For Quick Alerts
  ALLOW NOTIFICATIONS  
  For Daily Alerts

  ಯುವರಾಜ್ ಸಿಂಗ್ ಜೊತೆ ಅಂಟಿಕೊಂಡಿದ್ದ ಏಳು ನಾಯಕಿಯರ ಹೆಸರು.!

  |
  7 ನಟಿಯರ ಜೊತೆ ಸೇರಿಕೊಂಡಿತ್ತು ಯುವರಾಜ್ ಸಿಂಗ್ ಹೆಸರು | Oneindia Kannada

  2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 2007ರ ಟಿ-ಟ್ವೆಂಟಿ ಹಾಗೂ 2011ರಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡಗೈ ದಾಂಡಿಗ ಇಂದು ಅಚ್ಚರಿ ನಿರ್ಧಾರ ಘೋಷಿಸಿದರು.

  2016ರಲ್ಲಿ ಕಿರುತೆರೆ ನಟಿ ಹಾಗೂ ಮಾಡೆಲ್ ಹಜಲ್ ಕೀಚ್ ಅವರನ್ನ ಮದುವೆಯಾಗಿರುವ ಯುವರಾಜ್ ಸಿಂಗ್, ಅದಕ್ಕೂ ಮುಂಚೆ ಹಲವು ನಟಿಯರ ಜೊತೆ ಡೇಟಿಂಗ್ ಮಾಡಿದ್ದಾರೆ.

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ 'ಸಿಕ್ಸ್ ಕಿಂಗ್‌'ನ ಕಡೇ ಮಾತುಗಳು

  ಕ್ರಿಕೆಟ್ ಹೊರತು ಪಡಿಸಿ ಬಾಲಿವುಡ್ ನಟಿಯರ ಜೊತೆ ಸುತ್ತಾಡಿದ್ದಾರೆ. ಕೆಲವರ ಜೊತೆ ಬಹಿರಂಗವಾಗಿ, ಅಧಿಕೃತವಾಗಿ ಪ್ರೀತಿ ಮಾಡಿದ್ರೆ, ಮತ್ತೆ ಕೆಲವರ ಜೊತೆ ಯಾವುದೋ ಕಾರಣಕ್ಕೆ ಯುವಿ ಹೆಸರು ತಳುಕುಹಾಕಿಕೊಂಡಿತ್ತು. ಹಾಗಿದ್ರೆ, ಯುವರಾಜ್ ಸಿಂಗ್ ಜೊತೆ ಅಂಟಿಕೊಂಡಿದ್ದ ಆ ಏಳು ನಟಿಯರು ಯಾರು? ಮುಂದೆ ಓದಿ.....

  ಕಿಮ್ ಶರ್ಮಾ-ಯುವಿ

  ಕಿಮ್ ಶರ್ಮಾ-ಯುವಿ

  ಬಾಲಿವುಡ್ ನಟಿ, ಮಾಡೆಲ್ ಕಿಮ್ ಶರ್ಮಾ ಜೊತೆ ಯುವರಾಜ್ ಸಿಂಗ್ ಹೆಸರು ಮೊದ ಮೊದಲು ತಳುಕುಹಾಕಿಕೊಂಡಿತ್ತು. ಸುಮಾರು ನಾಲ್ಕೈದು ವರ್ಷಗಳ ಕಾಲ ಇಬ್ಬರು ಡೇಟ್ ಮಾಡಿದ್ದರು. ನಂತರ ಇಬ್ಬರು ಬೇರ್ಪಟ್ಟರು. ಆದರೆ ಕಾರಣ ಬಹಿರಂಗವಾಗಿಲ್ಲ. ಬಟ್, ಯುವರಾಜ್ ಸಿಂಗ್ ನಿರಾಕರಿಸಿದರು ಎಂಬ ಮಾತಿದೆ. 2000ನೇ ಇಸವಿಯಲ್ಲಿ ತೆರೆಕಂಡಿದ್ದ 'ಮೊಹಬ್ಬಟೀನ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು ಈ ನಟಿ.

