For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸಲ್ಲಿ ಗರ್ಜಿಸಿದ ವಿಷ್ಣುದಾದಾ 'ಖೈದಿ'

  By Rajendra
  |

  ಕೋಟ್ಯಾಂತರ ರುಪಾಯಿ ಬಂಡವಾಳ ಹೂಡಿ ನಿರ್ಮಿಸಿದ ಚಿತ್ರಗಳ ಹಣೆಬರಹವೇ ಇಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅಂತಹದರಲ್ಲಿ ಮೂವತ್ತು ವರ್ಷಗಳ ಹಿಂದೆ ತೆರೆಕಂಡಂತಹ ಚಿತ್ರವೊಂದು ಬಾಕ್ಸ್ ಆಫೀಸಲ್ಲಿ ಸದ್ದು ಮಾಡುತ್ತಿದೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೆ.

  ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಖೈದಿ' (1984) ಚಿತ್ರ ರೀ ರಿಲೀಸ್ ಆಗಿ ವಿಷ್ಣುದಾದಾ ಅಭಿಮಾನಿಗಳ ಪಾಲಿಗೆ ಸಂತಸದ ಸಂಗತಿಯಾಗಿದೆ. ಇದೀಗ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. [ಮೂವತ್ತು ವರ್ಷಗಳ ಬಳಿಕ ವಿಷ್ಣು 'ಖೈದಿ' ರಿಲೀಸ್]

  ಚಿತ್ರದ ಮೊದಲ ವಾರದ ಗಳಿಕೆ ರು.6 ಲಕ್ಷ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. 'ಖೈದಿ' ಚಿತ್ರ ಅಭಿಮಾನಿಗಳ ಹೃದಯ ಕದ್ದಿದೆ. ಚಿತ್ರ ಈಗಾಗಲೆ 20 ಕೇಂದ್ರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮುಂದಿನ ವಾರ ಇನ್ನೂ ಎರಡು ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.

  ಈ ಚಿತ್ರವನ್ನು ವಿಷ್ಣು ಅಭಿಮಾನಿಗಳಾದ ಕುಮಾರ್, ಸತೀಶ್, ಗೋವಿಂದ್ ಎಂಬುವವರು ಮರು ಬಿಡುಗಡೆ ಮಾಡಿದ್ದರು. ವೃತ್ತಿಯಲ್ಲಿ ಆಟೋ ಚಾಲಕರಾದ ಇವರು ಹಳೆ ಪ್ರಿಂಟನ್ನು ಸಿನಿಮಾ ಸ್ಕೋಪ್ ರೂಪಕ್ಕೆ ತಂದು ಯುಎಫ್ ಓ ತಂತ್ರಜ್ಞಾನ ಅಳವಡಿಸಿ ರೀ ರಿಲೀಸ್ ಮಾಡಿದ್ದರು.

  ಚಿತ್ರ ಮೂವತ್ತು ವರ್ಷಗಳ ಬಳಿಕ ತೆರೆಕಂಡರೂ ಅಭಿಮಾನಿಗಳು ಇದೇ ಮೊದಲು ಬಿಡುಗಡೆಯಾದಂತೆ ಚಿತ್ರವನ್ನು ನೋಡಿ ಆನಂದಿಸುತ್ತಿದ್ದಾರೆ. ತೆಲುಗಿನ 'ಖೈದಿ' ಚಿತ್ರದ ರೀಮೇಕ್ ಇದು. ಮೂಲ ಚಿತ್ರದಲ್ಲಿ ಚಿರಂಜೀವಿ ಹಾಗೂ ಮಾಧವಿ ಮುಖ್ಯ ಪಾತ್ರಧಾರಿಗಳು. ಈ ಚಿತ್ರದ "ತಾಳೆ ಹೂವ ಪೊದೆಯಿಂದ..." (ಚಿ.ಉದಯಶಂಕರ್ ಸಾಹಿತ್ಯ) ಹಾಡು ಆಗಿನ ಕಾಲಕ್ಕೆ ಬುಸ್ ಬುಸ್ ಎಂದು ಸಾಕಷ್ಟು ಸದ್ದು ಮಾಡಿತ್ತು.

  ಚಕ್ರವರ್ತಿ ಸಂಗೀತ, ವಿ ಲಕ್ಷ್ಮಣ್ ಅವರ ಛಾಯಾಗ್ರಹಣ, ಡಿ ವೆಂಕಟರತ್ನಂ ಅವರ ಸಂಕಲನ, ಚಿನ್ನಿ ಪ್ರಕಾಶ್ ಮತ್ತು ತಾರಾ ಅವರ ನೃತ್ಯ ಸಂಯೋಜನೆ, ನಾಗರಾಜ್ ಅವರ ಕಲೆ ಇರುವ ಚಿತ್ರವನ್ನು ಡಿವಿ ಸುಧೀಂದ್ರ ಅವರು ಪ್ರಚಾರ ಮಾಡಿದ್ದರು. ಈಗ ಮತ್ತೊಂದು ಬೆಳ್ಳಿತೆರೆಯ ಮೇಲೆ ವೀಕ್ಷಿಸುವ ಅವಕಾಶ. (ಏಜೆನ್ಸೀಸ್)

  English summary
  Sahasa Simha Dr Vishnuvardhan's re released movie 'Khaidi' (1984) makes sound in box office, the movie collects Rs 6 lakhs in first weekend. The movie re-released on 11th April in Bangalore Triveni theater. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X