»   » ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!

ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!

Posted By: ಕುಸುಮ
Subscribe to Filmibeat Kannada

ಸ್ಯಾಂಡಲ್ವುಡ್ನಲ್ಲಿ 'ದನ ಕಾಯೋನು' ಚಿತ್ರ ತಯಾರಾಗಿ 6 ತಿಂಗಳೇ ಕಳೆದು ಹೋಯ್ತು. ಯೋಗರಾಜ ಭಟ್ಟರೂ ಚಿತ್ರವನ್ನು ನೆನಪಿಸೋಕೆ ಆಗಾಗ ಏನೋ ಒಂದು ಮಜವಾದ ಐಟಂ ಕೊಡ್ತಾನೇ ಇರ್ತಾರೆ. ಆದ್ರೆ ಈ ತರ ದಿನಾ ದನ ಕಾಯೋದರಲ್ಲಿ ಭಟ್ಟರಿಗೂ ಮಜಾ ಇಲ್ಲ. ಸಿನಿ ಪ್ರೇಮಿಗಳಿಗೂ ಮಜಾ ಇಲ್ಲ!

ಹಾಡುಗಳು ಬಂತು, ಟ್ರೇಲರ್ ಬಂತು. ಹೆಚ್ಚೂ ಕಡಿಮೆ ಪ್ರತೀವಾರ ಪತ್ರಿಕೆಗಳಲ್ಲಿ ಜಾಹೀರಾತು ಬರುತ್ತಲೇ ಇದೆ. ಆದರೆ ಸಿನಿಮಾ ಮಾತ್ರ ಯಾವಾಗ ತೆರೆಗೆ ಬರುತ್ತೆ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. [ದುನಿಯಾ ವಿಜಯ್ 'ದನ' ಕಾಯ್ಲಿಲ್ಲ.! ಪ್ರಿಯಾಮಣಿ ತಿರುಗಿ ನೋಡ್ಲಿಲ್ಲ.! ಯಾಕೆ?]


ತೆಲುಗಿನ ಸೂಪರ್ ಸ್ಟಾರ್ ನಟ ನಾಗಾರ್ಜುನನ ಪುತ್ರ ಅಖಿಲ್ ಅಕ್ಕಿನೇನಿ ಅಭಿನಯದ 'ಅಖಿಲ್' ಸಿನಿಮಾದ ವಿತರಣಾ ಹಕ್ಕುಗಳನ್ನು ಕರ್ನಾಟಕದಲ್ಲಿ ಕೋಟಿ ಕೋಟಿಗಳಿಗೆ ಪಡೆದುಕೊಂಡ ಆರ್‌ಎಸ್ ಪ್ರೊಡಕ್ಷನ್ಸ್ ಅದರಲ್ಲಿ ಸಂಪೂರ್ಣ ನಷ್ಟ ಅನುಭವಿಸಿದ್ದರಿಂದ, ಇದೇ ಸಂಸ್ಥೆ ನಿರ್ಮಿಸುತ್ತಿರುವ ದನ ಕಾಯೋನು ಮತ್ತಿತರ ಚಿತ್ರಗಳು ನಿಧಾನವಾಗಿ ತಯಾರಾಗುತ್ತಿವೆ ಎನ್ನುವ ಸುದ್ದಿ ಬಂದಿತ್ತು.

Yogaraj Bhat's Dana Kayonu release getting delayed

ಆದರೆ ಪ್ರತೀವಾರ ಜಾಹೀರಾತು ಕೊಡುತ್ತಿರುವ ಸಿನಿಮಾದ ಧನವನ್ನು ಕಾಯುವವರು ಸಿನಿಮಾ ಬೇಗ ರಿಲೀಸ್ ಮಾಡಿದರೆ, ನಿಜವಾಗಿ ದನಗಳಿಂದ ಧನವನ್ನು ಪಡೆಯಬಹುದೇನೋ? ಆದರೆ ಅದ್ಯಾಕೋ ಭಟ್ಟರ ಮತ್ತೊಂದು ಸಿನಿಮಾ ತೆರೆಗೆ ಬರೋಕೆ ಸಮಯವೇ ಬಂದಂತಿಲ್ಲ. [ವಿವಾದದಲ್ಲಿ ಸಿಲುಕಿದ ಯೋಗರಾಜ್ ಭಟ್ಟರ 'ದನ ಕಾಯೋನು']

ಇನ್ನು ಈಗ ಕರ್ನಾಟಕದಲ್ಲಿ ಹೊಸಬರ ಚಿತ್ರಗಳ ಹವಾ ಬೇರೆ ಜೋರಾಗಿದ್ದು ಥಿಯೇಟರ್ಗಳ ಸಮಸ್ಯೆಯೂ ಇದೆ. ಯಾಕೆ ರಿಸ್ಕ್ ತೆಗೆದುಕೊಳ್ಳೋದು, ಇಷ್ಟು ದಿನಾನೇ ಕಾದಿದ್ದೀವಂತೆ, ಇನ್ನೂ ಸ್ವಲ್ಪ ದಿನ ಧನಕ್ಕಾಗಿ ದನ ಕಾಯೋಣ ಅಂತಿದ್ದಾರೆ ನಿರ್ಮಾಪಕರು ಮತ್ತು ಯೋಗರಾಜ ಭಟ್ಟರು. ಇದಕ್ಕೇನಂತೀರಿ ದುನಿಯಾ ವಿಜಯ್ ಅಂಡ್ ಪ್ರಿಯಾಮಣಿ? [ತೆಲುಗಿನ 'ಅಖಿಲ್' ಸೋತಿದ್ದಕ್ಕೆ ಕನ್ನಡದ ಚಿತ್ರಗಳು ಬಲಿಪಶು ಆದ್ವಾ?]

English summary
Why Yogaraj Bhat directed Dana Kayonu Kannada movie release getting delayed? RS Productions, which is the producing the movie has incurred huge loss after getting distrubution rights of a telugu movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada