For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ಉಪೇಂದ್ರ ಟಿಂಗು ಟಿಂಗು ಸಮ್ ಥಿಂಗು!

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದರು ಡಿಫರೆಂಟ್ ಎಂಬುದು ಅವರ ಅಭಿಮಾನಿಗಳಷ್ಟೇ ಅಲ್ಲ ಎಲ್ಲರೂ ಒಪ್ಪುವ ಮಾತು. ಆದರೆ ಈ ಬಾರಿ ಡಿಫರೆಂಟ್ ಆಗಿ ಏನು ಮಾಡುತ್ತಿದ್ದಾರೆ ಎಂದರೆ...ಅವರು ಮುಂಬೈನಲ್ಲಿ ಟಿಂಗು ಟಿಂಗು ಸಮ್ ಥಿಂಗ್ ಮಾಡುತ್ತಿದ್ದಾರೆ. ಅರ್ಥವಾಗಲಿಲ್ಲವೇ!

  'ಬ್ರಹ್ಮ' ಚಿತ್ರದ ಹಾಡಿಗೆ ನಟಿ ಪ್ರಣೀತಾ ಜೊತೆ ಕುಣಿದಿದ್ದಾರೆ. ಗೀತ ಸಾಹಿತಿ ಕವಿರಾಜ್ ಬರೆದಿರುವ "ಟಿಂಗು ಟಿಂಗು ಟಿಂಗು ಸಮ್ ಥಿಂಗು ಹ್ಯಾಪನಿಂಗು ಎದೆಯೊಳಗೆ ರಿಂಗಿಂಗು..." ಎಂಬ ಹಾಡಿನ ಚಿತ್ರೀರಣ ಮುಂಬೈನಲ್ಲಿ ನಿರ್ಮಿಸಿದ್ದ ಅದ್ದೂರಿ ಸೆಟ್ ನಲ್ಲಿ ನಡೆಯಿತು.

  ಮೂರು ದಿನಗಳ ಕಾಲ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ಉಪೇಂದ್ರ, ಪ್ರಣೀತಾ ಹೆಜ್ಜೆ ಹಾಕಿದ್ದಾರೆ. ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶನ ಮಾಡಿರುವುದು ವಿಶೇಷ. ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಚಿತ್ರವಿದು.

  ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು (ಅಮೃತಹಳ್ಳಿ) ನಿರ್ಮಿಸುತ್ತಿರುವ ಚಿತ್ರದಲ್ಲಿ ಪ್ರಣೀತಾ, ರಂಗಾಯಣರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್, ಶರಣ್, ಪದ್ಮಜಾ ರಾವ್, ಸುಚೇಂದ್ರ ಪ್ರಸಾದ್ ಮುಂತಾದರಿದ್ದಾರೆ.

  ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ 'ಬ್ರಹ್ಮ' ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

  English summary
  Real Star Upendra's historical drama romance film 'Brahma' song shot at Mumbai recently. The song lyrics penned by Kaviraj and choreography by Chinny Prakash. Upendra has essaying dual role and Pranitha Subhash in the lead role, while actors Nasser, Sonu Sood, Rahul Dev and Shayaji Shinde play other prominent roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X