»   » ಸ್ಯಾಂಡಲ್ ವುಡ್ 'ಟಗರು' ಬಗ್ಗೆ ಟಾಲಿವುಡ್ ಸ್ಟಾರ್ ನಟನ ಮಾತು

ಸ್ಯಾಂಡಲ್ ವುಡ್ 'ಟಗರು' ಬಗ್ಗೆ ಟಾಲಿವುಡ್ ಸ್ಟಾರ್ ನಟನ ಮಾತು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. 'ಪಿ ಆರ್ ಕೆ' ಆಡಿಯೋ ಕಂಪನಿಯಲ್ಲಿ ಚಿತ್ರದ ಹಾಡುಗಳು ಹೊರಬರುತ್ತಿದೆ. ಅದ್ದೂರಿ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಸಿದ್ಧತೆ ಜೋರಾಗಿ ನಡೆದಿದೆ.

'ಕಡ್ಡಿಪುಡಿ' ಸಿನಿಮಾದ ನಂತರ ಶಿವಣ್ಣನಿಗೆ ನಿರ್ದೇಶಕ 'ದುನಿಯಾ' ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. 'ಟಗರು' ಮಲ್ಟಿ ಸ್ಟಾರರ್ ಚಿತ್ರವಾಗಿದ್ದು ಧನಂಜಯ, ವಸಿಷ್ಠ ಸಿಂಹ, ಮಾನ್ವಿತಾ ಹರೀಶ್, ಜಾಕಿ ಭಾವನಾ ಇನ್ನೂ ಅನೇಕರು ಅಭಿನಯಿಸಿದ್ದಾರೆ.

'ಹೊಸಪೇಟೆ'ಯಲ್ಲಿ 'ಟಗರು' ಸಿನಿಮಾದ ಆಡಿಯೋ ಸಮಾರಂಭ ನಡೆಯಲಿದ್ದು, ಅಪ್ಪು ಹಾಗೂ ಶಿವರಾಜ್ ಕುಮಾರ್ ಅಲ್ಲಿಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಬೆಂಗಳೂರು ಬಿಟ್ಟು ಹೊಸಪೇಟೆಯಲ್ಲಿ ಆಡಿಯೋ ರಿಲೀಸ್ ಮಾಡುತ್ತಿರುವುದು ಏಕೆ? ಸಮಾರಂಭಕ್ಕೆ ಶುಭಕೋರಿರುವ ಸ್ಪೆಷಲ್ ಅಥಿತಿ ಯಾರು ? ಮುಂದೆ ಓದಿ

ಹೊಸಪೇಟೆ ಅಭಿಮಾನಿಗಳಿಗೆ ಸಂಭ್ರಮ

ಡಾ ರಾಜ್ ಕುಮಾರ್ ಕುಟುಂಬಸ್ಥರಿಗೆ ಅತೀ ಹೆಚ್ಚು ಅಭಿಮಾನಿಗಳು ಇರುವುದು ಹೊಸಪೇಟೆಯಲ್ಲಿ. ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಅಭಿನಯದ ಚಿತ್ರಗಳು ಬಿಡುಗಡೆಯಾದ ದಿನ ಹೊಸಪೇಟೆಯಲ್ಲಿ ಜಾತ್ರೆಯ ರೀತಿಯಲ್ಲಿ ಸಂಭ್ರಮಿಸುತ್ತಾರೆ.

ಶಿವರಾಜ್ ಕುಮಾರ್ 'ಕವಚ' ಚಿತ್ರಕ್ಕೆ ಹೊಸ ನಾಯಕಿಯ ಆಗಮನ:

ಅಭಿಮಾನಿ ದೇವರುಗಳಿಗಾಗಿ ಸಮಾರಂಭ

ಅಪ್ಪು-ಶಿವಣ್ಣ ಅಭಿನಯದ ಚಿತ್ರಗಳು ಬಿಡುಗಡೆಯಾದಾಗ ಹಬ್ಬದಂತೆ ಸಂಭ್ರಮಿಸುವ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಹೊಸಪೇಟೆಯಲ್ಲಿ ಸಮಾರಂಭವನ್ನ ಆಯೋಜನೆ ಮಾಡಲಾಗಿದೆ. ಈ ಮೂಲಕ ಸಾವಿರಾರು ಫ್ಯಾನ್ಸ್ ಗಳನ್ನ ಭೇಟಿ ಆಗಲಿದ್ದಾರೆ ಪುನೀತ್ ಹಾಗೂ ಶಿವರಾಜ್ ಕುಮಾರ್

ಗೋವಾ ಬೀಚ್ ನಲ್ಲಿ ಶಿವಣ್ಣನ ಬೆಚ್ಚಿ ಬೀಳಿಸುವ ಸಾಹಸ

ಸಹೋದರರ ಜುಗಲ್ ಬಂದಿ

'ಟಗರು' ಆಡಿಯೋ ಸಮಾರಂಭಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದೆ. ಸ್ಟೇಜ್ ಮೇಲೆ ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ನೃತ್ಯ ಮಾಡಲಿದ್ದಾರೆ. 'ಟಗರು' ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ.

ಸಹೋದರನಿಗೆ ಶುಭಕೋರಿದ ಬಾಲಯ್ಯ

ಟಾಲಿವುಡ್ ಸ್ಟಾರ್ ನಟ ಬಾಲಯ್ಯ 'ಟಗರು' ಚಿತ್ರದ ಆಡಿಯೋ ಸಮಾರಂಭಕ್ಕೆ ಶುಭಕೋರಿದ್ದಾರೆ. 'ನನ್ನ ಸಹೋದರ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಯಶಸ್ವಿಯಾಗಲಿ' ಎಂದಿದ್ದಾರೆ.

'ಟಗರು' ಜೊತೆಯಲ್ಲಿ 'ಅಂಜನಿಪುತ್ರ'

'ಟಗರು' ಆಡಿಯೋ ಸಮಾರಂಭದ ಜೊತೆಯಲ್ಲಿ 'ಅಂಜನಿಪುತ್ರ' ಸಿನಿಮಾದ ಪ್ರಚಾರವೂ ಕೂಡ ಒಟ್ಟೊಟ್ಟಿಗೆ ನಡೆಯಲಿದೆ. ಹೊಸಪೇಟೆಯಲ್ಲಿ ಮಧ್ಯರಾತ್ರಿಯಿಂದಲೇ 'ಅಂಜನಿಪುತ್ರ' ಸಿನಿಮಾ ಪ್ರದರ್ಶನವಾಗಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ನಿಟ್ಟಿನಲ್ಲಿ ಪವರ್ ಸ್ಟಾರ್ ಹೊಸಪೇಟೆಯ ಚಿತ್ರಮಂದಿರಗಳಿಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ.

English summary
Shivaraj Kumar starrer Tagaru kannada movie audio program will be Hospet held at , songs will be released in the 'PRK' audio company ,the movie is directed by Duniya Suri, Manvitha Harish and Bhavana female lead opposite Shivaraj kumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X