For Quick Alerts
  ALLOW NOTIFICATIONS  
  For Daily Alerts

  ಅಂಬೇಡ್ಕರ್ ಕುರಿತ 'ಮಹಾನಾಯಕ' ಧಾರಾವಾಹಿ ಪ್ರಸಾರದ ಹಿಂದಿದೆ ಯಶ್ ತುಂಬಿದ್ದ ಧೈರ್ಯ!

  |

  ಅಂಬೇಡ್ಕರ್ ಜೀವನ ಆಧರಿತ 'ಮಹಾನಾಯಕ' ಧಾರಾವಾಹಿ ಜೀ ವಾಹಿನಿಯಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ.

  ಆದರೆ ಅಂಬೇಡ್ಕರ್ ಕುರಿತ ಈ ಧಾರಾವಾಹಿಯ ಪ್ರಸಾರವನ್ನು ನಿಲ್ಲಿಸಬೇಕು ಎಂದು ಬೆದರಿಕೆ ಸಂದೇಶಗಳು, ಕರೆಗಳು ಬರುತ್ತಿವೆ ಎಂದು ಕೆಲವು ದಿನಗಳ ಹಿಂದಷ್ಟೆ ಜೀ ವಾಹಿನಿಯ ರಾಘವೇಂದ್ರ ಹುಣಸೂರು ಅವರಿಗೆ ಬಂದಿದ್ದಾಗಿ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

  'ಮಹಾನಾಯಕ' ಧಾರಾವಾಹಿ ಪ್ರಸಾರ ಮಾಡದಿರುವುದಕ್ಕೆ ಕಾರಣವೇನು?

  ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಕರೆಗಳು ಬಂದ ಬಗ್ಗೆ ಪೊಲೀಸ್ ದೂರನ್ನು ಸಹ ಆಗ ನೀಡಲಾಗಿತ್ತು. ಆದರೆ ಆ ಕ್ಲಿಷ್ಟ ಸಂದರ್ಭದಲ್ಲಿ ರಾಘವೇಂದ್ರ ಹುಣಸೂರು ಅವರ ಬೆಂಬಲಕ್ಕೆ ನಿಂತ ಕನ್ನಡದ ಸೂಪರ್ ಸ್ಟಾರ್ ನಟ ಯಶ್ ಅಂತೆ.

  ಯಶ್ ಸಹಾಯ ನೆನೆದ ರಾಘವೇಂದ್ರ ಹುಣಸೂರು

  ಯಶ್ ಸಹಾಯ ನೆನೆದ ರಾಘವೇಂದ್ರ ಹುಣಸೂರು

  ಹೌದು, ಈ ಬಗ್ಗೆ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ರಾಘವೇಂದ್ರ ಹುಣಸೂರು ಮಾತನಾಡಿದ್ದಾರೆ. ಜೀ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಮಹಾನಾಯಕ ಧಾರಾವಾಹಿಗಾಗಿ ಪ್ರಶಸ್ತಿ ಸ್ವೀಕರಿಸಿದ ರಾಘವೇಂದ್ರ ಹುಣಸೂರು, ಮಹಾನಾಯಕ ಧಾರಾವಾಹಿ ಪ್ರಸಾರದ ಹಿಂದೆ ಯಶ್ ಅವರ ಪಾತ್ರವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.

  ಯಾವುದೇ ಕಾರಣಕ್ಕೂ ಧಾರಾವಾಹಿ ನಿಲ್ಲಿಸಬೇಡಿ ಎಂದಿದ್ದ ಯಶ್

  ಯಾವುದೇ ಕಾರಣಕ್ಕೂ ಧಾರಾವಾಹಿ ನಿಲ್ಲಿಸಬೇಡಿ ಎಂದಿದ್ದ ಯಶ್

  ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಸಂದೇಶಗಳು ಬಂದಾಗ ನಟ ಯಶ್, ರಾಘವೇಂದ್ರ ಹುಣಸೂರು ಅವರಿಗೆ ಕರೆ ಮಾಡಿದ್ದರಂತೆ. ಯಾವುದೇ ಕಾರಣಕ್ಕೂ ಧಾರಾವಾಹಿಯನ್ನು ನಿಲ್ಲಿಸಬೇಡಿ ಎಂದು ನನಗೆ ಯಶ್ ಧೈರ್ಯ ಹೇಳಿದರು, ಶಕ್ತಿಯಾಗಿ ನಿಂತರು' ಎಂದಿದ್ದಾರೆ ರಾಘವೇಂದ್ರ ಹುಣಸೂರು.

  ಅಂಬೇಡ್ಕರ್ ಕುರಿತ ಧಾರಾವಾಹಿ 'ಮಹಾನಾಯಕ' ನಿಲ್ಲಿಸುವಂತೆ ಬೆದರಿಕೆ

  ಸೆಪ್ಟೆಂಬರ್ ತಿಂಗಳಲ್ಲಿ ಬೆದರಿಕೆ ಸಂದೇಶ ಹಾಗೂ ಕರೆ

  ಸೆಪ್ಟೆಂಬರ್ ತಿಂಗಳಲ್ಲಿ ಬೆದರಿಕೆ ಸಂದೇಶ ಹಾಗೂ ಕರೆ

  ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜೀವನ ಕುರಿತ 'ಮಹಾನಾಯಕ' ಧಾರಾವಾಹಿ ಪ್ರಸಾರ ನಿಲ್ಲಿಸುವಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಸಂದೇಶ ಹಾಗೂ ಕರೆಗಳು ಬಂದಿದ್ದವು. ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರೇ ಹೇಳಿಕೊಂಡಿದ್ದರು.

  ಸೂಪರ್-ಡೂಪರ್ ಹಿಟ್ ಧಾರಾವಾಹಿ ನಿರ್ದೇಶಕ ಈಗ ತರಕಾರಿ ವ್ಯಾಪಾರಿ

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth
  ಕನ್ನಡಕ್ಕೆ ಡಬ್ ಆಗಿರುವ ಧಾರಾವಾಹಿ

  ಕನ್ನಡಕ್ಕೆ ಡಬ್ ಆಗಿರುವ ಧಾರಾವಾಹಿ

  ಮಹಾನಾಯಕ ಧಾರಾವಾಹಿಯು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಅದು ಕನ್ನಡಕ್ಕೆ ಡಬ್ ಆದ ಧಾರಾವಾಹಿಯಾಗಿದೆ. ರಾಜ್ಯದಲ್ಲಿ ಈಗಾಗಲೇ ಮಹಾನಾಯಕ ಧಾರಾವಾಹಿ ಜನಪ್ರಿಯಗೊಂಡಿದ್ದು, ಹಳ್ಳಿಗಳಲ್ಲಿ ಮಹಾನಾಯಕ ಧಾರಾವಾಹಿಯ ಫ್ಲೆಕ್ಸ್‌ಗಳನ್ನು ನಿಲ್ಲಿಸಲಾಗಿದೆ.

  English summary
  Actor Yash supported Ambedkar life story Mahanayaka serial. When Raghavendra Hunsuru gets threat calls to stop serial, Yash supported Raghavendra to air Mahanayaka serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X