»   » ಉಪೇಂದ್ರ 'ಸೂಪರ್' ಚಿತ್ರಕ್ಕೆ ನಯನತಾರಾ

ಉಪೇಂದ್ರ 'ಸೂಪರ್' ಚಿತ್ರಕ್ಕೆ ನಯನತಾರಾ

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ತಾರೆ ನಯನತಾರಾ ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತು ಕಡೆಗೂ ನಿಜವಾಗಿದೆ. ಉಪೇಂದ್ರ ನಿರ್ದೇಶಿಸಲಿರುವ 'ಸೂಪರ್' ಚಿನ್ಹೆಯ ಚಿತ್ರಕ್ಕೆ ನಯನತಾರಾ ನಾಯಕಿ. ಶೇಷಾದ್ರಿಪುರಂನ ಮಹಾಲಕ್ಷ್ಮಿ ದೇವಾಲಯದಲ್ಲಿ 'ಸೂಪರ್' ಚಿತ್ರದ ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು.

ಹಾಟ್ ಗರ್ಲ್ ನಯನತಾರಾ ಫೋಟೋ ಸೆಷನ್ ನಲ್ಲಿ ಭಾಗವಹಿಸಿದ್ದರು. ಬರೋಬ್ಬರಿ ಹತ್ತು ವರ್ಷಗಳ ಬಳಿಕ ಉಪೇಂದ್ರ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ. ಫೆಬ್ರವರಿ 15ರಿಂದ 'ಸೂಪರ್' ಚಿತ್ರದ ಮುಹೂರ್ತ ನೆರವೇರಲಿದೆ. ಈ ಚಿತ್ರವನ್ನು ಧೀರ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ.

ನಯನತಾರಾ ಅವರನ್ನು ಈ ಹಿಂದೆಯೂ ಹಲವಾರು ಬಾರಿ ಕನ್ನಡಕ್ಕೆ ಕರೆತರುವ ಪ್ರಯತ್ನ ಮಾಡಲಾಗಿತ್ತು. ಆದರೆ ಆ ಪ್ರಯತ್ನಗಳೆಲ್ಲಾ ವಿಫಲವಾಗಿದ್ದವು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಕೀಚಕ' ಚಿತ್ರದಲ್ಲಿ ನಯನತಾರಾ ನಟಿಸಬೇಕಾಗಿತ್ತು. ಕಡೆಗೂ ಉಪೇಂದ್ರ ಚಿತ್ರಕ್ಕೆ ನಯನತಾರಾ ಒಲಿದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada