»   » ಡಬ್ಬಿಂಗ್ ಬೇಕಾ, ಬೇಡ್ವಾ: ಪ್ರಕಾಶ್ ರೈ ಹೇಳಿದ್ದೇನು?

ಡಬ್ಬಿಂಗ್ ಬೇಕಾ, ಬೇಡ್ವಾ: ಪ್ರಕಾಶ್ ರೈ ಹೇಳಿದ್ದೇನು?

Posted By:
Subscribe to Filmibeat Kannada

ಡಬ್ಬಿಂಗ್ ಎನ್ನುವ ಭೂತ ಕನ್ನಡ ಚಿತ್ರೋದ್ಯಮಕ್ಕೆ ಪ್ರವೇಶಿಸುತ್ತಿರುವುದು ನಿಜವಾದ ನೋವಿನ ವಿಚಾರ. ಚಿತ್ರೋದ್ಯಮಕ್ಕೆ ಡಬ್ಬಿಂಗ್ ಪ್ರವೇಶಿಸುತ್ತಿರುವ ಹಿಂದೆ ಬಹು ದೊಡ್ಡ ಮಾಫಿಯಾ ಅಡಗಿದೆ ಎಂದು ಪ್ರಕಾಶ್ ರೈ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹಿಂದೆಲ್ಲಾ ಕನ್ನಡಕ್ಕೆ ಮತ್ತು ಕನ್ನಡ ಚಿತ್ರೋದ್ಯಮಕ್ಕೆ ಧಕ್ಕೆ ಬಂದಾಗ ಡಾ. ರಾಜಕುಮಾರ್ ಇದ್ದರು. ಅವರ ನೇತೃತ್ವದಲ್ಲಿ ಒಟ್ಟಾಗಿ ಹೋರಾಡುತ್ತಿದ್ದೆವು. ಅವರು ಧೈರ್ಯದಿಂದ ಮುನ್ನುಗ್ಗಿತ್ತಿದ್ದರು ಎಂದು ಪ್ರಕಾಶ್ ರೈ ಹೇಳಿದ್ದಾರೆ. (ಕನ್ನಡ ತಾರೆಗಳು ಒಂದಾಗುವ ಸಮಯ ಮತ್ತೆ ಬಂದಿದೆ)

Without Dr.Rajkumar Kannada industry cannot fight properly against dubbing culture

ಮಂಗಳವಾರ ( ಜ 14) ಮೈಸೂರಿನ ರಂಗಾಯಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದ ಪ್ರಕಾಶ್ ರೈ, ಡಬ್ಬಿಂಗ್ ಭೂತದ ಹಿಂದೆ ದೊಡ್ಡ ಮಾಫಿಯಾ ಗ್ಯಾಂಗೇ ಇದೆ.

ಡಾ. ರಾಜಕುಮಾರ್ ಇದ್ದಿದ್ದರೆ ಕನ್ನಡಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅವರಿಲ್ಲದೇ ನಾವೆಲ್ಲಾ ಅನಾಥರಾಗಿದ್ದೇವೆ ಎಂದಿದ್ದಾರೆ.

ಡಬ್ಬಿಂಗ್ ಬೇಡ ಎಂದು ನಾವು ನ್ಯಾಯಾಲಯಕ್ಕೆ ಹೋಗುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ವಿಷಾದನೀಯ. ನಾನು ನನ್ನ ಕೊನೆಯ ಉಸಿರು ಇರುವವರೆಗೂ ಕನ್ನಡದ ಉಳಿವಿಗೆ ಬರುತ್ತೇನೆ ಎಂದು ರೈ ಈ ಸಂದರ್ಭದಲ್ಲಿ ಹೇಳಿದ್ದಾರೆ. (ಡಬ್ಬಿಂಗ್ ಬೇಡ ಅನ್ನೋರಿಗೆ ಪ್ರಶ್ನೆ-ಪರಿಹಾರಗಳು)

ಡಬ್ಬಿಂಗ್ ಬಂದರೆ ಇಲ್ಲಿನ ಕಲಾವಿದರಿಗೆ, ತಂತ್ರಜ್ಞರಿಗೆ, ನಾಟಕ, ಸಿನಿಮಾ, ಧಾರವಾಹಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಭಯ ನಮ್ಮನ್ನು ಕಾಡುತ್ತಿದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

English summary
Without Dr.Rajkumar Kannada industry cannot fight properly against dubbing culture, Prakash Rai in Mysore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada