»   » ಗಾಂಧಿನಗರಕ್ಕೆ ಮತ್ತೆ ಅಡಿಯಿಟ್ಟ ನಾಗವಲ್ಲಿ ವಿಮಲಾ

ಗಾಂಧಿನಗರಕ್ಕೆ ಮತ್ತೆ ಅಡಿಯಿಟ್ಟ ನಾಗವಲ್ಲಿ ವಿಮಲಾ

Posted By:
Subscribe to Filmibeat Kannada

'ಆಪ್ತರಕ್ಷಕ' ಸಿನಿಮಾ ಆದ್ಮೇಲೆ ಸ್ಯಾಂಡಲ್ ವುಡ್ ಮಂದಿ ಮರತೇ ಹೋಗಿದ್ದ ನಾಗವಲ್ಲಿ ಮತ್ತೆ ಗಾಂಧಿನಗರಕ್ಕೆ ಕಾಲಿಡ್ತಿದ್ದಾಳೆ. ಅದು ರಾಜರಾಜೇಂದ್ರನ ಆಸ್ಥಾನಕ್ಕೆ ಅನ್ನೋದು ಇಂಟ್ರೆಸ್ಟಿಂಗ್ ವಿಷಯ.

ರಾಜರಾಜೇಂದ್ರ ಮತ್ತು ನಾಗವಲ್ಲಿ ಅಂದಕೂಡಲೇ ಇದ್ಯಾವ್ದೋ ಮತ್ತೊಂದು ಹಾರರ್ ಕಮ್ ಥ್ರಿಲ್ಲರ್ ಸಿನಿಮಾ ಕತೆ ಇರ್ಬೇಕು ಅಂದ್ಕೋಬೇಡಿ. ಯಾಕಂದ್ರೆ, ನಾವ್ ಹೇಳ್ತಿರೋ ರಾಜರಾಜೇಂದ್ರ ಬೇರಾರೂ ಅಲ್ಲ, ಕಾಮಿಡಿ ಖಿಲಾಡಿ, ವಿಕ್ಟರಿ ಶರಣ್. [ನಿರ್ದೇಶಕನ ಪಾಲಿಗೆ ವಿಷ್ಣುವೇ ಆಪ್ತರಕ್ಷಕ ]


'ರಾಜರಾಜೇಂದ್ರ'ನಾಗಿರೋ ಶರಣ್ ಗೆ ಭಯಪಡಿಸೋ ಬದಲು, ಬಹುಪರಾಕ್ ಹೇಳೋಕೆ ಬರ್ತಿರೋದು 'ಆಪ್ತರಕ್ಷಕ' ಸಿನಿಮಾದಲ್ಲಿ 'ನಾಗವಲ್ಲಿ' ಪಾತ್ರ ಮಾಡಿದ್ದ ನಟಿ ವಿಮಲಾ ರಾಮನ್. ಇದೇನಪ್ಪಾ ಅಂತ ಕನ್ ಫ್ಯೂಸ್ ಆಗ್ಬೇಡಿ, ಶರಣ್ ಅಭಿನಯದ `ರಾಜರಾಜೇಂದ್ರ' ಚಿತ್ರಕ್ಕೆ ವಿಮಲಾ ರಾಮನ್ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.

ಆಪ್ತರಕ್ಷಕ ಸಿನಿಮಾ ನಂತರ ಪರಭಾಷೆಯಲ್ಲೇ ಬಿಜಿಯಾಗಿದ್ದ ವಿಮಲಾ ರಾಮನ್, ಇದೀಗ 'ರಾಜರಾಜೇಂದ್ರ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕಾಣಿಸಿಕೊಳ್ತಿದ್ದಾರೆ. ಶರಣ್ ಏನೋ ರಾಜರಾಜೇಂದ್ರನ ಲುಕ್ ನಲ್ಲಿ ದರ್ಬಾರ್ ಮಾಡ್ತಿದ್ದಾರೆ. ಆದ್ರೆ ವಿಮಲಾ ರಾಮನ್ ರಾಣಿಯಾಗಿ ಕಾಣಿಸಿಕೊಳ್ತಾರಾ ಅನ್ನೋದನ್ನ ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ.

Rajarajendra poster

'ರಾಜರಾಜೇಂದ್ರ'ನ ಕತೆ ಕೇಳಿ ಸದ್ಯಕ್ಕೆ ಓಕೆ ಅಂದಿರೋ ವಿಮಲಾ, ಬೆಂಗಳೂರಿಗೆ ಲ್ಯಾಂಡ್ ಆಗೋದು ನವೆಂಬರ್ 15ಕ್ಕೆ. ಶರಣ್ ಗೆ 'ಜೈಲಲಿತಾ' ದಂತ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಪಿ.ಕುಮಾರ್ 'ರಾಜರಾಜೇಂದ್ರ'ನಿಗೂ ಆಕ್ಷನ್ ಕಟ್ ಹೇಳ್ತಿದ್ದಾರೆ. ಬೆಂಗಳೂರು ಸುತ್ತ ಮುತ್ತ `ರಾಜರಾಜೇಂದ್ರ'ನ ಚಿತ್ರೀಕರಣ ಭರದಿಂದ ಸಾಗ್ತಿದೆ. (ಏಜೆನ್ಸೀಸ್)
English summary
Actress Vimala Raman has been roped in for Raja Rajendra as lead actress opposite Sharan. P. Kumar is directing Raja Rajendra and Vimala Raman is joining the schedule from November 15th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada