»   » ಹೊಸಬರ 'ರೆಡ್ ಅಲರ್ಟ್' ಟ್ರೈಲರ್ ಸೂಪರ್

ಹೊಸಬರ 'ರೆಡ್ ಅಲರ್ಟ್' ಟ್ರೈಲರ್ ಸೂಪರ್

Posted By:
Subscribe to Filmibeat Kannada

ಇತ್ತೀಚೆಗೆ ಹಳೇ ಸ್ಟಾರ್ ಗಳಿಗಿಂತ ಹೊಸಬ್ಬರ ಸಿನೆಮಾಗಳೇ ಹೆಚ್ಚು ಕ್ಲಿಕ್ ಆಗುತ್ತಿವೆ. 'ರಂಗಿತರಂಗ' ಸೇರಿದಂತೆ ರೀಸೆಂಟ್ ಆಗಿ ರಿಲೀಸ್ ಆದ ಕೆಲವು ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸ್ತಾ ಇರೋದೇ ಇದಕ್ಕೆ ಸಾಕ್ಷಿ.

ಹೊಸಬರ ಹವಾ ಬಗ್ಗೆ ನಾವೀಗ ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕುತ್ತಿದ್ದೇವೆ ಅಂದ್ರೆ ಇದೀಗ ಮತ್ತೊಂದು ಹೊಸಬರ ಚಿತ್ರ ಸದ್ದಿಲ್ಲದೇ ಗಾಂಧಿನಗರಕ್ಕೆ ಕಾಲಿಟ್ಟಿದೆ. ಪಿ.ಎಸ್.ತ್ರಿಲೋಕ್ ಅರ್ಪಿಸುವ ಚಂದ್ರ ಮಹೇಶ್ ಆಕ್ಷನ್-ಕಟ್ ಹೇಳಿರುವ 'ರೆಡ್ ಆಲರ್ಟ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಮಹಾದೇವನ್, ರವಿ, ತೇಜ, ಸಾಯಿ ನರೇಶ್, ಬುಲ್ಲೆಟ್ ಪ್ರಕಾಶ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ರೆಡ್ ಆಲರ್ಟ್' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..

Watch Kannada movie 'Red Alert' official trailer

ಸಿನಿ ನಿಲಯ ಕ್ರಿಯೇಷನ್ಸ್ ನ 'ರೆಡ್ ಅಲರ್ಟ್' ಕಾಮಿಡಿ-ಥ್ರಿಲ್ಲರ್ ಚಿತ್ರದಲ್ಲಿ ಬಹುಭಾಷಾ ನಟ ಸುಮಂತ್ ಪೋಲಿಸ್ ಕಮಿಷನರ್ ಆಗಿ ಕಾಣಿಸಿಕೊಂಡಿರುವುದು ವಿಶೇಷ.

ಪಿ.ವಿ ಶ್ರೀರಾಮ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ರೆಡ್ ಅಲರ್ಟ್' ಚಿತ್ರದ ಟ್ರೈಲರ್ ನಲ್ಲಿ ಪೋಲಿಸ್ ಗಿರಿ ಹೆಚ್ಚಾಗಿ ಕಂಡು ಬರುವುದರಿಂದ ಇದೊಂಥರಾ ಕಳ್ಳ-ಪೋಲಿಸ್ ಆಟ ಎನ್ನುವ ಅಭಿಪ್ರಾಯಕ್ಕೆ ಪ್ರೇಕ್ಷಕರು ಬರಬಹುದು.

ರವಿ ವರ್ಮ ಮ್ಯೂಸಿಕ್ ಕಂಪೋಸ್ ಮಾಡಿರುವ 'ರೆಟ್ ಅಲರ್ಟ್' ಗಾಂಧಿನಗರದ ಮಂದಿಯನ್ನು ಅಲರ್ಟ್ ಮಾಡುತ್ತಾ ಅಂತ ಮುಂದಿನ ದಿನಗಳಲ್ಲಿ ಕಾದು ನೋಡೋಣ.

English summary
Kannada Movie 'Red Alert' official trailer is released. 'Red Alert' features Kannada actor Mahadevan, Ravi, Teja and Bullet Prakash. The movie is directed by Chandra Mahesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada