For Quick Alerts
  ALLOW NOTIFICATIONS  
  For Daily Alerts

  'ರಾಗಿಣಿ ಐಪಿಎಸ್' ಚಿತ್ರದಲ್ಲಿ ಉಪೇಂದ್ರ ಡೈಲಾಗ್

  By Rajendra
  |

  ಇದೇ ಮೊಟ್ಟ ಮೊದಲ ಬಾರಿಗೆ ರಾಗಿಣಿ ದ್ವಿವೇದಿ ಖಾಕಿ ತೊಟ್ಟಿದ್ದಾರೆ. ರಾಗಿಣಿ ಐಪಿಎಸ್ ಚಿತ್ರದ ಮೂಲಕ ಕೈಯಲ್ಲಿ ಲಾಠಿ, ರಿವಾಲ್ವರ್ ಹಿಡಿದು ಖಾಕಿ ಖದರ್ ತೋರಿಸಲು ಬರುತ್ತಿದ್ದಾರೆ. ಕೆ.ಮಂಜು ನಿರ್ಮಿಸುತ್ತಿರುವ ಸಾಹಸಮಯ ಚಿತ್ರದ ಶೂಟಿಂಗ್ ಪೂರ್ಣವಾಗಿದೆ.

  ಆದರೆ ಇದೀಗ ಚಿತ್ರಕ್ಕೆ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಹುಬ್ಬಳ್ಳಿ ಶೈಲಿಯಲ್ಲಿ ಡೈಲಾಗ್ ಹೊಡೆದಿದ್ದಾರೆ. ಇದು ಚಿತ್ರದ ಆರಂಭದಲ್ಲಿ ಮೂಡಿಬರಲಿದೆ. ಈ ಮೂಲಕ 'ರಾಗಿಣಿ ಐಪಿಎಸ್' ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

  ಹುಬ್ಬಳ್ಳಿ-ಧಾರವಾಡ ಹಿನ್ನೆಲೆಯಲ್ಲಿ ಇಡೀ ಚಿತ್ರವೂ ಇರುತ್ತದೆ. ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಪ್ರಸಿದ್ಧಿಯನ್ನು, ಖ್ಯಾತನಾಮರನ್ನು, ಪ್ರೇಕ್ಷಣೀಯ ಸ್ಥಳಗಳನ್ನು, ವಿದ್ಯಾ ಸಂಸ್ಥೆಗಳ, ವಾಣಿಜ್ಯ ನಗರಿ ಕುರಿತಾಗಿ ಸಿದ್ದಪಡಿಸಿರುವ ಸಂಭಾಷಣೆಯನ್ನು ಉಪೇಂದ್ರ ಹೇಳಿದ್ದಾರೆ.

  ಇಂತಹ ಸ್ಥಳದಲ್ಲಿ ವ್ಯಾಗ್ರನೊಬ್ಬನಿದ್ದಾನೆ ಎಂದು ಎರಡರಿಂದ ಮೂರು ನಿಮಿಷಗಳ ಮಾತುಗಳನ್ನು ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಯಿತು. ಆನಂದ್ ಪಿ ರಾಜು ಅವರ ನಿರ್ದೇಶನದಲ್ಲಿ ಗ್ಲಾಮರ್ ನಟಿ ಒಂದು ಕಟುವಾದ ಪೋಲೀಸು ಅಧಿಕಾರಿಯಾಗಿ ರಾಗಿಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

  ಇದು ಸಾಮಾಜಿಕ ಪಿಡುಗು ಹಾಗೂ ಇನ್ನಿತರೆ ವಿಚಾರಗಳನ್ನು ಸೇರಿಸಿದ ಹೆಣೆದ ಕಥಾನಕ. ಅಂತಹ ಸ್ಥಿತಿಯಲ್ಲಿ ಪೋಲೀಸು ಅಧಿಕಾರಿ ತೆಗೆದುಕೊಳ್ಳುವ ನಿರ್ಣಯ ಏನು ಎಂಬುದು ಚಿತ್ರದ ಕಥಾಹಂದರ. ಕೆ ವಿ ರಾಜು ಅವರ ಹರಿತವಾದ ಸಂಭಾಷಣೆ ಚಿತ್ರಕ್ಕಿದೆ.

  ನಂದಕುಮಾರ್ ಅವರ ಛಾಯಾಗ್ರಹಣ, ಫರ್ಹಾನ್ ರೋಶನ್(ಈ ಹಿಂದೆ ಎಮಿಲ್) ಅವರ ಸಂಗೀತ, ಕೌರವ ವೆಂಕಟೇಶ್, ಮಾಸ್ ಮಾಧ ಅವರ ಸಾಹಸ ದೃಶ್ಯಗಳಿವೆ. ಇಮ್ರಾನ್ ಸರ್ದಾರಿಯ ಅವರ ನೃತ್ಯ ನಿರ್ದೇಶನವಿದ್ದು ರಾಜೇಶ್ ರಾಮನಾಥ್ ಅವರು ರೀರೆಕಾರ್ಡಿಂಗ್ ಚಿತ್ರಕ್ಕಿದೆ.

  ಹುಬ್ಬಳ್ಳಿ, ಧಾರವಾಡ ಸುತ್ತ ಮುತ್ತ ಚಿತ್ರೀಕರಣ ಮಾಡಿರುವ 'ರಾಗಿಣಿ ಐಪಿಎಸ್' ಚಿತ್ರದಲ್ಲಿ ಅವಿನಾಶ್, ನಾರಾಯಣ ಸ್ವಾಮಿ, ಪೆಟ್ರೋಲ್ ಪ್ರಸನ್ನ, ವೀಣಾ ಸುಂದರ್, ವಿವೇಕ್ ಪಂಡಿತ್, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ಪೋಷಕ ಪಾತ್ರಗಳಲ್ಲಿದ್ದಾರೆ.(ಒನ್ಇಂಡಿಯಾ ಕನ್ನಡ)

  English summary
  Real Star Upendra renders his voice to Kannada film 'Ragini IPS'. The film directed by Anand P.Raju. K.Manju has produced the film under K.Manju Cinema banner. Ragini Dwivedi is in the lead role. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X