»   » ಇಷ್ಟಕ್ಕೂ ದುನಿಯಾ ವಿಜಯ್ ಏನು ಹೇಳುತ್ತಾರೆ?

ಇಷ್ಟಕ್ಕೂ ದುನಿಯಾ ವಿಜಯ್ ಏನು ಹೇಳುತ್ತಾರೆ?

Posted By:
Subscribe to Filmibeat Kannada

ನಟ ದುನಿಯಾ ವಿಜಯ್ ತಮ್ಮ ದಾಂಪತ್ಯ ಜೀವನದ ಇಕ್ಕಟ್ಟು ಬಿಕ್ಕಟ್ಟುಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪತ್ನಿ ನಾಗರತ್ನ ಅವರೊಂದಿಗೆ ವಿವಾಹ ವಿಚ್ಛೇದನ ಕೋರಿ ಅವರು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡುತ್ತಾ...

ನನಗಾಗಿರುವ ನೋವು ಇನ್ಯಾರಿಗೂ ಆಗಬಾರದು. ನನ್ನ ತಾಯಿ ನನಗೆ ಮುಖ್ಯ. ಎರಡು ವರ್ಷಗಳ ಹಿಂದೆ ನನ್ನ ತಾಯಿ ಇನ್ನೇನು ಸಾಯುವ ಹಂತಕ್ಕೆ ಹೋಗಿದ್ದರು. ಆಗ ಈ ಸೊಸೆ ಅನ್ನಿಸಿಕೊಂಡವರು ಎಲ್ಲಿ ಹೋಗಿದ್ದರು.

ಆಕೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು

ನಾನೀಗ ನ್ಯಾಯಾಲಯದ ಮೊರೆ ಹೋಗಿದ್ದೇನೆ. ನನಗೆ ನ್ಯಾಯ ಬೇಕು ಅಷ್ಟೇ. ಹೆತ್ತ ತಾಯಿಯನ್ನೇ ಬೀದಿ ಭಿಕಾರಿ ತರಹ ನೋಡಿದ್ದಾರೆ. ನನ್ನ ಪತ್ನಿ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾಗಿವೆ. ನನಗೆ ಸುಳ್ಳು ಹೇಳಲಿಕ್ಕೆ ಬರಲ್ಲ. ಆಕೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು.

ನನಗೆ ನನ್ನ ತಾಯಿ, ಅಕ್ಕ ಬೇಕು

ನನ್ನ ತಾಯಿ ಜೊತೆ ಬದುಕುತ್ತೇನೆ. ನನ್ನ ತಾಯಿ ಸಾಯುವ ಸ್ಥಿತಿಯಲ್ಲಿದ್ದರು. ಪತ್ನಿ ನೋಡಿಕೊಳ್ಳಲಿಲ್ಲ. ನನ್ನ ತಾಯಿ ಮುಖ್ಯ. ಪತ್ನಿ ಯಾವ ಆರೋಪವನ್ನಾದರೂ ಮಾಡಲಿ. ನಾನು ಸತ್ಯ, ನನ್ನ ತಾಯಿ ಸತ್ಯ. ನನಗೆ ನನ್ನ ತಾಯಿ, ಅಕ್ಕ ಬೇಕು. ಮಾನಸಿಕ ಕಿರುಕುಳವಾಗಿದೆ.

ಬಲವಂತವಾಗಿ ಯಾರೂ ಸಂಸಾರ ಮಾಡಕ್ಕಾಗಲ್ಲ

ಆಕೆಗೆ ನೀನು ಚೆನ್ನಾಗಿರು. ನಾನು ಚೆನ್ನಾಗಿರುತ್ತೇನೆ ಎಂದು ಹೇಳುತ್ತೇನೆ. ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನ ತಾಯಿಯನ್ನು ನಿನ್ನ ತಾಯಿ ಎಂದು ನೋಡು. ನಾನು ದುಡುಕಿ ನಿರ್ಧಾರ ತೆಗೆದುಕೊಂಡಿಲ್ಲ. ಪತ್ನಿಗೆ ಕಿರುಕುಳ ನೀಡಿಲ್ಲ. ಬಲವಂತವಾಗಿ ಯಾರೂ ಸಂಸಾರ ಮಾಡಕ್ಕಾಗಲ್ಲ.

ತಾಯಿಗಾಗಿ ನನ್ನ ಜೀವನ ಮೀಸಲು

ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಯಾವಾಗ ಸಿಗುತ್ತದೋ ಆವಾಗ ಸಿಗಲಿ. ಸಾಯೋವರೆಗೂ ಕಾಯುತ್ತೇನೆ. ನನ್ನ ಹೆತ್ತ ತಂದೆ ತಾಯಿಗೆ ಮೋಸವಾಗಿದೆ. ಹಾಗಾಗಿ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಮಕ್ಕಳು ನನ್ನೊಂದಿಗೆ ಇರುತ್ತಾರೆ. ದಯವಿಟ್ಟು ಅವರನ್ನು ಈ ಗಲಾಟೆಯಲ್ಲಿ ಎಳೆಯಬೇಡಿ. ತಾಯಿಗಾಗಿ ನನ್ನ ಜೀವನ ಮೀಸಲು ಎಂದಿದ್ದಾರೆ.

ವಿಜಿ ತಂದೆ ರುದ್ರಯ್ಯ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಏತನ್ಮಧ್ಯೆ ದುನಿಯಾ ವಿಜಿ ತಂದೆ ರುದ್ರಯ್ಯ ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಕ್ಷನ್ 13 (1A) ಅಡಿ ಅರ್ಜಿ ಸಲ್ಲಿಸಲಾಗಿದೆ. ವಕೀಲರಾದ ಸುಭಾಷ್ ಅವರು ದುನಿಯಾ ವಿಜಯ್ ಪರ ವಕೀಲರು. ಈ ನಡುವೆ ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ (ಜ.20) ಇನ್ನೇನು ಕೆಲವೇ ದಿನಗಳು ಬಾಕಿ ಇವೆ.

English summary
All is not well in Kannada actor Duniya Vijay's life as the actor has applied for divorce. The news became official with Vijay appearing before the family court on Thursday (January 17).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada