For Quick Alerts
  ALLOW NOTIFICATIONS  
  For Daily Alerts

  ರಾಘಣ್ಣ ಭೇಟಿ ಮಾಡಿದ ಉಪೇಂದ್ರ: ನೆನಪಾಗ್ತಿದೆ 'ಸ್ವಸ್ತಿಕ್'

  |

  ಐ ಲವ್ ಯೂ ಸಿನಿಮಾದ ಯಶಸ್ಸಿನಲ್ಲಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಡಾ ರಾಜ್ ಕುಟುಂಬದ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಡಾ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಉಪ್ಪಿ, ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.

  ರಾಘಣ್ಣ ಮನೆಗೆ ಉಪೇಂದ್ರ ಹೋಗಿದ್ದ ವಿಷ್ಯವನ್ನ ಸ್ವತಃ ರಾಘಣ್ಣ ಅವರೇ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ''ನಮ್ಮ ಮನೆಗೆ ಬಂದಿದ್ದ ಉಪೇಂದ್ರ ಅವರಿಗೆ ಥ್ಯಾಂಕ್ಸ್. ನಿಮ್ಮ ಸರಳತೆಯ ಸ್ವಭಾವ ಬದಲಾಗಿಲ್ಲ. ಹಾಗೆ ಉಳಿದಿದೆ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

  ಐ ಲವ್ ಯೂ ಚಿತ್ರ ನೋಡಿ ರಚಿತಾ ರಾಮ್ ತಾಯಿ ಹೇಳಿದ್ದೇನು?

  ಉಪೇಂದ್ರ ಅವರು ಡಾ ರಾಜ್ ಕುಮಾರ್ ಅವರ ಮನೆಗೆ ಹೋಗಿದ್ದರ ಉದ್ದೇಶವೇನು ಎಂಬುದು ಸದ್ಯಕ್ಕೆ ಮಾಹಿತಿ ಇಲ್ಲ. ಯಾವುದಾದರೂ ಸಿನಿಮಾ ಬಗ್ಗೆ ಮಾತುಕತೆ ಮಾಡಲು ಹೋಗಿದ್ದರಾ ಅಥವಾ ಸಾಮಾನ್ಯ ಭೇಟಿಯಾಗಿತ್ತಾ ಎಂಬುದು ಈಗ ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.

  ರಾಘಣ್ಣನಿಗೆ ಸ್ಟ್ರೋಕ್ ಆದ ಆ ಕರಾಳ ಕ್ಷಣದಲ್ಲಿ ದೇವತೆಯಂತೆ ಬಂದ್ರು ಆಕೆ.!

  ಉಪ್ಪಿ ಮತ್ತು ರಾಘಣ್ಣ ಭೇಟಿ ನೋಡಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದಿದ್ದ ಸ್ವಸ್ತಿಕ್ ಚಿತ್ರವನ್ನ ನೆನಪಿಸಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಉಪೇಂದ್ರ ನಿರ್ದೇಶನದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದ ಈ ಚಿತ್ರ ಅಂದಿನ ಸಮಯದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು.

  ಹೀಗಾಗಿ, ಉಪ್ಪಿ ಮತ್ತು ರಾಘಣ್ಣ ಅವರ ಭೇಟಿ ನೋಡಿ ''ಸ್ವಸ್ತಿಕ್ ಸೂಪರ್, ಇಂತಹ ಸಿನಿಮಾ ಮತ್ತೆ ಮಾಡಿ'' ಎಂದು ಕಾಮೆಂಟ್ ಮಾಡಿ ಮನವಿ ಮಾಡಿದ್ದಾರೆ. 1999ರಲ್ಲಿ ಸ್ವಸ್ತಿಕ್ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಂದು ಸುಮಾರು 19 ವರ್ಷ ಆಗಿದೆ.

  English summary
  Kannada actor Upendra has visit to dr rajkumar home and he met raghavendra rajkumar. Why he has meet? Any reason?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X