»   » ಕಮಲ್ ಹಾಸನ್ 'ವಿಶ್ವರೂಪಂ 2' ಬಿಡುಗಡೆಗೆ ಸಿದ್ಧ

ಕಮಲ್ ಹಾಸನ್ 'ವಿಶ್ವರೂಪಂ 2' ಬಿಡುಗಡೆಗೆ ಸಿದ್ಧ

By: ಶಂಕರ್, ಚೆನ್ನೈ
Subscribe to Filmibeat Kannada

ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ 2' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 'ವಿಶ್ವರೂಪಂ' ಚಿತ್ರದಂತೆಯೇ ಈ ಚಿತ್ರದ ಬಗೆಗೂ ಸಾಕಷ್ಟು ನಿರೀಕ್ಷೆಗಳಿವೆ. ಈ ಬಹುಭಾಷಾ ಚಿತ್ರ ನವೆಂಬರ್ ನಲ್ಲಿ ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಅಂತಿಮ ಹಂತದ ಚಿತ್ರೀಕರಣ ಸಿದ್ಧತೆಗಳು ಭರದಿಂದ ಸಾಗಿವೆ.

ಇನ್ನು ಕೇವಲ ಎರಡೇ ಎರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಬಹುಶಃ ಚಿತ್ರವನ್ನು ನವೆಂಬರ್ 22ರಂದು ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ನವೆಂಬರ್ ಕೊನೆಗೆ ಬಿಡುಗಡೆ ಮಾಡಿದರೆ ದೀಪಾವಳಿ ಹಬ್ಬದ ಸಂಭ್ರಮದ ಜೊತೆಗೆ ಚಿತ್ರಕ್ಕೂ ಲಾಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ ನಿರ್ಮಾಪಕರು.


ಡಿಸೆಂಬರ್ ತಿಂಗಳಲ್ಲಿ ರಜನಿಕಾಂತ್ ಅವರ 'ಕೋಚಡಯಾನ್' ಚಿತ್ರ ತೆರೆಗೆ ಬರುತ್ತಿದೆ. ಆಗ 'ವಿಶ್ವರೂಪಂ' ಬಿಡುಗಡೆ ಮಾಡುವುದು ಸುನಾಮಿ ಮುಂದೆ ಕೊಡೆ ಹಿಡಿದಂತಾಗುತ್ತದೆ. ಹಾಗಾಗಿ ನವೆಂಬರ್ ನಲ್ಲೇ ತೆರೆಗೆ ತರುವ ಬಗ್ಗೆ ತೀವ್ರ ಕಸರತ್ತು ನಡೆಯುತ್ತಿದೆ.

ಕಮಲ್ ಹಾಸನ್ ಸ್ವತಃ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಏಕ್ತಾ ಕಪೂರ್, ವಿ ರವಿಚಂದ್ರನ್, ಶೋಭಾ ಕಪೂರ್ ನಿರ್ಮಿಸುತ್ತಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ರಾಹುಲ್ ಬೋಸ್, ಪೂಜಾ ಕುಮಾರ್, ಆಂಡ್ರಿಯಾ ಜೆರೆಮಯ್ಯಾ ಮುಂತಾದವರಿದ್ದಾರೆ. ಉಗ್ರವಾದದ ಬಗ್ಗೆ ಈ ಬಾರಿ ಕಮಲ್ ತಮ್ಮ ಚಿತ್ರದಲ್ಲಿ ಏನು ಹೇಳಲು ಹೊರಟಿದ್ದಾರೆ ಎಂಬ ಬಗ್ಗೆ ಕುತೂಹಲ ಇದ್ದೇ ಇದೆ.

English summary
Kamal Hassan's much-talked Vishwaroopam 2 is getting ready for release. The multilingual movie is likely to hit the screens in November. The makers of the movie are reportedly planning to release on November 22.
Please Wait while comments are loading...