»   » 'ರಾಗಿಣಿ ಎಂಎಂಎಸ್ 2' ಗರಿಗೆದರಿದ ಸನ್ನಿ ಲಿಯೋನ್

'ರಾಗಿಣಿ ಎಂಎಂಎಸ್ 2' ಗರಿಗೆದರಿದ ಸನ್ನಿ ಲಿಯೋನ್

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಚಿತ್ರರಂಗಕ್ಕೆ ನೀಲಿ ಸುಂದರಿ ಸನ್ನಿ ಲಿಯೋನ್ ಅಡಿಯಿಟ್ಟು ಒಂದು ವರ್ಷದ ಮೇಲಾಗಿದೆ. ಈಗ ಆಕೆಯ ಎರಡನೇ ಚಿತ್ರ 'ರಾಗಿಣಿ ಎಂಎಂಎಸ್ 2' ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಬಾರಿಯೂ ಸನ್ನಿ ಲಿಯೋನ್ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡುತ್ತಿಲ್ಲ.

ಇದೇ ಶುಕ್ರವಾರ (ಸೆ.13) ರಾಗಿಣಿ ಎಂಎಂಎಸ್ 2 ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಸುಮಾರು 90 ಸೆಕೆಂಡ್ ಗಳ ಕಾಲಾವಧಿಯ ಈ ಟೀಸರ್ ಮೇಲೆ ಬಾಲಿವುಡ್ ಎರಡೂ ಕಣ್ಣುಗಳನ್ನು ಬಿಟ್ಟುಕೊಂಡು ಕೂತಿದೆ. ಇನ್ನು ಚಿತ್ರವನ್ನು ಜನವರಿ 2014ಕ್ಕೆ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.


ಮೂಲಗಳ ಪ್ರಕಾರ ಚಿತ್ರದ ಟೀಸರ್ ಗೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. ಶುಕ್ರವಾರದಿಂದ ಆನ್ ಲೈನ್ ನಲ್ಲಿ ಈ ಟೀಸರ್ ಹವಾ ಎಬ್ಬಿಸುವುದು ಗ್ಯಾರಂಟಿ ಎನ್ನುತ್ತದೆ ಚಿತ್ರತಂಡ. ಭೂಷನ್ ಪಟೇಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳು ಇಲ್ಲದಿದ್ದರೂ ಕುತೂಲವಂತೂ ಇದ್ದೇ ಇದೆ.

ಇಷ್ಟಕ್ಕೂ ರಾಗಿಣಿ ಎಂಎಂಎಸ್ ಚಿತ್ರ ಯಾವ ವಿಭಾಗಕ್ಕೆ ಸೇರುತ್ತದೆ? ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ತೆರೆಕಂಡಿರುವ ಚಿತ್ರಗಳ ಸಾಲಿಗೆ ಇದು ಸೇರಲ್ಲವಂತೆ. ಏಕೆಂದರೆ ಇದು ಮೊದಲ HORREX ಚಿತ್ರ. ಅಂದರೆ ಹಾರರ್ ಹಾಗೂ ಸೆಕ್ಸ್ ಎರಡನ್ನೂ ಬ್ರೆಡ್ ಮತ್ತು ಜಾಮ್ ನಂತೆ ಬೆಸೆದಿರುವ ಚಿತ್ರವಂತೆ.

'ಜಿಸ್ಮ್ 2' ಚಿತ್ರದ ಬಳಿಕ ಸನ್ನಿ ಲಿಯೋನ್ ಬಣ್ಣ ಹಚ್ಚಿಕೊಂಡಿರುವ ಚಿತ್ರ. ಈ ಚಿತ್ರದಲ್ಲಿನ ಸನ್ನಿ ಸಲಿಂಗಸ್ತ್ರೀಕಾಮಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ತೆರೆಯ ಮೇಲೆ ಸನ್ನಿಗೆ ಸಾಥ್ ನೀಡುತ್ತಿರುವವರು ಕಿರುತೆರೆ ನಟಿ ಸಂಧ್ಯಾ ಮೃದುಲ್.

ಚಿತ್ರದಲ್ಲಿ ಇವರಿಬ್ಬರೂ ತುಂಬಾ ರೋಚಕವಾಗಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಇದೆ. ಇವರಿಬ್ಬರೂ ಅಪ್ಪಿಕೊಳ್ಳುವುದು, ಚುಂಬಿಸಿಕೊಳ್ಳುವ ಕೆಲವು ಸನ್ನಿವೇಶಗಳೂ ಇವೆ. ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ಒಂದು ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

English summary
The most desired adult entertainment star, Sunny Leone, is ready to shock in the keenly awaited sequel, 'Ragini MMS 2', which releases in cinemas on January 17, 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada