For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರ 'ಬ್ರಹ್ಮ' ಪೋಸ್ಟರ್ ರೆಡಿ

  By Rajendra
  |

  'ಟೋಪಿವಾಲ' ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ ಚಿತ್ರಕ್ಕೆ 'ಬ್ರಹ್ಮ' ಎಂದು ಹೆಸರಿಟ್ಟಿರುವುದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ಉಪ್ಪಿಗೆ ಆಕ್ಷನ್ ಕಟ್ ಹೇಳುತ್ತಿರುವವರು ಆರ್ ಚಂದ್ರು. ಇದೇ ಸಂದರ್ಭದಲ್ಲಿ ಅವರ 'ಚಾರ್ ಮಿನಾರ್' ಚಿತ್ರ ಅರ್ಧ ಸೆಂಚುರಿ ಬಾರಿಸಿದ್ದು ತೆಲುಗಿನಲ್ಲೂ ಸಿದ್ಧವಾಗುತ್ತಿದೆ.

  ' ಬ್ರಹ್ಮ' ಚಿತ್ರ ಮೇ ತಿಂಗಳಲ್ಲಿ ಸೆಟ್ಟೇರಲಿದೆ. 'The Leader' ಎಂಬುದು ಚಿತ್ರದ ಅಡಿಬರಹ. ಈಗ ಚಿತ್ರದ ಪೋಸ್ಟರನ್ನು ನಿರ್ದೇಶಕ ಆರ್ ಚಂದ್ರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಅಭಿಮಾನಿಗಳ ಶುಭ ಹಾರೈಕೆಗಳಿಗೆ ಸ್ವಾಗತ ಕೋರಿದ್ದಾರೆ.

  ಚಿತ್ರದ ಶೀರ್ಷಿಕೆ ವಿನ್ಯಾಸ ಚೆನ್ನಾಗಿಯೇ ಮೂಡಿಬಂದಿದೆ. ಇದನ್ನು ಯಾರು ಡಿಸೈನ್ ಮಾಡಿದರು ಎಂಬ ಮಾಹಿತಿ ಸದ್ಯಕ್ಕಿಲ್ಲ. ಆದರೆ ತೆಲುಗಿನ ಕೆಲವು ಪೋಸ್ಟರ್ ಗಳು ಇದೇ ವಿನ್ಯಾಸದಲ್ಲಿ ಬಂದಿದ್ದವು. ಬಹುಶಃ ಅದೇ ಸ್ಫೂರ್ತಿಯಿಂದ ಈ ವಿನ್ಯಾಸ ಜನ್ಮ ತಾಳಿರಬಹುದು.

  ಅಂದಹಾಗೆ ಬ್ರಹ್ಮ ಚಿತ್ರ ಕನ್ನಡ, ತೆಲುಗು ದ್ವಿಭಾಷಾ ಚಿತ್ರ. ಪಾತ್ರವರ್ಗ ಹಾಗೂ ಚಿತ್ರದ ನಾಯಕಿ ಆಯ್ಕೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 'ಬ್ರಹ್ಮ' ಚಿತ್ರಕ್ಕೂ ಮುನ್ನ ಉಪ್ಪಿ ಹೋಂ ಪ್ರೊಡಕ್ಷನ್ ಚಿತ್ರ ಸೆಟ್ಟೇರಬೇಕಾಗಿತ್ತು.

  ಆದರೆ ಆರ್ ಚಂದ್ರು ಅವರ ಕಥೆ ಕೇಳಿದ ಬಳಿಕ ತಮ್ಮ ಹೋಂ ಪ್ರಾಜೆಕ್ಟ್ ಚಿತ್ರವನ್ನು ಪಕ್ಕಕ್ಕಿಟ್ಟು 'ಬ್ರಹ್ಮ' ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಉಪ್ಪಿ. ಎರಡೂ ಭಾಷೆಗಳಿಗೆ ಹೊಂದುವ ಕಲಾವಿದರು ಚಿತ್ರದಲ್ಲಿರುತ್ತಾರೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ ಎನ್ನುತ್ತಾರೆ ಚಂದ್ರು.

  ಈ ಚಿತ್ರವನ್ನು ಮಂಜುನಾಥ ಬಾಬು ಅವರು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ದ್ವಿಭಾಷಾ ಚಿತ್ರ ಎಂದರೆ ಅಷ್ಟು ಖರ್ಚಾಗಿಯೇ ಆಗುತ್ತದೆ ಬಿಡಿ. ತೆಲುಗು ಚಿತ್ರಕ್ಕೂ ಚಂದ್ರು ಅವರೇ ಸಾರಥ್ಯ ವಹಿಸಲಿದ್ದಾರೆ. ಸದ್ಯಕ್ಕೆ ಅವರ 'ಚಾರ್ ಮಿನಾರ್' ಚಿತ್ರವೂ ತೆಲುಗಿನಲ್ಲಿ ಮೂಡಿಬರುತ್ತಿದೆ. (ಒನ್ಇಂಡಿಯಾ ಕನ್ನಡ)

  English summary
  Real Star Upendra's upcoming film Brahma, The Leader poser is ready. Director R Chandru posted it on his Facebook account. It's a Kannada, Telugu bilingual film. The cast and crew yet to be finalised.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X