Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ಪ್ರೇಮ್ ವಿರುದ್ದ ರೂಪಾ ಅಯ್ಯರ್ ಸಿಡಿಸಿದ ಬಾಂಬ್
ರೂಪಾ ಐಯ್ಯರ್ ನಿರ್ದೇಶಿಸಿ, ನಿರ್ಮಿಸುತ್ತಿರುವ ದ್ವಿಭಾಷಾ ಚಿತ್ರ 'ಚಂದ್ರ' ತೆರೆಕಾಣಲು ಇನ್ನು ಒಂದೇ ವಾರ ಬಾಕಿ. ಆದರೆ ಚಿತ್ರದ ನಾಯಕ ಮತ್ತು ನಿರ್ದೇಶಕರ ನಡುವಣ ಜಗಳ ಅಂತ್ಯ ಕಾಣುತ್ತಿಲ್ಲ. ಚಂದ್ರ ಚಿತ್ರದ ಪ್ರೆಸ್ ಮೀಟ್ ನಂತರ ನಡೆದ ಬೆಳವಣಿಗೆ ಬಗ್ಗೆ ತೀವ್ರ ಬೇಸರ ವ್ಯಕ್ತ ಪಡಿಸಿದ ರೂಪಾ ಐಯ್ಯರ್, ನಾಯಕ ನಟ ಪ್ರೇಮ್ ಚೀಪ್ ಪಬ್ಲಿಸಿಟಿಗೆ ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಪ್ರೆಸ್ ಮೀಟ್ ನಂತರ ಇಬ್ಬರ ನಡುವಣ ವಾಕ್ಸಮರ ಮುಂದುವರಿಯುತ್ತಲೇ ಸಾಗುತ್ತಿದೆ. ಚಿತ್ರದಲ್ಲಿ ಗೆಸ್ಟ್ ಅಪೀಯರೆನ್ಸ್ ನಲ್ಲಿ ಬರುವ ನಟ ಯಶ್ ಗೆ ಹೆಚ್ಚಿನ ಮಹತ್ವ ಚಿತ್ರತಂಡ ನೀಡಿದೆ ಎನ್ನುವುದು ಪ್ರೇಮ್ ಕೋಪಕ್ಕೆ ಕಾರಣ. ಇತ್ತೀಚಿನ ವಿದ್ಯಮಾನಗಳ ಬಗ್ಗೆ ರೂಪಾ ಐಯ್ಯರ್ ಒನ್ ಇಂಡಿಯಾಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ: ನಟ ಪ್ರೇಮ್ ನಿಮ್ಮ ಮೇಲೆ ಮಾಡಿರುವ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯ?
ರೂಪಾ: ಈ ರೀತಿಯ ಚೀಪ್ ಪಬ್ಲಿಸಿಟಿ ಹಿಂದೆ ಪ್ರೇಮ್ ಯಾಕೆ ಬಿದ್ದಿದ್ದಾರೋ ಗೊತ್ತಿಲ್ಲ. ಪ್ರೇಮ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರೇಮ್ ಗೆ ಖುದ್ದು ನಾನೇ ಫೋನ್ ಮಾಡಿ ಕರೆಯಬೇಕಿತ್ತಂತೆ. ನನಗೆ ಮತ್ತು ನನ್ನ ತಂದೆಗೆ ಸಾರ್ವಜನಿಕವಾಗಿ ನಿಂದನೆ ಮಾಡಿದ ಅವರನ್ನು ಕರೆಯುವ ಅವಶ್ಯಕತೆ ನನಗಿಲ್ಲ. ಪ್ರೇಮ್ ಗೆ ನಟ ಯಶ್ ಕಂಡರೆ ಹೊಟ್ಟೆಕಿಚ್ಚು, ಚಿತ್ರದ ಪೋಸ್ಟರ್ ನಲ್ಲಿ ಯಶ್ ಫೋಟೊ ಹಾಕಿದರೆ ಇನ್ನೂ ಹೆಚ್ಚಿನ ಪಬ್ಲಿಸಿಟಿ ಸಿಗುವ ಕಾರಣಕ್ಕಾಗಿ ಅವರನ್ನು ಬಳಸಿಕೊಳ್ಳಲಾಗಿದೆ. ಇದನ್ನು ಪ್ರೇಮ್ ಅರ್ಥ ಮಾಡಿಕೊಳ್ಳಬೇಕು. ಯಾಕೆ ಪ್ರೇಮ್ ಅವರನ್ನು ಚಿತ್ರದ ನಾಯಕನನ್ನಾಗಿ ಮಾಡಿದ್ದೀರಾ ದರ್ಶನ, ಉಪೇಂದ್ರ ಇಲ್ಲವೇ ಎಂದು ಶ್ರಿಯಾ ಸರನ್ ಕೂಡ ನನ್ನನ್ನು ಕೇಳಿದ್ದರು. ನಾನು ಪ್ರೇಮ್ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸೋಣ ಎನ್ನುವ ಕಾರಣಕ್ಕಾಗಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡೆ.
ಸಂದರ್ಶನ ಮುಂದುವರಿಯುತ್ತದೆ..

