For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ಹುಟ್ಟುಹಬ್ಬಕ್ಕೆ ಬಂತು 'ಇನ್ಸ್ ಪೆಕ್ಟರ್ ವಿಕ್ರಂ' ಟೀಸರ್

  By Bharath Kumar
  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದ ಪ್ರಯುಕ್ತ ಪ್ರಜ್ವಲ್ ಅಭಿನಯಿಸುತ್ತಿರುವ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಟೀಸರ್ ನ್ನ ಉಡುಗೊರೆಯಾಗಿ ಬಿಡುಗಡೆ ಮಾಡಲಾಗಿದೆ.

  1989ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ ಸಿನಿಮಾ 'ಇನ್ಸ್ ಪೆಕ್ಟರ್ ವಿಕ್ರಂ'. ಈ ಸೂಪರ್ ಹಿಟ್ ಚಿತ್ರದ ಟೈಟಲ್ ಬಳಸಿ, ಮತ್ತೆ ಅದೇ ಟ್ರೆಂಡ್ ಹುಟ್ಟುಹಾಕುವ ಭರವಸೆಯಲ್ಲಿ ಪ್ರಜ್ವಲ್ ಸಿನಿಮಾ ಸಿದ್ಧವಾಗುತ್ತಿದೆ.

  ಡ್ರಗ್ ಡೀಲರ್ ಆದ 'ಟಗರು' ಪುಟ್ಟಿ ಭಾವನಾ.! ಡ್ರಗ್ ಡೀಲರ್ ಆದ 'ಟಗರು' ಪುಟ್ಟಿ ಭಾವನಾ.!

  ಹೆಸರೇ ಹೇಳುವಾಗೆ, ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಆಫೀಸರ್. 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ನಟಿ ಭಾವನಾ ಕೂಡ ಸಾಥ್ ಕೊಡ್ತಿದ್ದಾರೆ.

  ಅಂದ್ಹಾಗೆ, ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 'ಕೋಟೆ' ಚಿತ್ರದಲ್ಲಿ ಖಾಕಿ ತೊಟ್ಟು ಕಮಾಲ್ ಮಾಡಿದ್ದರು. ಇದೀಗ, ಹಲವು ದಿನಗಳ ನಂತರ ಮತ್ತೆ ಪೊಲೀಸ್ ಆಗಿ ಮಿಂಚಲಿದ್ದಾರೆ.

  ಇನ್ನುಳಿದಂತೆ ವಿಖ್ಯಾತ್ ಪ್ರೊಡಕ್ಷನ್ ಸಂಸ್ಥೆಯಲ್ಲಿ 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರ ನಿರ್ಮಾಣ ಆಗಲಿದ್ದು, ನರಸಿಂಹ ನಿರ್ದೇಶನ ಮಾಡಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣವಿದ್ದು, ಮತ್ತು ಗುರುಪ್ರಸಾದ್ ಕಶ್ಯಪ್ ಸಂಭಾಷಣೆ ಬರೆಯಲಿದ್ದಾರೆ. ಅನೂಪ್ ಸಿಳೀನ್ ಅವರ ಸಂಗೀತ ಮತ್ತು ಹಿನ್ನಲೆ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರದ ಚಿತ್ರೀಕರಣ ಶುರುವಾಗಿದೆ.

  English summary
  Watch the official teaser of the Kannada film ‘Inspector Vikram’ starring Prajwal Devraj, Bhavana Menon. shooting progress now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X