For Quick Alerts
  ALLOW NOTIFICATIONS  
  For Daily Alerts

  ಸಾಹಸ ಸಿಂಹನ ಅಭಿಮಾನಕ್ಕೆ ಬೆಲೆಕಟ್ಟೋಕೆ ಸಾಧ್ಯಾನಾ?

  By ಕುಸುಮ
  |

  ಕನ್ನಡಿಗರ ಮರೆಯಲಾಗದ ಮಾಣಿಕ್ಯ 'ಸಾಹಸಸಿಂಹ' ಚಿತ್ರ ಈ ವಾರ ಮತ್ತೆ ಬಿಡುಗಡೆಯಾಗಿದೆ. ಕನ್ನಡ ತಮಿಳು ಮತ್ತು ಹಿಂದಿ ಮೂರು ಭಾಷೆಯಲ್ಲಿ ತೆರೆಕಂಡ 'ಹೋಮ್ ಸ್ಟೇ' ಚಿತ್ರಕ್ಕೆ ಕೆಂಪೇಗೌಡ ರಸ್ತೆಯ ಮುಖ್ಯ ಚಿತ್ರಮಂದಿರ ಯಾವುದೂ ಸಿಕ್ಕಿಲ್ಲ. ಆದರೆ ಸಾಹಸಸಿಂಹ ಚಿತ್ರಕ್ಕೆ ಅನುಪಮ ಚಿತ್ರಮಂದಿರ ಸಿಕ್ಕಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. [ಕುಚ್ಚಿಕ್ಕು ಗೆಳೆಯ ವಿಷ್ಣು ನೆನೆದು ಭಾವುಕರಾದ ಅಂಬರೀಶ್]

  33 ವರ್ಷಗಳ ಹಿಂದೆ ತೆರೆಕಂಡಿದ್ದ ಜೋಸೈಮನ್ ನಿರ್ದೇಶನದ ಚಿತ್ರವೇ ಕನ್ನಡಕ್ಕೆ ಒಬ್ಬ ಸಿಂಹನನ್ನು ಕೊಟ್ಟಿದ್ದು. ಅಂದಿನಿಂದ ಇಂದಿನಿಂದವರೆಗೂ ಅಭಿಮಾನಿಗಳು ಪ್ರತಾಪ್ ಅನ್ನೋ ಪಾತ್ರದೊಳಗಿದ್ದ ಪ್ರತಾಪಿಯನ್ನು ತಮ್ಮ ನೆಚ್ಚಿನ ಮುತ್ತನ್ನಾಗಿ ಮುದ್ದಾಡಿ ಬೆಳೆಸಿದ್ದಾರೆ. ಈಗಲೂ ನೆನೆಸುತ್ತಿದ್ದಾರೆ. ಅಂದಹಾಗೆ ಇದನ್ಯಾಕೆ ಹೇಳ್ತಿದ್ದೀನಿ ಅಂದ್ರೆ 'ಸಾಹಸಸಿಂಹ' ಚಿತ್ರ ರಿಲೀಸ್ ಆಗುತ್ತೆ ಅಂತ ಈ ಬಾರಿ ದೊಡ್ಡದಾಗಿ ಪ್ರಚಾರವನ್ನೇನೂ ಮಾಡಿರಲಿಲ್ಲ. [ಕೋಡಿಶ್ರೀಗಳಿಗೆ ಅರಿವಿತ್ತೇ ವಿಷ್ಣುವರ್ಧನ್ ಸಾವಿನ ಮುನ್ಸೂಚನೆ?]

  ಆದರೆ ವಿಷ್ಣು ಇಲ್ಲದಿದ್ದರೂ, ಅವರ ಸಿನಿಮಾದಿಂದ ಲಾಭ ಆಗುತ್ತೋ ಬಿಡುತ್ತೋ, ಅವರ ಅಭಿಮಾನಿಗಳಿಗೆ ಮಾತ್ರ ಇದರ ಲೆಕ್ಕವೇ ಇಲ್ಲ. ಅವರೇ ಚಿತ್ರವನ್ನು ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರದಲ್ಲಿ ರೀರಿಲೀಸ್ ಮಾಡಿದ್ದಾರೆ. ಜನರು ಕೂಡ ಮುಗಿಬಿದ್ದು ನೋಡುತ್ತಿದ್ದಾರೆ. [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

  ರೀರಿಲೀಸ್ ಸಂಭ್ರಮದಲ್ಲಿ ಅಭಿಮಾನಿಗಳು ಸಾವಿರಾರು ಮೌಲ್ಯದ ಪಟಾಕಿ ಹೊಡೆದು ಸಂಭ್ರಮಿಸುವುದರ ಜೊತೆಗೆ ಕನ್ನಡ ಕಂಡ ಮೋಸ್ಟ್ ಹ್ಯಾಂಡಸಮ್ ಹೀರೋನ ಕಟೌಟನ್ನು ನಿಲ್ಲಿಸಿ ವಿಷ್ಣು ಅಭಿಮಾನಿಗಳು ಸಿನಿಮಾ ನೋಡುವಂತೆ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ವಿಷ್ಣು ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸೋ ಜತೆಗೆ ಚಿತ್ರವನ್ನು ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸುತ್ತಿರುವ ಸಂಭ್ರಮದಲ್ಲಿದ್ದಾರೆ. [ವಿಷ್ಣುವರ್ಧನ್ ಬಗ್ಗೆ ಆಪ್ತೇಷ್ಟರು ಹಂಚಿಕೊಂಡ ಸತ್ಯ ಸಂಗತಿ]

  ಈ ಸಾಹಯಮಯ ಚಿತ್ರದಲ್ಲಿ ಹಿಂದಿ ನಟಿ ರಾಜಲ್ ಕಿರಣ್ ನಾಯಕಿಯಾಗಿ ನಟಿಸಿದ್ದರು. ಖಳನಟರಾದ ವಜ್ರಮುನಿ, ಪ್ರಭಾಕರ್ ಮುಂತಾದವರಿದ್ದ ಚಿತ್ರ ಆ ಕಾಲದಲ್ಲೇ ಭಾರೀ ಯಶಸ್ಸು ಗಳಿಸಿತ್ತು. ಆ ಚಿತ್ರದ 'ಮರೆಯದ ನೆನಪನು ಜತೆಯಲ್ಲಿ ತಂದೆ ನೀನು, ನಿನಗಾಗಿ ಅರಸಿ ಬಂದೆ, ನೀ ಎಲ್ಲೋ ಅಲ್ಲೆ ನಾನು...' ಹಾಡನ್ನು ಯಾರು ತಾನೆ ಮರೆಯಲು ಸಾಧ್ಯ? [ವಿಷ್ಣುವಿನ ಇಬ್ಬರು ಅಭಿಮಾನಿಗಳ ಕಣ್ಣೀರ ಕಥೆ]

  English summary
  Kannada actor Vishnuvardhan's block buster movie Sahasa Simha, which was released 33 years ago, has been released in Kempe Gowda Road again. That successful action movie, directed by Joe Simon, had given permanent nick name 'Sahasa Simha' to Visnuvardhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X