ಚಂದ್ರ ಚಿತ್ರದ ಪ್ರೊಮೋದಲ್ಲಿ ಪ್ರೇಮ್ ಗೆ ಕೊಕ್
ಪ್ರ: ಯಶ್ ನನ್ನ ಉತ್ತಮ ಸ್ನೇಹಿತ ಎಂದು ಪ್ರೇಮ್ ಹೇಳುತ್ತಾರೆ. ಪ್ರೇಮ್ ಗಿಂತ ನನಗೇ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಯಶ್ ಹೇಳುತ್ತಾರಂತಲ್ಲಾ?
ರೂಪಾ: ಇದನ್ನು ನಾನು ಒಪ್ಪುವುದಿಲ್ಲ. ಯಶ್ ನನ್ನ ಮತ್ತು ಪ್ರೇಮ್ ಜೊತೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗಲು ಈ ರೀತಿ ಹೇಳಿರಬಹುದು ಮತ್ತು ಇಂಥಹ ಸಣ್ಣ ವಿಚಾರದಲ್ಲಿ ಆಸಕ್ತಿ ಇಲ್ಲದೇ ಇರಬಹುದು.

ರೂಪಾ ಐಯ್ಯರ್ ಮತ್ತು ಪ್ರೇಮ್
ಪ್ರ:
ಈ
ಸಮಸ್ಯೆ
ಪರಿಹಾರಕ್ಕೆ
ಚಿತ್ರರಂಗದಿಂದ
ಯಾರೂ
ಮುಂದೆ
ಬಂದಿಲ್ಲವೇ?
ರೂಪಾ: ಅಂಬರೀಶ್ ಮತ್ತು ರವಿಚಂದ್ರನ್ ಈಗಾಗಲೇ ವಿಷಯವನ್ನು ದೊಡ್ಡದು ಮಾಡದೇ ಸೂಕ್ತವಾಗಿ ಪರಿಹರಿಸಿಕೊಳ್ಳಿ ಎಂದು ಪ್ರೇಮ್ ಗೆ ಹೇಳಿದ್ದಾರೆ. ಇಡೀ ಚಿತ್ರರಂಗ ನನ್ನ ಪರವಾಗಿದೆ.

ಚಂದ್ರ ಗಲಾಟೆ
ಪ್ರ:
ಪ್ರಚಾರಕ್ಕೆ
ನಾಯಕ
ಬರದೇ
ಇದ್ದರೆ
ಚಿತ್ರಕ್ಕೆ
ಹಿನ್ನಡೆಯಾಗುವುದಿಲ್ಲವೇ?
ರೂಪಾ: ಯಾವುದೇ ಹಿನ್ನಡೆಯಾಗುವುದಿಲ್ಲ ಎನ್ನುವುದು ನನ್ನ ನಂಬಿಕೆ. ಚಿತ್ರ ಪ್ರೇಮಿಗಳಿಗೆ ಈಗಾಗಲೇ ಎಲ್ಲಾ ವಿಷಯ ತಿಳಿದಿದೆ. ಶಿಸ್ತುಬದ್ದವಾಗಿ ಚಿತ್ರಕ್ಕೆ ಪ್ರಚಾರ ನೀಡುತ್ತಿದ್ದೇವೆ.

ರೂಪಾ ನಿರ್ದೇಶನದ ಚಂದ್ರ
ಪ್ರ:
ಈ
ಸಮಸ್ಯೆಗಳನ್ನು
ಹೊರತು
ಪಡಿಸಿದರೆ,
ಚಿತ್ರದ
ಪ್ರಚಾರ
ಯಾವ
ರೀತಿ
ಸಾಗುತಿದೆ?
ರೂಪಾ: ಚಿತ್ರಮಂದಿರದ ಮಾಲೀಕರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಹೆಚ್ಚು ಸಾಧ್ಯವೋ ಅಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ.

ಇದೇ ತಿಂಗಳು ಬಿಡುಗಡೆ
ಇದೇ ತಿಂಗಳ ಜೂನ್ 27ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಪ್ರೇಮ್, ಶ್ರಿಯಾ ಸರನ್, ಗಣೇಶ್ ವೆಂಕಟ್ ರಾಮನ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಅತಿಥಿ ಪಾತ್ರದಲ್ಲಿ ಯಶ್ ಬಂದು ಹೋಗುತ್ತಾರೆ. ಚಿತ್ರಕ್ಕೆ ಗೌತಮ್ ಶ್ರೀವಾಸ್ತವ್ ಸಂಗೀತ ನೀಡಿದ್ದಾರೆ.