»   » ತನ್ನ ಭಾವಿ ಪತಿಯೊಂದಿಗೆ ತ್ರಿಷಾ ಕೃಷ್ಣನ್ ಚೊಚ್ಚಲ ಸೆಲ್ಫಿ

ತನ್ನ ಭಾವಿ ಪತಿಯೊಂದಿಗೆ ತ್ರಿಷಾ ಕೃಷ್ಣನ್ ಚೊಚ್ಚಲ ಸೆಲ್ಫಿ

Posted By:
Subscribe to Filmibeat Kannada

'ಪವರ್ ಸ್ಟಾರ್' ಚಿತ್ರದಲ್ಲಿ ಅಭಿನಯಿಸಿದ ಪವರ್ ಫುಲ್ ಬೆಡಗಿ ತ್ರಿಷಾ ಕೃಷ್ಣಗೆ ಕಂಕಣಭಾಗ್ಯ ಕೂಡಿಬಂದಿರುವುದು ಗೊತ್ತೇ ಇದೆ. ಇದೇ ಜನವರಿ 23ಕ್ಕೆ ಉದ್ಯಮಿ, ಚಿತ್ರ ನಿರ್ಮಾಪಕ ವರುಣ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ತ್ರಿಷಾ.

ಈ ಒಂದು ಅಪೂರ್ವ ಸಂದರ್ಭದಲ್ಲಿ ತನ್ನ ಭಾವಿ ಪತಿಯ ಕೊರಳನು ಬಳಸಿ ಚೊಚ್ಚಲ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಈ ಸೆಲ್ಫಿ ನೋಡುತ್ತಿದ್ದರೆ ಇವರಿಬ್ಬರು ಎಂಥಹಾ ಗಾಢ ಪ್ರೇಮಿಗಳು ಎಂಬುದು ಅರ್ಥವಾಗುತ್ತದೆ. ತನ್ನ ಫೇಸ್ ಬುಕ್ ಮೂಲಕ ಅಭಿಮಾನಿಗಳಿಗೆ ತಾಜಾ ಸಮಾಚಾರವನ್ನು ನಿಯಮಿತವಾಗಿ ತ್ರಿಷಾ ಕೊಡುತ್ತಲೇ ಬಂದಿದ್ದಾರೆ. [ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ...! ಗಾಸಿಪ್ ಅಲ್ಲ, 100% ಸತ್ಯ..!]

ಇದೀಗ ಈ ಸೆಲ್ಫಿಯನ್ನೂ ಸಹ ಅವರೇ ಪ್ರಕಟಿಸಿಕೊಂಡಿದ್ದು, ನಮ್ಮಿಬ್ಬರ ಚೊಚ್ಚಲ ಸೆಲ್ಫಿ ಇದು ಎಂದಿದ್ದಾರೆ. ಇಬ್ಬರ ಜೋಡಿ ನೋಡುಗರ ಕಣ್ಣಿಗೆ ಹಬ್ಬ ಅಲ್ಲವೇ? ಆದರೆ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಾರೆ ಮದುವೆಯಾಗುತ್ತಿದ್ದಾರಲ್ಲಾ ಎಂಬ ಮಧುರ ಯಾತನೆಯಲ್ಲಿ ನರಳುವಂತಾಗಿದೆ.

Trisha Krishnan first selfie with Varun Manian

ಇವರಿಬ್ಬರ ಮದುವೆ ಅಧಿಕೃತವಾಗಿ ಗೊತ್ತಾಗುವುದಕ್ಕೂ ಮೊದಲೇ ಗಾಸಿಪ್ ರೂಪದಲ್ಲಿ ಹರಿದಾಡಿತ್ತು. ಆದರೆ ಕೈಯಲ್ಲಿ ಹಲವಾರು ಪ್ರಾಜೆಕ್ಟ್ ಗಳಿದ್ದ ಕಾರಣ ತ್ರಿಷಾ ಆ ಸುದ್ದಿಯನ್ನು ಅಲ್ಲಗಳೆದಿದ್ದರು. ಕಡೆಗೆ ಅದು ಹೇಗೋ ಧೈರ್ಯ ಮಾಡಿ ತಮ್ಮ ಮದುವೆ ಸುದ್ದಿಯನ್ನು ಈಗ ಘೋಷಿಸಿದ್ದಾರೆ.

ತ್ರಿಷಾ ಮೇಲೆ ಕೋಟ್ಯಾಂತರ ರುಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರು ಮಾತ್ರ ತಮ್ಮ ಜೀವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಆದರೆ ತ್ರಿಷಾ ಅವರ ಒಂದು ಟ್ವೀಟ್ ನಿರ್ಮಾಪಕರ ಪಾಲಿಗೆ ಕೊಂಚ ನಿರಾಳ ತರುತ್ತಿದೆ.

ಅದೇನೆಂದರೆ, "ಜನವರಿ 23ಕ್ಕೆ ನನ್ನ ನಿಶ್ಚಿತಾರ್ಥ. ಆದರೆ ಮದುವೆ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ. ಸಿನಿಮಾಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಎರಡು ಹೊಸ ಚಿತ್ರಗಳಿಗೆ ಅಂಕಿತ ಹಾಕುತ್ತಿದ್ದೇನೆ. ನನ್ನ ಅಭಿನಯ ನಾಲ್ಕು ಚಿತ್ರಗಳು ಇದೇ ವರ್ಷ ತೆರೆಕಾಣಲಿವೆ. ಅದಕ್ಕಾಗಿ ಕುತೂಹಲದಿಂದ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ. (ಏಜೆನ್ಸೀಸ್)

English summary
South Indian duskey beauty Trisha Krishnan and Varun Manian who will be getting engaged on January 23rd this year, Trisha posed for a selfie in this fashion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada