಬಚ್ಚನ್' ಜೋಡಿ ನೋಡಲಿದ್ದಾರೆ. ಬಚ್ಚನ್ ಜೋಡಿ ಅಂದರೆ ಅಮಿತಾಬ್ ಬಚ್ಚನ್ ಅಲ್ಲ, ಕನ್ನಡ ಬಚ್ಚನ್ ಚಿತ್ರದಲ್ಲಿ ಅಭಿನಯಿಸಿದ ಸುದೀಪ್ ಹಾಗೂ ಭಾವನಾ.

  ಟಗರು ಶಿವನನ್ನ ನೋಡಲಿರುವ ಪಂಚಮಿ

  ಟಗರು ಶಿವನನ್ನ ನೋಡಲಿರುವ ಪಂಚಮಿ

  ಕಳೆದ ವಾರ ಬಿಡುಗಡೆಯಾದ ಟಗರು ಸಿನಿಮಾವನ್ನ ಶನಿವಾರ ನಟಿ ಭಾವನಾ ಬೆಂಗಳೂರಿನ ಊರ್ವರ್ಶಿ ಥಿಯೇಟರ್ ನಲ್ಲಿ ವೀಕ್ಷಿಸಲಿದ್ದಾರೆ. ಪತಿ ನವೀನ್ ಕೂಡ ಭಾವನಾ ಜೊತೆ ಚಿತ್ರ ನೋಡಲಿದ್ದಾರೆ.

  ಶಿವಣ್ಣನ ಸಿನಿಮಾ ನೋಡಲಿರುವ ಸುದೀಪ್

  ಶಿವಣ್ಣನ ಸಿನಿಮಾ ನೋಡಲಿರುವ ಸುದೀಪ್

  ಒಂದೇ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವ ಸುದೀಪ್ ಹಾಗೂ ಶಿವಣ್ಣ ಒಟ್ಟಿಗೆ ಟಗರು ಸಿನಿಮಾ ನೋಡಲಿದ್ದಾರೆ. ಭಾನುವಾರ ಕಿಚ್ಚ ಸುದೀಪ್ ಟಗರು ಚಿತ್ರ ವೀಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ.

  ಯು ಎಸ್ ಎ ನಲ್ಲಿ ಟಗರು ಪ್ರದರ್ಶನ

  ಯು ಎಸ್ ಎ ನಲ್ಲಿ ಟಗರು ಪ್ರದರ್ಶನ

  ಮಾರ್ಚ್ 8 ನೇ ತಾರೀಖಿನಿಂದ 'ಯು ಎಸ್ ಎ' ನಲ್ಲಿ ಟಗರು ಸಿನಿಮಾ ಸಿನಿಮಾ ಪ್ರದರ್ಶನ ಶುರುವಾಗಲಿದೆ. 'ಯು ಎಸ್ ಎ' ನಲ್ಲಿ ಅತೀ ಹೆಚ್ಚು ಸ್ಕ್ರೀನ್ ಗಳಲ್ಲಿ ಶಿವಣ್ಣನ ಸಿನಿಮಾ ರಿಲೀಸ್ ಆಗುತ್ತಿದೆ.

  English summary
  Kannada film actor Sudeep and actress Ponna will be watching Tagaru kannada movie, The Tagaru film is being released on March 8th in the USA ,Tagaru Shivaraj Kumar, Manwitha Harish starrer movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X