»   » ಉಪ್ಪಿ ಮುಂದಿನ ಸಿನಿಮಾ ಟೈಟಲ್ ಏನು ಗೊತ್ತಾ?

ಉಪ್ಪಿ ಮುಂದಿನ ಸಿನಿಮಾ ಟೈಟಲ್ ಏನು ಗೊತ್ತಾ?

By: ಜೀವನರಸಿಕ
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರರ ಮುಂದಿನ ಸಿನಿಮಾ ಯಾವ್ದು ಅನ್ನೋ ಕುತೂಹಲ ಎಲ್ಲ ಸಿನಿಪ್ರೇಮಿಗಳಲ್ಲೂ ಇದೆ. ಸ್ವತಃ ಉಪೇಂದ್ರ ಕೂಡ ಈ ಕುತೂಹಲಕ್ಕೆ ಬ್ರೇಕ್ ಹಾಕಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮಾಡಿದ್ದ ನಾಗಣ್ಣ ಈ ಚಿತ್ರವನ್ನ ನಿರ್ದೇಶಿಸ್ತಿದ್ದಾರೆ ಅನ್ನುವ ಮಾಹಿತಿ ಹೊರಬಿದ್ದಿದೆ.

ಒಳ್ಳೆಯ ಕಥೆ ಸಿಗದೆ ಉಪ್ಪಿ ಅವಸರವಸರವಾಗಿ ಯಾವುದನ್ನೂ ಮಾಡಲ್ಲ. ಅದೇ ಉಪ್ಪಿ ಯುನೀಕ್ನೆಸ್ಸು. ಹಾಗಾಗಿ ಉಪ್ಪೀನೇ ಎಚ್ಚರಿಕೆ ವಹಿಸಿ ಸುದ್ದಿ ಮಾಡೋ ಮೊದಲು ಸರಿಯಾದ ಲೆಕ್ಕಾಚಾರ ಬೇಕು ಅಂತ ಸುಮ್ಮನಾಗಿದ್ದರಂತೆ. ಇನ್ನು ಮುಂದಿನ ಚಿತ್ರದ ಟೈಟಲ್ `ಚಾಂದಿನಿ' ಅನ್ನೋ ಮಾತು ಉಪ್ಪಿ ಆತ್ಮೀಯ ವಲಯದಲ್ಲಿ ಕೇಳಿಬರ್ತಿದೆ.[ಉಪ್ಪಿ ಜೊತೆ 'ರಂಗಿ' ಬೆಡಗಿ ಅವಂತಿಕಾ ಶೆಟ್ಟಿ ಡ್ಯುಯೆಟ್ ಹಾಡ್ತಾರಾ?]

Upendra new Kannada movie title disclosed

ಉಪ್ಪಿಯ ಸೂಪರ್ ಹಿಟ್ ಸಿನಿಮಾ 'A' ಒಂದು ಮುಖ್ಯ ಪಾತ್ರವಾಗಿದ್ದ ಚಾಂದಿನಿ ಪ್ರೇಕ್ಷಕರನ್ನ ಹುಚ್ಚೆಬ್ಬಿಸಿತ್ತು. ಅಂತಹಾ ಚಾಂದಿನಿ ಅನ್ನೋ ಹೆಸ್ರಲ್ಲೇ ಚಲೀ ಗಯೀ ಚಾಂದಿನಿ ಅನ್ನೋ ಸೂಪರ್ ಹಿಟ್ ಹಾಡು ಕೂಡ ಚಿತ್ರಪ್ರೇಮಿಗಳಿಗೆ ಹುಚ್ಚು ಹಿಡಿಸಿತ್ತು. ಈಗ ಮತ್ತೆ ಉಪ್ಪಿ ಚಾಂದಿನಿಗೆ ಛಮಕ್ ಕೊಡ್ತಾರೆ ಅಂತಿದೆ ಮೂಲಗಳು.[ಉಪೇಂದ್ರ 'ಉಪ್ಪಿ-ಟ್ಟು' ಗೆ ವಿದೇಶದಲ್ಲಿ ಭಾರಿ ಪ್ರಶಂಸೆ]

ನೀನು ಇನ್ನೊಬ್ಬರನ್ನ ಮದ್ವೆ ಆಗು ಆದ್ರೆ ನನ್ನನ್ನೇ ಪ್ರೀತಿ ಮಾಡು. ನಾನು ಮದ್ವೆ ಆಗೋದು ಇನ್ನೊಬ್ಬಳನ್ನ ಆದ್ರೆ ಪ್ರೀತಿ ಮಾಡೋದು ಮಾತ್ರ ನಿನ್ನನ್ನೇ ಅಂತ ಉಪ್ಪಿ ಚಾಂದಿನಿಗೆ ಹೇಳೋ ಟಿಪಿಕಲ್ ಡೈಲಾಗ್ಗೆ 2000ನೇ ಇಸವಿಯಲ್ಲಿ ಜನ ತಲೆ ಕೆರೆದುಕೊಂಡಿದ್ರು. ಆದರೆ, ಈ ಚಿತ್ರದ ನಾಯಕಿ ಯಾರೆಂದು ಇನ್ನೂ ನಿಗದಿಯಾಗಿಲ್ಲ. ಯಾರಾಗಬಹುದು, ಗೆಸ್ ಮಾಡಲು ಶುರು ಮಾಡಿ.

English summary
Real Star Upendra's new Kannada movie title is disclosed. It is Chandani, to be directed by Naganna, who also directed Darshan's Krantiveera Sangolli Rayanna. Chandani was a character in Upendra's A movie, played by actress Chandani.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada