»   » ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?

ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ವಿಂಧ್ಯಾ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈಗವರು ಬೌರಿಂಗ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ವಿಂಧ್ಯಾ ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು? ಆಕೆಯ 'ಮನದ ಮರೆಯಲ್ಲಿ' ಏನಿತ್ತು?

ಈ ಪ್ರಶ್ನೆಗಳಿಗೆ ಉತ್ತರ ಈಗಷ್ಟೇ ಗೊತ್ತಾಗುತ್ತಿದೆ. ರಾಜೀವ್ ನೇತ್ರ ಅವರು ನಿರ್ದೇಶಿಸಿರುವ 'ಮನದ ಮರೆಯಲ್ಲಿ' ಚಿತ್ರ ವಿಂಧ್ಯಾ ಅಭಿನಯಿಸುತ್ತಿರುವ ಚಿತ್ರ. ಈ ಚಿತ್ರ ಸೆನ್ಸಾರ್ ಮುಗಿಸಿಕೊಂಡಿದ್ದು ಇನ್ನೇನು ಬಿಡುಗಡೆಯಾಗಬೇಕಿದೆ. ಚಿತ್ರದ ನಾಯಕ ನಟ ಶ್ರೀಕಾಂತ್ ಉರುಫ್ ಶ್ರೀಕಿ. [ಕನ್ನಡದ ಯುವ ನಟಿ ವಿಂಧ್ಯಾ ಆತ್ಮಹತ್ಯೆಗೆ ಯತ್ನ]


ಚಿತ್ರ ಇನ್ನೇನು ಬಿಡುಗಡೆಯಾಗಬೇಕು ಅಷ್ಟರಲ್ಲಾಗಲೆ ಚಿತ್ರದ ನಾಯಕಿ ಆತ್ಮಹತ್ಯೆಗೆ ಯತ್ನಿಸಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ರಾಜೀವ್ ನೇತ್ರ ಅವರು, ತಂದೆತಾಯಿಗೆ ವಿಂಧ್ಯಾ ಅವರು ಒಬ್ಬಳೇ ಮಗಳು. ತುಂಬ ಬಡಕುಟುಂಬ ಇವರದ್ದು...

ಅವರ ತಂದೆತಾಯಿಗೆ ಏನಾದರೂ ಸಹಾಯ ಮಾಡೋಣ ಅನ್ನಿಸಿ ಆಕೆಗೆ ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟೆವು. ಆ ದೃಷ್ಟಿಯಲ್ಲಿ ವಿಂಧ್ಯಾ ಅವರನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿದೆವು. ಅವರ ತಂದೆತಾಯಿಗೆ ಇಪ್ಪತ್ತೈದು ವರ್ಷಗಳಿಂದ ಕಣ್ಣು ಕಾಣುವುದಿಲ್ಲ. ವಿಂಧ್ಯಾರನ್ನು ಚೆನ್ನಾಗಿ ಓದಿಸಿದ್ದಾರೆ.

ವಿಂದ್ಯಾ ಅವರ ತಂದೆತಾಯಿ ರಂಗಭೂಮಿ ಹಿನ್ನೆಲೆಯುಳ್ಳವರು. ನನ್ನ ಮಗಳನ್ನು ಆಕ್ಟರ್ ಮಾಡಬೇಕು ಎಂಬ ಆಸೆ ಅವರಲ್ಲಿತ್ತು. ಇನ್ನು ಶೂಟಿಂಗ್ ಸ್ಟಾಟ್ ನಲ್ಲಿ ವಿಂಧ್ಯಾ ಅವರು ಎಲ್ಲರೊಂದಿಗೂ ಬೆರೆತು ಎಂಜಾಯ್ ಮಾಡುತ್ತಿದ್ದರು. ಶೂಟಿಂಗ್ ಗೆ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಅವರ ಭಾಗ ಚಿತ್ರೀಕರಣವನ್ನು ಮುಗಿಸಿಕೊಡುತ್ತಿದ್ದರು.

ಈ ಚಿತ್ರಕ್ಕೆ ಮಹೇಶ್ ಗೌಡ್ರು ನಿರ್ಮಾಪಕರು. ಅವರು ವಿಂದ್ಯಾ ಜೊತೆಗೆ ಮಾತನಾಡಿ ಯಾಕಮ್ಮಾ ಈ ರೀತಿ ಮಾಡಿದ್ದೀಯಾ ಇನ್ನೂ ಜೀವನ ಸಾಕಷ್ಟು ದೊಡ್ಡದಾಗಿದೆ. ನೀನು ಆ ಹುಡುಗನನ್ನು ಇಷ್ಟಪಟ್ಟಿದ್ದೀಯಾ ಓಕೆ, ನಾನು ಮುಂದೆ ನಿಂತು ಮದುವೆ ಮಾಡಿಸುತ್ತೇನೆ ಎಂದು ವಿಂಧ್ಯಾಗೂ ಹೇಳಿದ್ದರು ಹಾಗೂ ಆಕೆಯ ತಂದೆತಾಯಿ ಜೊತೆಗೂ ಮಾತನಾಡಿದ್ದರು.

ಮಂಜುನಾಥ ಎಂಬಾತನನ್ನು ವಿಂಧ್ಯಾ ಇಷ್ಟಪಟ್ಟಿದ್ದರು. ನೀವಿಬ್ಬರೂ ಇಷ್ಟಪಡುವುದಾದರೆ ಇಬ್ಬರಿಗೂ ಮದುವೆ ಮಾಡಿಸೋಣ ಎಂದೂ ಮಹೇಶ್ ಹೇಳಿದ್ದರು. ನಿನ್ನೆ ಏನಾಯಿತೋ ಏನೋ ಗೊತ್ತಿಲ್ಲ ಇಂದು ಬೆಳಗ್ಗೆ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗ ಕಂಪ್ಲೇಂಟ್ ಆಗಿದೆ. ಪೊಲೀಸರೆಲ್ಲಾ ಬಂದಿದ್ದಾರೆ. ಇನ್ನಷ್ಟೇ ಆಕೆಯ ಆರೋಗ್ಯದ ಬಗ್ಗೆ ಗೊತ್ತಾಗಬೇಕು. ಕಣ್ಣು ಬಿಡ್ತಿಲ್ಲ, ಚಲನವಲನಗಳೇನು ಇಲ್ಲ. ನಮ್ಮನ್ನೆಲ್ಲಾ ನೋಡಲು ಡಾಕ್ಟರ್ಸ್ ಬಿಡುತ್ತಿಲ್ಲ ಎನ್ನುತ್ತಾರೆ ರಾಜೀವ್.

ಡಿಸೆಂಬರ್ 2013ರಲ್ಲಿ ಮಂಜುನಾಥ್ ಪರಿಚಯವಾಗಿದೆ. ವಿಂಧ್ಯಾ ಸಹ ಆತನನ್ನು ಲವ್ ಮಾಡುತ್ತಿದ್ದಳು. ಆದರೆ ಆತನ ಸ್ವಭಾವ ಇಷ್ಟವಾಗದೆ ದೂರ ಉಳಿದಿದ್ದಾಳೆ. ಮದುವೆ ಆಗಲ್ಲ ಎಂದು ದೂರ ಸರಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥನೇನಾದರೂ ವಿಂದ್ಯಾ ಅವರಿಗೆ ಮೆಂಟಲಿ ಟಾರ್ಚರ್ ಕೊಟ್ಟಿದ್ದಾನಾ? ಅದರಿಂದ ಏನಾದರೂ ವಿಂದ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆಯೇ ಎಂಬ ಪ್ರಶ್ನೆಗಳು ಅವರ ಮನೆಯರವನ್ನು ಕಾಡುತ್ತಿವೆ.

English summary
Why budding Kannada actress Vindhya attempts suicide? What 'Manada Mareyalli' director Rajeev Netra says on her suicide attempt. The actress is admitted in a Bowring hospital in Bangalore after she attempted suicide by consuming excess sleeping pills and treatment is going on.
Please Wait while comments are loading...