For Quick Alerts
  ALLOW NOTIFICATIONS  
  For Daily Alerts

  ದೇಣಿಗೆ ಪಡೆಯುವುದಿಲ್ಲ ಎಂದ ಉಪೇಂದ್ರ: ಕಾರಣವೇನು?

  |

  ಕೋವಿಡ್ ಕಾಲದಲ್ಲಿ ಹಲವು ಸೆಲೆಬ್ರಿಟಿಗಳು ಹಲವು ಮಾದರಿಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ನಟ ಉಪೇಂದ್ರ ಸಹ ಅಗತ್ಯವಿರುವವರಿಗೆ ಆಹಾರ ಧಾನ್ಯ, ದಿನಸಿ ಇನ್ನಿತರೆ ವಸ್ತುಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.

  ಗೆದ್ದ ಮೇಲೆ ನಿಮ್ಮ ಪಕ್ಷದವರೇ ನಿಮಗೆ ಉಲ್ಟಾ ಹೊಡೆದರೆ ಉಪ್ಪಿ ಏನ್ ಮಾಡ್ತಾರೆ | Filmibeat Kannada

  ಉಪೇಂದ್ರ, ತಮ್ಮ ಫೌಂಡೇಶನ್ ಮೂಲಕ ಸ್ವಂತ ಖರ್ಚಿನಿಂದ ಹಾಗೂ ಸೆಲೆಬ್ರಿಟಿಗಳು, ಸಾರ್ವಜನಿಕರು ನೀಡಿದ ದೇಣಿಗೆ ಹಣ ಬಳಸಿ ರೈತರಿಂದ ತರಕಾರಿ, ಹಣ್ಣು ಇನ್ನಿತರೆ ವಸ್ತುಗಳನ್ನು ಖರೀದಿಸಿ ಉಚಿತವಾಗಿ ವಿತರಣೆ ಮಾಡುತ್ತಿದ್ದರು. ತರಕಾರಿ-ಹಣ್ಣು ಮಾತ್ರವೇ ಅಲ್ಲದೆ ದಿನಸಿ, ಆಹಾರ, ಆಹಾರ ಸಾಮಗ್ರಿ ಇತರೆ ವಸ್ತುಗಳನ್ನು ವಿತರಣೆ ಮಾಡಿದ್ದರು.

  ಆದರೆ ಉಪೇಂದ್ರ, ಇನ್ನು ಮುಂದೆ ತಾವು ದೇಣಿಗೆ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಉಪೇಂದ್ರ ಫೌಂಡೇಶನ್, 'ಇನ್ನು ಮುಂದೆ ನಾವು ಹಣಕಾಸಾಗಲಿ ಇತರೆ ವಸ್ತುಗಳನ್ನಾಗಲಿ ದೇಣಿಗೆ ಪಡೆಯುವುದಿಲ್ಲ' ಎಂದಿದೆ.

  ಯಾರನ್ನೂ ಕೇಳದಿದ್ದರೂ ಕೊಟ್ಟಿದ್ದಾರೆ: ಉಪೇಂದ್ರ

  ಯಾರನ್ನೂ ಕೇಳದಿದ್ದರೂ ಕೊಟ್ಟಿದ್ದಾರೆ: ಉಪೇಂದ್ರ

  'ಇಲ್ಲಿಯವರೆಗೆ ನಾವು ಯಾರನ್ನೂ ಕೇಳದೇ ಇದ್ದರೂ ಹೃದಯವಂತರು ತರಕಾರಿ, ಹಣ್ಣು, ಇತರೆ ಸಾಮಗ್ರಿಗಳನ್ನು ನೀಡಿದ್ದಾರೆ. ಉಪೇಂದ್ರ ಫೌಂಡೇಶನ್‌ಗೆ ಹಣಕಾಸು ನೆರವು ಸಹ ನೀಡಿದ್ದಾರೆ. ಅವುಗಳನ್ನೆಲ್ಲ ಅವಶ್ಯಕತೆ ಇದ್ದವರಿಗೆ ವಿತರಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಮಾಡುತ್ತಿದ್ದೇವೆ. ಸಹೃದಯತೆ ಮೆರೆದ ತಮ್ಮೆಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ ಉಪೇಂದ್ರ.

  'ಇನ್ನು ಮುಂದೆ ಧನ ಸಹಾಯ ಸ್ವೀಕರಿಸುವುದಿಲ್ಲ'

  'ಇನ್ನು ಮುಂದೆ ಧನ ಸಹಾಯ ಸ್ವೀಕರಿಸುವುದಿಲ್ಲ'

  ಆದರೆ ಉಪೇಂದ್ರ ಫೌಂಡೇಶನ್‌ ಇನ್ನು ಮುಂದೆ ಯಾವುದೇ ಕೊಡುಗೆಗಳನ್ನು, ಧನ ಸಹಾಯವನ್ನು ಪಡೆಯುವುದಿಲ್ಲ. ಜೊತೆಗೆ ಯಾವುದೇ ಇನ್ನಿತರೆ ಸಹಾಯವನ್ನೂ ದೇಣಿಗೆಯಾಗಿ ಪಡೆಯುವುದಿಲ್ಲ. ಈವರೆಗೆ ಜನ ಕೊಟ್ಟದ್ದು, ಉಪೇಂದ್ರ ಖರ್ಚು ಮಾಡಿದ್ದು, ನಾವು ಹಂಚಿದ್ದು, ವೆಚ್ಚ ಮಾಡಿದ್ದು ಎಲ್ಲದರ ಲೆಕ್ಕವನ್ನು ಕೆಲವೇ ದಿನಗಳಲ್ಲಿ ಜನರ ಮುಂದಿಡುತ್ತೇವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

  ನೀವೇ ಗುರುತಿಸಿ ಸಹಾಯ ಮಾಡಿ: ಉಪೇಂದ್ರ

  ನೀವೇ ಗುರುತಿಸಿ ಸಹಾಯ ಮಾಡಿ: ಉಪೇಂದ್ರ

  ಇನ್ನು ಮುಂದೆ ನೀವುಗಳು ಯಾರಿಗಾದರೂ ಸಹಾಯ ಮಾಡಬೇಕು ಎಂದುಕೊಂಡರೆ ನಿಮ್ಮ ಸುತ್ತ-ಮುತ್ತಲಿನಲ್ಲಿ ಯಾರಿಗೆ ಅವಶ್ಯಕತೆ ಇದೆಯೋ ಅವರನ್ನು ಗುರುತಿಸಿ ನೀವೆ ನೇರವಾಗಿ ಅವರಿಗೆ ಸಹಾಯ ಮಾಡಿ ಎಂದು ಉಪೇಂದ್ರ ಮನವಿ ಮಾಡಿದ್ದಾರೆ. ಜನರು ತಾವೇ ಅಗತ್ಯ ಇರುವವರಿಗೆ ನೆರವು ನೀಡಲಿ ಎಂಬ ಕಾರಣಕ್ಕೆ ಉಪೇಂದ್ರ ಈ ನಿರ್ಧಾರ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

  ಹಲವು ನಟರು, ರೈತರು, ಸಾರ್ವಜನಿಕರು ಸಹಾಯ ಮಾಡಿದ್ದರು

  ಹಲವು ನಟರು, ರೈತರು, ಸಾರ್ವಜನಿಕರು ಸಹಾಯ ಮಾಡಿದ್ದರು

  ನಟ ಉಪೇಂದ್ರ ಆರಂಭಿಸಿದ್ದ ನೆರವು ಅಭಿಯಾನಕ್ಕೆ ನಟ ಸಾಧು ಕೋಕಿಲ, ನಟಿ ಸರೋಜಾದೇವಿ, ಶೋಭರಾಜ್, ಪವನ್ ಒಡೆಯರ್, ನಟಿ ಮಾನ್ವಿತಾ ಇನ್ನೂ ಹಲವಾರು ಮಂದಿ ನೆರವು ನೀಡಿದ್ದರು. ಉಪೇಂದ್ರ, ರಾಜ್ಯದ ವಿವಿಧ ಜಿಲ್ಲೆಗಳ ರೈತರಿಂದ ಅವರು ಬೆಳೆದ ಬೆಳೆಯನ್ನು ಖರೀದಿಸಿ ಅವಶ್ಯಕತೆ ಇದ್ದವರಿಗೆ ಉಚಿತವಾಗಿ ವಿತರಣೆ ಮಾಡಿದ್ದರು.

  English summary
  Upendra said that his foundation will not accepting donation from now onwards. He also said foundation will publisize the expenditure information soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X