For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದಲ್ಲಿ ಕ್ರಿಕೆಟಿಗ ವೆಂಕಿ ಹೊಸ ಇನ್ನಿಂಗ್ಸ್

  By ರವಿಕಿಶೋರ್
  |

  ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕನ್ನಡ ಬೆಳ್ಳಿಪರದೆ ಮೇಲೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಎಸ್ ಮೋಹನ್ ಅವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ವೆಂಕಿ ಅವರದು ನಿರ್ಣಾಯಕ ಪಾತ್ರವಾಗಿದ್ದು ಕೋಚ್ ಆಗಿ ಅವರು ಕಾಣಿಸಲಿದ್ದಾರೆ.

  ಚಿತ್ರದ ಹೆಸರು 'ಸಚಿನ್ ತೆಂಡೂಲ್ಕರ್ ಅಲ್ಲ'. ದ್ವಿಭಾಷಾ ಚಿತ್ರವಾಗಿರುವ ಈ ಸಿನಿಮಾ ಏಕಕಾಲಕ್ಕೆ ಕನ್ನಡ, ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ. ವೆಂಕಟೇಶ್ ಪ್ರಸಾದ್ ಅವರ ಜನಪ್ರಿಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಬಣ್ಣಹಚ್ಚಿಲ್ಲ. ಚಿತ್ರಕಥೆಗೆ ಪೂರಕವಾಗಿರುವ ಕಾರಣ ಅವರನ್ನು ಬಳಸಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕರು. [ಸಚಿನ್ ತೆಂಡೂಲ್ಕರ್ ಅಲ್ಲ ಇನ್ನಷ್ಟು ಚಿತ್ರಗಳು]

  ಇನ್ನು ಚಿತ್ರದ ಕಥೆಯೂ ಇಂಟರೆಸ್ಟಿಂಗ್ ಆಗಿದೆ. ಅದೇನೆಂದರೆ...ಸಚಿನ್ ತೆಂಡೂಲ್ಕರ್ ಅವರಂತೆ ತಾನೂ ಒಬ್ಬ ಮಹಾನ್ ಕ್ರಿಕೆಟಿಗನಾಗಬೇಕೆಂದು ಕನಸು ಕಾಣುವ ಹುಡುಗನೊಬ್ಬನ ಕಥೆ ಇದು. ಈ ಚಿತ್ರದಲ್ಲಿ ವೆಂಕಟೇಶ್ ಪ್ರಸಾದ್ ಕೋಚ್ ಆಗಿ ಕಾಣಿಸಲಿದ್ದಾರೆ. ಇನ್ನಷ್ಟು ವಿವರಗಳು ಸ್ಲೈಡ್ ನಲ್ಲಿ ನೋಡಿ.

  ವೆಂಕಟೇಶ್ ಪ್ರಸಾದ್ ಅವರೇ ಯಾಕೆ ಅಭಿನಯ

  ವೆಂಕಟೇಶ್ ಪ್ರಸಾದ್ ಅವರೇ ಯಾಕೆ ಅಭಿನಯ

  ಮೊದಲೇ ಚಿತ್ರದ ಕಥೆ ಕ್ರಿಕೆಟ್ ಕುರಿತದ್ದಾದ ಕಾರಣ ಚಿತ್ರದಲ್ಲಿ ಕ್ರಿಕೆಟ್ ನ ನಿಜವಾದ ಆಟಗಾರ ಇದ್ದರೆ ಅದಕ್ಕೆ ಇನ್ನಷ್ಟು ನೈಜತೆ ಬರುತ್ತದೆ ಎಂಬ ಉದ್ದೇಶಕ್ಕಾಗಿ ವೆಂಕಟೇಶ್ ಪ್ರಸಾದ್ ಅವರಿಗೆ ಅವಕಾಶ ಕೊಟ್ಟಿದ್ದೇವೆ ಎನ್ನುತ್ತಾರೆ ನಿರ್ದೇಶಕ ಮೋಹನ್.

  ಸಚಿನ್ ತೆಂಡೂಲ್ಕರ್ ಕನಸು ಕಾಣುವ ಸ್ನೇಹಿತ್

  ಸಚಿನ್ ತೆಂಡೂಲ್ಕರ್ ಕನಸು ಕಾಣುವ ಸ್ನೇಹಿತ್

  ಸಚಿನ್ ತೆಂಡೂಲ್ಕರ್ ಅವರಂತೆ ನಾನೂ ಕ್ರಿಕೆಟಿಗನಾಗಬೇಕೆಂದು ಕನಸು ಕಾಣುವ ಹುಡುಗನಾಗಿ ಮಾಸ್ಟರ್ ಸ್ನೇಹಿತ್ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಅವರು 'ಅಪ್ಪು ಪಪ್ಪು', 'ಕಂಸಾಳೆ ಕೈಸಾಳೆ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ತಾಯಿಯಾಗಿ ಸುಹಾಸಿನಿ ಮಣಿರತ್ನಂ

