»   » ಸುಗ್ಗಿ ಸಂಭ್ರಮದಲ್ಲಿ 'ಶ್ರದ್ಧಾ ಶ್ರೀನಾಥ್' ಅವರ ಸ್ಟೀಟ್ ಮಾತು!

ಸುಗ್ಗಿ ಸಂಭ್ರಮದಲ್ಲಿ 'ಶ್ರದ್ಧಾ ಶ್ರೀನಾಥ್' ಅವರ ಸ್ಟೀಟ್ ಮಾತು!

Written By:
Subscribe to Filmibeat Kannada

ಶ್ರದ್ಧಾ ಶ್ರೀನಾಥ್.....ಕನ್ನಡದ ಮೂಗುತ್ತಿ ಸುಂದರಿ. ಮೋಹಕ ನೋಟದಿಂದಲೇ ಸಿನಿಪ್ರೇಕ್ಷಕರ ಹೃದಯ ಕದ್ದಿರುವ ಶ್ರದ್ಧಾ ಈಗ ಸ್ಯಾಂಡಲ್ ವುಡ್ ನ 'ಅನನ್ಯ' ಟೀಚರ್. 'ಯು-ಟರ್ನ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಈ ಚೆಲುವೆ ಈಗ ವಿಭಿನ್ನ ಪಾತ್ರಗಳ ಮೂಲಕ ರಂಜಿಸಲು ತಯಾರಾಗುತ್ತಿದ್ದಾರೆ.

ಶ್ರದ್ಧಾ ಅವರು ಸದ್ಯ, ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ತಮ್ಮ ಪ್ರತಿಭೆಯನ್ನ ಪ್ರದರ್ಶಿಸುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ 'ಅಪರೇಷನ್ ಅಲಮೇಲಮ್ಮ' ಚಿತ್ರದಲ್ಲಿ 'ಅನನ್ಯ' ಟೀಚರ್ ಪಾತ್ರವನ್ನ ನಿರ್ವಹಿಸುತ್ತಿರುವ ಶ್ರದ್ಧಾ, ಟೀಸರ್ ನಲ್ಲೇ ಹೆಚ್ಚು ಇಷ್ಟವಾಗುತ್ತಿದ್ದಾರೆ.[ಇನ್ಮುಂದೆ ಸ್ಕೂಲ್ ಗೆ ಚಕ್ಕರ್ ಹಾಕೋ ಹಾಗಿಲ್ಲ, ಯಾಕಂದ್ರೆ 'ಅನನ್ಯ' ಟೀಚರ್ ಬಂದವ್ರೇ!]

ಇನ್ನೂ 'ಊರ್ವಿ' ಚಿತ್ರದಲ್ಲೂ ಶ್ರದ್ಧಾ ಶ್ರೀನಾಥ್ ಅವರದ್ದು ವಿಭಿನ್ನ ಪಾತ್ರ. ಶ್ರದ್ಧಾ ಅವರ ಜೊತೆಯಲ್ಲಿ ಶೃತಿ ಹರಿಹರನ್, ಶ್ವೇತಾ ಪಂಡಿತ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.[ಶ್ರದ್ಧಾ ಶ್ರೀನಾಥ್ ಅವರ ಮುದ್ದಾದ ಫೋಟೋಗಳು ಇಲ್ಲಿವೆ]

ಹೀಗೆ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಪ್ರತಿಭೆಯಿಂದ ಗುರುತಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್ ಅವರು, ನಿಮ್ಮ ಫಿಲ್ಮಿ ಬೀಟ್ ಜೊತೆ ಸಂಕ್ರಾಂತಿ ಹಬ್ಬವನ್ನ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ತಮ್ಮ ಜರ್ನಿ ಬಗ್ಗೆ, ಮೊದಲ ಚಿತ್ರದ ಯಶಸ್ಸಿನ ಬಗ್ಗೆ, ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಏನೇಲ್ಲಾ ಹೇಳಿದ್ದಾರೆ ಅಂತ ಅವರ ಮಾತಿನಲ್ಲಿ ಕೇಳಲು, ಈ ವಿಡಿಯೋ ನೋಡಿ.....

English summary
Kannada Actress Shradha Srinath wishes all Filmibeat Kannada viewers 'A Very Happy Sankranti'. Watch video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada