twitter
    For Quick Alerts
    ALLOW NOTIFICATIONS  
    For Daily Alerts

    ''ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ'' ಎಂದ ಉಪೇಂದ್ರ

    |

    ಇತ್ತೀಚಿಗಷ್ಟೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಒಂದು ಮಹತ್ವದ ನಿರ್ಣಯ ಕೈಗೊಂಡರು. ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಔದ್ಯೋಗಿಕ ವಲಯದಲ್ಲಿ ಶೇ. 75 ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವಂತೆ ಕಾನೂನು ಜಾರಿಗೆ ತಂದಿದ್ದರು.

    ಈ ರೀತಿಯ ಕಾನೂನು ಕರ್ನಾಟಕದಲ್ಲಿಯೂ ಬರಬೇಕು ಎನ್ನುವುದು ಅನೇಕ ವರ್ಷಗಳಿಂದ ಇರುವ ಕೂಗು. ಆದರೆ, ಇದುವರೆಗೆ ಕನ್ನಡ ನಾಡಿನಲ್ಲಿ ಈ ರೀತಿಯ ಒಂದು ಕಾನೂನು ಬಂದಿಲ್ಲ.

    ಖಾಸಗಿ ಸಂಸ್ಥೆಯಲ್ಲೂ ಸ್ಥಳೀಯರಿಗೆ ಮೀಸಲಾತಿ: ಜಗನ್ ಮಹತ್ವದ ನಿರ್ಣಯ

    ''ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ'' ಎನ್ನುವ ಉದ್ದೇಶದೊಂದಿಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕೆ ನಟ, ಯುಪಿಪಿ ಪಕ್ಷದ ಅಧ್ಯಕ್ಷ ಉಪೇಂದ್ರ ಬೆಂಬಲ ನೀಡಿದ್ದಾರೆ.

    Upendra Supports Karnataka Jobs For Kannadigas Protest

    ಈ ಬಗ್ಗೆ ಮಾತನಾಡಿರುವ ಉಪೇಂದ್ರ ''ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಮೀಸಲಾಗಲಿ ಎನ್ನುವುದು ಬಹಳ ವರ್ಷಗಳಿಂದ ಇರುವ ಬೇಡಿಕೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲೇ ಬೇಕು. ಅದು ಎಲ್ಲರ ಕನಸು. ಇದರ ಬಗ್ಗೆ ಹೋರಾಟ ನಡೆಯುತ್ತಿದ್ದು, ನಾನು ಕೂಡ ಇದರಲ್ಲಿ ಭಾಗಿಯಾಗುತ್ತಿದ್ದೇನೆ.'' ಎಂದು ತಿಳಿಸಿದ್ದಾರೆ.

    ಆಗಸ್ಟ್ 14 ಮತ್ತು 15 ರಂದು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಗಾಂಧಿ ಪ್ರತಿಮೆ ಮುಂಭಾಗ ಉಪವಾಸ ಮಾಡಲಾಗುತ್ತದೆ. ಈ ಹೋರಾಟದಲ್ಲಿ ಕನ್ನಡದ ಯುವಕ ಯುವತಿಯರು ಭಾಗಿಯಾಗಿ ಎಂದು ಉಪೇಂದ್ರ ಮನವಿ ಮಾಡಿದ್ದಾರೆ.

    ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಉಪೇಂದ್ರ 5 ಲಕ್ಷ ನೆರವು ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಉಪೇಂದ್ರ 5 ಲಕ್ಷ ನೆರವು

    ನಟ ಉಪೇಂದ್ರ ಜೊತೆಗೆ ಹಾಸ್ಯ ನಟ ಚಿಕ್ಕಣ್ಣ, ಬಿಗ್ ಬಾಸ್ ಸ್ಪರ್ಧಿಗಳಾದ ಪ್ರಥಮ್, ದಿವಕರ್ ಕೂಡ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

    English summary
    Kannada actor, UPP precedent Upendra supports Karnataka Jobs For Kannadigas protest.
    Monday, August 12, 2019, 17:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X