  ತಾಯಿಯಾಗಿ ಸುಹಾಸಿನಿ ಮಣಿರತ್ನಂ

  ಈ ಚಿತ್ರದ ಇನ್ನೊಂದು ಮಹತ್ವದ ಪಾತ್ರದಲ್ಲಿ ಸುಹಾಸಿನಿ ಮಣಿರತ್ನಂ ಕಾಣಿಸುತ್ತಿದ್ದಾರೆ. ಚಿತ್ರದಲ್ಲಿ ಅವರದು ತಾಯಿಯ ಪಾತ್ರ. ಮಾಸ್ಟರ್ ಸ್ನೇಹಿತ್ ಅವರಿಗೆ ತಾಯಿಯಾಗಿ ಅವರು ಕಾಣಿಸಲಿದ್ದಾರೆ.

  ರಿಯಲ್ ಕೋಚ್ ರೀಲ್ ನಲ್ಲೂ ಕೋಚ್

  ರಿಯಲ್ ಕೋಚ್ ರೀಲ್ ನಲ್ಲೂ ಕೋಚ್

  ಮಧ್ಯಮ ಶ್ರೇಯಾಂಕ ಬೌಲರ್ ಆಗಿ ವೆಂಕಟೇಶ್ ಪ್ರಸಾದ್ ತಮ್ಮ ಏಳು ವರ್ಷಗಳ ವೃತ್ತಿ ಬದುಕಿನಲ್ಲಿ 33 ಟೆಸ್ಟ್ ಹಾಗೂ 161 ಒನ್ ಡೇ ಮ್ಯಾಚ್ ಗಳನ್ನು ಆಡಿದ್ದಾರೆ. ಐಪಿಎಲ್ ಪಂದ್ಯಾವಳಿಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

  ಸಣ್ಣ ಪಾತ್ರದಲ್ಲಿ ಜಾವಗಲ್ ಶ್ರೀನಾಥ್

  ಸಣ್ಣ ಪಾತ್ರದಲ್ಲಿ ಜಾವಗಲ್ ಶ್ರೀನಾಥ್

  ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು. ತಾರಾಗಣದಲ್ಲಿ ಸುಧಾರಾಣಿ ಅವರು ಇದ್ದಾರೆ.

  ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ: ವೆಂಕಿ

  ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ: ವೆಂಕಿ

  ಮೋಹನ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಅವರು ಒಳ್ಳೆಯ ಸಂದೇಶ ನೀಡಲು ಹೊರಟಿದ್ದಾರೆ. ಹಾಗಾಗಿ ಚಿತ್ರದಲ್ಲಿ ಬಣ್ಣ ಹಚ್ಚಲು ಒಪ್ಪಿಕೊಂಡೆ ಎನ್ನುತ್ತಾರೆ ವೆಂಕಿ.

  ಪ್ರಿನ್ಸಿಪಲ್ ಪಾತ್ರದಲ್ಲಿ ಸುಧಾರಾಣಿ

  ಪ್ರಿನ್ಸಿಪಲ್ ಪಾತ್ರದಲ್ಲಿ ಸುಧಾರಾಣಿ

  ಇನ್ನು ಚಿತ್ರದಲ್ಲಿ ಸುಧಾರಾಣಿ ಅವರು ಪ್ರಿನ್ಸಿಪಾಲ್ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರ ಕೇವಲ ಮಕ್ಕಳಿಗಷ್ಟೇ ಅಲ್ಲ. ದೊಡ್ಡವರು ನೋಡಬಹುದು. ಇದು ಮಕ್ಕಳ ಚಿತ್ರ ಎಂದುಕೊಂಡರೆ ತಪ್ಪಾಗುತ್ತದೆ ಎನ್ನುತ್ತಾರೆ ಸುಧಾರಾಣಿ.

  ಬಿ.ಎನ್.ಗಂಗಾಧರ್ ಚಿತ್ರದ ನಿರ್ಮಾಪಕರು

  ಬಿ.ಎನ್.ಗಂಗಾಧರ್ ಚಿತ್ರದ ನಿರ್ಮಾಪಕರು

  ಸಚಿನ್ ಪಾತ್ರದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಮಾ. ಸ್ನೇಹಿತ್ ಅಭಿನಯಿಸುತ್ತಿದ್ದಾರೆ. ಇನ್ನೂ ಸುಹಾಸಿನಿ, ಸುಧಾರಾಣಿ, ಶ್ರೀನಿವಾಸ್ ಪ್ರಭು ಮತ್ತಿತರರು ಚಿತ್ರದ ಮುಖ್ಯ ಪಾತ್ರಧಾರಿಗಳು. ಬಿ.ಎನ್. ಗಂಗಾಧರ್ ಚಿತ್ರದ ನಿರ್ಮಾಪಕರು. ರಾಜೇಶ್ ರಾಮ್‌ನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  English summary
  Team India former cricketer Venkatesh Prasad, who is making his cinematic debut in upcoming Kannada-Telugu bilingual 'Sachin...Tendulkar Alla', will be essaying an important role of a coach, says its director S. Mohan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X