»   » ಈ ವರ್ಷದ ಅತ್ತ್ಯುತ್ತಮ ನಾಯಕಿ ಯಾರು?

ಈ ವರ್ಷದ ಅತ್ತ್ಯುತ್ತಮ ನಾಯಕಿ ಯಾರು?

Posted By:
Subscribe to Filmibeat Kannada

ನಾಯಕಿಯರ ವಿಷಯಕ್ಕೆ ಬರೋದಾದರೆ, 2015 ಸ್ವಲ್ಪ ಡಲ್ಲು. ಯಾಕಂದ್ರೆ, ಗಾಂಧಿನಗರದ ಲಕ್ಕಿ ಸ್ಟಾರ್ ರಮ್ಯಾ ಈ ವರ್ಷ ಪರದೆ ಮೇಲೆ ಇರಲಿ, ಕರ್ನಾಟಕದಲ್ಲಿ ಕಾಣಿಸಿಕೊಳ್ಳೋಕೆ ಶುರುಮಾಡಿದ್ದೇ ಅರ್ಧ ವರ್ಷ ಕಳೆದ ನಂತರ.

ಅವ್ರು ಬಿಟ್ರೆ, ಸ್ಯಾಂಡಲ್ ವುಡ್ ನಲ್ಲಿ ಸದ್ಯ ಲಕ್ಕಿ ಅನಿಸಿಕೊಂಡಿರುವ ರಾಧಿಕಾ ಪಂಡಿತ್ 'ಎಂದೆಂದಿಗೂ' ಅಂತ ಡ್ಯುಯೆಟ್ ಹಾಡಿದ್ದು ಮಾತ್ರ ನೆನಪು. ಪ್ರಿಯಾಮಣಿ ಕಿರುತೆರೆಗಷ್ಟೇ ಸೀಮಿತವಾದರು. ಐಂದ್ರಿತಾ ರೇ ಐಟಂ ಸಾಂಗ್ ಮಾಡಿದ್ರು. ರಾಗಿಣಿ 'ನಾಟಿ ಕೋಳಿ' ಜಗಳದಲ್ಲೇ ಬಿಜಿಯಾಗ್ಬಿಟ್ರು.

ಹೀಗಿರುವಾಗ, ಈ ವರ್ಷ ಸಿಲ್ವರ್ ಸ್ಕ್ರೀನ್ ನಲ್ಲಿ ಹೆಚ್ಚು ಮಿನುಗಿದ ನಟಿಯರ ಪೈಕಿ ಯಾರಿಗೆ 'ಅತ್ತ್ಯುತ್ತಮ ನಟಿ' ಪಟ್ಟ ನೀಡಬಹುದು? [2015 ರ ಅತ್ತ್ಯುತ್ತಮ ಕನ್ನಡ ನಟ ಯಾರು?]

2015 ರಲ್ಲಿ ಉತ್ತಮ ಅಭಿನಯ ನೀಡಿದ ನಾಯಕಿಯರ ಪಟ್ಟಿ ಕೆಳಗಿರುವ ಸ್ಲೈಡ್ ಗಳಲ್ಲಿದೆ. ಅವುಗಳಲ್ಲಿ ನಿಮ್ಮ ಪ್ರಕಾರ ಈ ವರ್ಷದ ಅತ್ತ್ಯುತ್ತಮ ನಾಯಕಿ ಯಾರು ಅಂತ ನಮಗೆ ತಿಳಿಸಿ.....

ಅಮೂಲ್ಯ

ಬೇಬಿ ಡಾಲ್ ಅಮೂಲ್ಯ ಈ ವರ್ಷ ನಟಿಸಿದ್ದು ಮೂರು ಚಿತ್ರಗಳಲ್ಲಿ. 'ಮಳೆ', 'ಖುಷಿ ಖುಷಿಯಾಗಿ' ಮತ್ತು 'ರಾಮ್ ಲೀಲಾ'. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಲೀಡಿಂಗ್ ನಲ್ಲಿರುವ ನಾಯಕಿಯರ ಪೈಕಿ ನಟಿ ಅಮೂಲ್ಯ ಕೂಡ ಒಬ್ಬರು. ಬೇಡಿಕೆ ಜೊತೆಗೆ ಪ್ರತಿಭೆಯಲ್ಲೂ ಮುಂಚೂಣಿಯಲ್ಲಿರುವ ಅಮೂಲ್ಯ ಈ ವರ್ಷದ ಅತ್ತ್ಯುತ್ತಮ ನಾಯಕಿ ಪಟಕ್ಕೆ ಏರಬಹುದಾ?[ಚಿತ್ರ ವಿಮರ್ಶೆ: 'ಖುಷಿ ಖುಷಿಯಾಗಿ' ಹೋಗಿ ಬನ್ನಿ]

ಮಾಲಾಶ್ರೀ

ಸ್ಯಾಂಡಲ್ ವುಡ್ ನ ಲೇಡಿ ರ್ಯಾಂಬೋ ಮಾಲಾಶ್ರೀ ಈ ವರ್ಷ 'ಗಂಗಾ' ಸಿನಿಮಾ ಮೂಲಕ ಕಮಾಲ್ ಮಾಡಿದ್ರು. ಭಾರಿ ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ 'ಗಂಗಾ' ಸಿನಿಮಾ ಮೊದಲ ವಾರ ಪ್ರೇಕ್ಷಕರಿಗೆ ಕಿಕ್ ಕೊಡ್ತು. ಅದ್ರಲ್ಲೂ ಮಾಲಾಶ್ರೀ ಪವರ್ ಫುಲ್ ಪರ್ಫಾಮೆನ್ಸ್..ಬರೀ ಮಾಸ್ ಆಡಿಯನ್ಸ್ ಗೆ ಅಷ್ಟೇ ಅಲ್ಲ, ಕ್ಲಾಸ್ ಆಡಿಯನ್ಸ್ ನೂ ಅಟ್ರ್ಯಾಕ್ಟ್ ಮಾಡ್ತು.

ಪೂಜಾ ಗಾಂಧಿ

'ತಿಪ್ಪಜ್ಜಿ ಸರ್ಕಲ್' ಮತ್ತು 'ಅಭಿನೇತ್ರಿ'ಯಂತಹ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಾಯಕಿಯಾಗಿ ನಟಿ ಪೂಜಾ ಗಾಂಧಿ ಅಭಿನಯಿಸಿದ್ದಾರೆ. ಅವರ ಅಭಿನಯ ನಿಮಗೆ ಇಷ್ಟವಾಯ್ತಾ?[ಚಿತ್ರ ವಿಮರ್ಶೆ: ಫಲಿಸಿತು 'ಅಭಿನೇತ್ರಿ' ಪೂಜಾಫಲ]

ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಈ ವರ್ಷ ಕಾಣಿಸಿಕೊಂಡಿದ್ದು 'ಎಂದೆಂದಿಗೂ' ಸಿನಿಮಾದಲ್ಲಿ ಮಾತ್ರ. 'ಎಂದೆಂದಿಗೂ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಆಗ್ಲಿಲ್ಲ ನಿಜ. ಆದ್ರೆ, ಅದರಲ್ಲಿ ರಾಧಿಕಾ ಪಂಡಿತ್ ಅಭಿನಯದ ಬಗ್ಗೆ ತುಟಿ ಬಿಚ್ಚುವ ಹಾಗಿಲ್ಲ.[ಚಿತ್ರ ವಿಮರ್ಶೆ: 'ಎಂದೆಂದಿಗೂ' ಸಾಕೆನ್ನಿಸುವ ಚಿತ್ರ]

ರಚಿತಾ ರಾಮ್

'ರನ್ನ'ನ ಬೆಡಗಿ ರಚಿತಾ ರಾಮ್ ಸೀರೆಯುಟ್ಟು ನಿಮ್ಮ ಮನಗೆದ್ರಾ?[ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]

ಹರಿಪ್ರಿಯಾ

'ಬುಲೆಟ್ ಬಸ್ಯಾ' ಚಿತ್ರದ ನಾಯಕಿ ಹರಿಪ್ರಿಯಾ ನಟನೆ ಹೇಗಿದೆ?

ಪಾರುಲ್ ಯಾದವ್

'ವಾಸ್ತು ಪ್ರಕಾರ' ಸಿನಿಮಾದಲ್ಲಿ ಅರ್ಧಂಬರ್ಧ ಕನ್ನಡ ಮಾತನಾಡಿದ ನಟಿ ಪಾರುಲ್ ಯಾದವ್ ಉತ್ತಮ ನಾಯಕಿ ಅನ್ಬಹುದಾ?[ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು]

ಶಾನ್ವಿ ಶ್ರೀವಾಸ್ತವ

'ಮಾಸ್ಟರ್ ಪೀಸ್' ಸಿನಿಮಾದಲ್ಲಿ ಬ್ಯೂಟಿಫುಲ್ ನಾಗವಲ್ಲಿ ಆಗಿ ಕಾಣಿಸಿಕೊಂಡಿರುವ ನಟಿ ಶಾನ್ವಿ ಶ್ರೀವಾಸ್ತವ ಹರೆಯದ ಹುಡುಗರ ದಿಲ್ ಗೆದ್ದಿರುವುದು ಖಂಡಿತ.[ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]

ನಿಮ್ಮ ಪ್ರಕಾರ ಬೆಸ್ಟ್ ಹೀರೋಯಿನ್ ಯಾರು?

ಈ ಎಲ್ಲಾ ನಟಿಯರ ಪೈಕಿ 'ಬೆಸ್ಟ್ ಹೀರೋಯಿನ್-2015' ಪಟ್ಟ ಯಾರಿಗೆ ನೀಡಬಹುದು? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Who is the Best Actress of Sandalwood in 2015. Tell us your choice.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada