»   » 'ಜೆಸ್ಸಿ' ಟ್ರೈಲರ್: ನಿಜವಾದ ಪ್ರೀತಿ ಯಾವತ್ತೂ ಸಾಯಲ್ಲ ರೀ..

'ಜೆಸ್ಸಿ' ಟ್ರೈಲರ್: ನಿಜವಾದ ಪ್ರೀತಿ ಯಾವತ್ತೂ ಸಾಯಲ್ಲ ರೀ..

Posted By:
Subscribe to Filmibeat Kannada

'ಗೂಗ್ಲಿ', ರಣವಿಕ್ರಮ'ದಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಪವನ್ ಒಡೆಯರ್ ಅವರು ಇದೀಗ 'ಜೆಸ್ಸಿ' ಸಿನಿಮಾದ ಮೂಲಕ ಮತ್ತೆ ಗಾಂಧಿನಗರಕ್ಕೆ ವಾಪಸಾಗಿದ್ದಾರೆ. ಕಂಪ್ಲೀಟ್ ಲವ್ ಸ್ಟೋರಿ ಆಧಾರಿತ ಸಿನಿಮಾ 'ಜೆಸ್ಸಿ' ಈ ವಾರ (ಮಾರ್ಚ್ 25) ತೆರೆ ಕಾಣುತ್ತಿದೆ.

'ಪ್ಯಾರ್ಗೆ ಆಗ್ಬುಟ್ಟೈತೆ' ಖ್ಯಾತಿಯ ನಟಿ ಪಾರುಲ್ ಯಾದವ್, 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ್, ರಘು ಮುಖರ್ಜಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಜೆಸ್ಸಿ' ಚಿತ್ರದ ಸುಂದರ ಟ್ರೈಲರ್ ಬಿಡುಗಡೆ ಆಗಿದೆ.['ಜೆಸ್ಸಿ'ಯಲ್ಲಿ ಪಾರುಲ್ ಯಾವ ತರ ಕಾಣಿಸಿಕೊಂಡಿದ್ದಾರೆ?]


Watch Kannada Movie 'Jessie' official Trailer

ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆ ಆಗಿದ್ದು, ಮಾರ್ಕೆಟ್ ನಲ್ಲಿ ತುಂಬಾ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಆರ್.ಎಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬಂದಿರುವ 'ಜೆಸ್ಸಿ' ಚಿತ್ರದ ಸುಂದರವಾದ ಟ್ರೈಲರ್ ಕಣ್ಮನ ಸೆಳೆಯುತ್ತಿದೆ.


Watch Kannada Movie 'Jessie' official Trailer

ಮಲೆನಾಡಿನ ಸುಂದರ ಪರಿಸರ ಕೂಡ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ ಅನ್ನೋದು ಟ್ರೈಲರ್ ನಲ್ಲಿ ಗೋಚರಿಸುತ್ತಿದೆ. ಇನ್ನು ನಟಿ ಪಾರುಲ್ ಯಾದವ್ ಅವರಂತೂ ಶುದ್ಧ ಸಂಪ್ರದಾಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಸ್ಸಿಗೆ ಕಚಗುಳಿ ಇಡುತ್ತಾರೆ.


ನಟ ಧನಂಜಯ್ ಅವರು ಇಲ್ಲಿ ಕ್ರಿಶ್ಚಿಯನ್ ಹುಡುಗನ ಪಾತ್ರದಲ್ಲಿ ಮಿಂಚಿದ್ದು, ಇವರ ತಾಯಿಯಾಗಿ ನಟಿ ಸುಮಲತಾ ಅಂಬರೀಶ್ ಅವರು ಮಿಂಚಿದ್ದಾರೆ.['ಜೆಸ್ಸಿ' ಮೂಲಕ ಮತ್ತೊಂದು ಹಿಟ್ ನೀಡ್ತಾರಾ ಪವನ್ ಒಡೆಯರ್?]


Watch Kannada Movie 'Jessie' official Trailer

ಅಂದಹಾಗೆ 'ಜೆಸ್ಸಿ' ಚಿತ್ರದಲ್ಲಿ ಒಂದು ಹೃದಯವನ್ನು ಎರಡು ಹೃದಯಗಳು ಪ್ರೀತಿಸುವ ಕಥೆಯಾಗಿರಬಹುದು ಎಂಬುದು ಟ್ರೈಲರ್ ನೋಡುತ್ತಿದ್ದಂತೆ, ಸಣ್ಣ ಅನುಮಾನ ಕಾಡುತ್ತದೆ.


ಒಟ್ನಲ್ಲಿ 'ಗೂಗ್ಲಿ', 'ರಣವಿಕ್ರಮ' ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಹಿಟ್ ಆದಂತೆ. ಧನಂಜಯ್ ಮತ್ತು ಪಾರುಲ್ ಜುಗಲ್ ಬಂದಿಯ 'ಜೆಸ್ಸಿ' ಸಿನಿಮಾ ಕೂಡ ಹಿಟ್ ಆಗಬಹುದೇ? ಅನ್ನೋದನ್ನ ಸಿನಿಮಾ ರಿಲೀಸ್ ಆದ ನಂತರ ನೋಡಬೇಕಿದೆ.[ಒಡೆಯರ್ 'ಜೆಸ್ಸಿ'ಗೆ 'ವಿನ್ನೈತಾಂಡಿ ವರುವಾಯ' ಸ್ಫೂರ್ತಿ ಕೊಟ್ಟಿತೆ?]


Watch Kannada Movie 'Jessie' official Trailer

ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದು, ಆರ್.ಶ್ರೀನಿವಾಸ್ ನಿರ್ಮಾಣದಲ್ಲಿ ಮೂಡಿಬಂದಿರುವ 'ಜೆಸ್ಸಿ' ಚಿತ್ರದ ಸುಂದರ-ರೋಮ್ಯಾಂಟಿಕ್ ಟ್ರೈಲರ್ ಇಲ್ಲಿದೆ ನೋಡಿ....


Watch Kannada Movie 'Jessie' official Trailer
English summary
Watch Kannada Movie 'Jessie' Official Trailer, starring Dhananjaya, Parul Yadav, Raghu Mukherji and others. Music composed by J Anoop Seelin. The movie is directed by Pavan Wadeyar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada