For Quick Alerts
  ALLOW NOTIFICATIONS  
  For Daily Alerts

  3 ರಾಜ್ಯ, 3 ಸೂಪರ್‌ಸ್ಟಾರ್: 'ವಿಕ್ರಾಂತ್ ರೋಣ' ಕೊನೆ ಹಂತದ ಭರ್ಜರಿ ಪ್ರಚಾರ !

  |

  ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ'. ಇದು ಕಿಚ್ಚ ಸುದೀಪ್ ವೃತ್ತಿ ಬದುಕಿನ ಅತೀ ದೊಡ್ಡ ಸಿನಿಮಾ. ಅದೂ 3ಡಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಕೊನೆಯ ಹಂತದ ಪ್ರಚಾರ ಶುರುವಾಗಿದೆ.

  ಕಿಚ್ಚ ಸುದೀಪ್ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ನಿರಂತರ ಪ್ರಚಾರಕ್ಕೆ ಮುಂದಾಗಿದ್ದಾರೆ. ಇಂದಿನಿಂದ ಇನ್ನು ಎರಡು ದಿನಗಳ ಕಾಲ ಬಿಡುವಿಲ್ಲದೆ ಪ್ರಮೋಷನ್ ಮಾಡುತ್ತಿದ್ದಾರೆ ಕಿಚ್ಚ ಸುದೀಪ್.

  ಅಭಿಮಾನಿಗಳು ಕೊನೆಗೂ ನಿರಾಳ: 'ವಿಕ್ರಾಂತ್ ರೋಣ' ಅಡ್ವಾನ್ಸ್ ಬುಕಿಂಗ್ ಆರಂಭ!ಅಭಿಮಾನಿಗಳು ಕೊನೆಗೂ ನಿರಾಳ: 'ವಿಕ್ರಾಂತ್ ರೋಣ' ಅಡ್ವಾನ್ಸ್ ಬುಕಿಂಗ್ ಆರಂಭ!

  ಮೂರು ರಾಜ್ಯ.. ಮೂವರು ಸೂಪರ್‌ಸ್ಟಾರ್‌ಗಳು ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಮುಂಬೈನಿಂದ ಆರಂಭ ಆಗುವ ಈ ಜರ್ನಿ ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ. ಎರಡು ದಿನಗಳಲ್ಲಿ ಮೂರು ರಾಜ್ಯಗಳನ್ನು ಸುದೀಪ್ ಕವರ್ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜರು ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಳ್ಳುತ್ತಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.

  ಮುಂಬೈನಲ್ಲಿ ಈವೆಂಟ್ ಸಲ್ಮಾನ್ ಖಾನ್

  ಮುಂಬೈನಲ್ಲಿ ಈವೆಂಟ್ ಸಲ್ಮಾನ್ ಖಾನ್

  'ವಿಕ್ರಾಂತ್ ರೋಣ' ಸಿನಿಮಾಗೆ ಇನ್ನು ಮೂರು ದಿನ ಬಾಕಿಯಿದೆ. ಈ ಕಾರಣಕ್ಕೆ ಮೂರು ಪ್ರಮುಖ ನಗರಗಳಲ್ಲಿ ಪ್ರೀ ರಿಲೀಸ್ ಈವೆಂಟ್ ಶುರುವಾಗಿದೆ. ಇಂದು (ಜುಲೈ 25)ರಂದು ಮುಂಬೈನಲ್ಲಿ ಪ್ರೀ-ರಿಲೀಸ್ ಈವೆಂಟ್ ನಡೆಯುತ್ತಿದೆ. ಈ ಈವೆಂಟ್‌ನಲ್ಲಿ ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. 'ವಿಕ್ರಾಂತ್ ರೋಣ' ಹಿಂದಿ ವರ್ಷನ್‌ ಅನ್ನು ಸಲ್ಮಾನ್ ಖಾನ್ ಸಂಸ್ಥೆಯೇ ವಿತರಣೆ ಮಾಡಲಿದೆ. ಹೀಗಾಗಿ ಮುಂಬೈನಲ್ಲಿ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಮಹಾಸಂಗಮ ಆಗಲಿದೆ.

  ದರ್ಶನ್ 'ಕುರುಕ್ಷೇತ್ರ' ನಂತರ ಸುದೀಪ್ 'ವಿಕ್ರಾಂತ್ ರೋಣ': ಬಯಲಾಯ್ತು 3D ವರ್ಷನ್ ಸೀಕ್ರೇಟ್ಸ್!ದರ್ಶನ್ 'ಕುರುಕ್ಷೇತ್ರ' ನಂತರ ಸುದೀಪ್ 'ವಿಕ್ರಾಂತ್ ರೋಣ': ಬಯಲಾಯ್ತು 3D ವರ್ಷನ್ ಸೀಕ್ರೇಟ್ಸ್!

  ತೆಲುಗು ಪ್ರೀ-ರಿಲೀಸ್ ಈವೆಂಟ್‌ಗೆ ನಾಗಾರ್ಜುನಾ!

  ತೆಲುಗು ಪ್ರೀ-ರಿಲೀಸ್ ಈವೆಂಟ್‌ಗೆ ನಾಗಾರ್ಜುನಾ!

  ಮುಂಬೈನಲ್ಲಿ ಇಂದು ಸಂಜೆ 6.30ರಿಂದ ಪ್ರೀ- ರಿಲೀಸ್ ಈವೆಂಟ್ ಶುರುವಾಗಲಿದೆ. ಈ ಈವೆಂಟ್ ಮುಗಿಸಿದ ಬಳಿಕ ಕಿಚ್ಚ ಸುದೀಪ್ ನೇರವಾಗಿ ಹೈದರಾಬಾದ್‌ಗೆ ತೆರಳಲಿದ್ದಾರೆ. ನಾಳೆ (ಜುಲೈ 26) ಹೈದರಾಬಾದ್‌ನಲ್ಲಿ ಬೆಳಗ್ಗೆ ಪ್ರೀ-ರಿಲೀಸ್ ಈವೆಂಟ್‌ ಅನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಜೊತೆ ನಾಗಾರ್ಜುನಾ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಗೂ ಮುನ್ನ ತೆಲುಗು ಪ್ರೇಕ್ಷಕರಿಗಾಗಿ ಈ ಈವೆಂಟ್ ನಡೆಯಲಿದೆ.

  ಬೆಂಗಳೂರಿನ ಈವೆಂಟ್‌ಗೆ ಉಪೇಂದ್ರ ಗೆಸ್ಟ್

  ಬೆಂಗಳೂರಿನ ಈವೆಂಟ್‌ಗೆ ಉಪೇಂದ್ರ ಗೆಸ್ಟ್

  ಹೈದರಾಬಾದ್‌ನಲ್ಲಿ ಪ್ರೀ-ರಿಲೀಸ್ ಈವೆಂಟ್ ಮುಗಿಸಿಕೊಂಡು ಕಿಚ್ಚ ಸುದೀಪ್ ಸೀದಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಳೆ (ಜುಲೈ 26) ಸಂಜೆ ಇಲ್ಲಿನ ಲುಲು ಮಾಲ್‌ನಲ್ಲಿ ಪ್ರೀ-ರಿಲೀಸ್ ಈವೆಂಟ್ ಅನ್ನು ಹಮ್ಮಿಕೊಳ್ಳಲಾಗಿದೆ. ಇದು ಭಾರತದಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ನಡೆಯುವ ಕೊನೆಯ ಈವೆಂಟ್. ರಿಯಲ್‌ಸ್ಟಾರ್ ಉಪೇಂದ್ರ ಈ ಪ್ರೀ-ರಿಲೀಸ್ ಈವೆಂಟ್‌ಗೆ ಗೆಸ್ಟ್ ಆಗಿ ಆಗಮಿಸಲಿದ್ದಾರೆ.

  ದುಬೈನಲ್ಲಿ 'ವಿಕ್ರಾಂತ್ ರೋಣ' ಪ್ರೀಮಿಯರ್ ?

  ದುಬೈನಲ್ಲಿ 'ವಿಕ್ರಾಂತ್ ರೋಣ' ಪ್ರೀಮಿಯರ್ ?

  'ವಿಕ್ರಾಂತ್ ರೋಣ' ಸಿನಿಮಾ ದುಬೈನಲ್ಲಿ ಪ್ರೀಮಿಯರ್ ಆಗಲಿದೆ ಎನ್ನಲಾಗಿದೆ. ಒಂದು ದಿನ ಮುನ್ನವೇ ಈ ಸಿನಿಮಾ ದುಬೈನಲ್ಲಿ ರಿಲೀಸ್ ಆಗಲಿದೆ. ಆದರೆ, 'ವಿಕ್ರಾಂತ್ ರೋಣ' ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಮಾಡುತ್ತಾ? ಇಲ್ಲವಾ? ಅನ್ನೋದು ಗೊಂದಲವಿದೆ. ಎಲ್ಲಕ್ಕಿಂತ ಹೆಚ್ಚಾಗಿ 27 ರಿಂದ 28 ದೇಶಗಳಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಇವುಗಳಿಂದಲೇ ಸಿನಿಮಾದ ರಿಸಲ್ಟ್‌ ಗೊತ್ತಾಗಲಿದೆ. 'ವಿಕ್ರಾಂತ್ ರೋಣ'ಗಾಗಿ ಕಿಚ್ಚ ಸುದೀಪ್ ಕೊನೆಯ ಹಂತದ ಭರ್ಜರಿ ಪ್ರಚಾರ ಆರಂಭ ಮಾಡಿದ್ದು, ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

  English summary
  Vikrant Rona Pre-Release Event: Salman Khan, Nagarjuna And Upendra Will Be The Guest , Know More.
  Tuesday, July 26, 2022, 10:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X