  ಯುವರಾಜ್ ಸಿಂಗ್ ನಿವೃತ್ತಿ ಬಗ್ಗೆ ವಿರಾಟ್ ಪತ್ನಿ ಹೇಳಿದ್ದೇನು?

  ಉಪ್ಪಿಯ 'ಓಂಕಾರ' ಹೀರೋಯಿನ್

  ಉಪ್ಪಿಯ 'ಓಂಕಾರ' ಹೀರೋಯಿನ್

  ಕಿಮ್ ಶರ್ಮಾ ಜೊತೆ ಬ್ರೇಕ್ ಅಪ್ ಆದ ಬಳಿಕ ನಟಿ ಹಾಗೂ ಮಾಡೆಲ್ ಪ್ರೀತಿ ಝಂಜಯಾನಿ ಜೊತೆ ಯುವರಾಜ್ ಹೆಸರು ಅಂಟಿಕೊಂಡಿತು. ಆಮೇಲೆ ಈ ಸಂಬಂಧಕ್ಕೂ ಬ್ರೇಕ್ ಬಿತ್ತು. ಅಂದ್ಹಾಗೆ, ಪ್ರೀತಿ ಝಂಜಯಾನಿ ಬಗ್ಗೆ ನೋಡುವುದಾರೇ ಉಪೇಂದ್ರ ನಟನೆಯ ಓಂಕಾರ ಸಿನಿಮಾದಲ್ಲಿ ನಟಿಸಿದ್ದರು. ಶ್ರೀನಿಗರ ಕಟ್ಟಿಯ ಟೋನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹಿಂದಿ, ತೆಲುಗು, ತಮಿಳು, ಬೆಂಗಾಳಿ, ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದರು.

  ಕಿಂಗ್ಸ್ ಪಂಜಾಬ್ ಒಡತಿ ಪ್ರೀತಿ

  ಕಿಂಗ್ಸ್ ಪಂಜಾಬ್ ಒಡತಿ ಪ್ರೀತಿ

  ಐಪಿಎಲ್ ಶುರುವಾದ್ಮೇಲೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಆಡುತ್ತಿದ್ದ ಯುವರಾಜ್ ಸಿಂಗ್ ಗೆ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಜೊತೆ ಲವ್ವಲ್ಲಿ ಇದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಆಮೇಲೆ ಪ್ರೀತಿ ಈ ಸುದ್ದಿಯನ್ನ ನಿರಾಕರಿಸಿದರು.

  ದೀಪಿಕಾ ಪಡುಕೋಣೆ ಮತ್ತು ಯುವಿ

  ದೀಪಿಕಾ ಪಡುಕೋಣೆ ಮತ್ತು ಯುವಿ

  ಯುವರಾಜ್ ಸಿಂಗ್ ಜೊತೆ ಅತಿ ದೊಡ್ಡ ಸುದ್ದಿ ಮಾಡಿದ ನಟಿ ದೀಪಿಕಾ ಪಡುಕೋಣೆ. ಯುವಿಗಾಗಿ ಸ್ಟೇಡಿಯಂಗೆ ಬಂದು ಚೀಯರ್ ಅಪ್ ಮಾಡುವಷ್ಟು ದೀಪಿಕಾ ಮತ್ತು ಯುವಿ ಸ್ನೇಹ ಬೆಳೆದಿತ್ತು. ಇನ್ನೇನೂ ಮದುವೆ ಆಗ್ತಾರೆ ಎನ್ನುವಷ್ಟು ಸೌಂಡ್ ಮಾಡಿತ್ತು. ಆಮೇಲೆ ಇವರಿಬ್ಬರ ನಡುವಿನ ಲವ್ ಬರಿ ಗಾಸಿಪ್ ಆಗಿಯೇ ಉಳಿದು ಹೋಯ್ತು.

  ರಿಯಾ ಸೇನ್ ಮತ್ತು ಯುವರಾಜ್

  ರಿಯಾ ಸೇನ್ ಮತ್ತು ಯುವರಾಜ್

  ದೀಪಿಕಾ ಪಡುಕೋಣೆ ಜೊತೆ ಬ್ರೇಕ್ ಅಪ್ ಆದ ಬಳಿಕ ನಟಿ ರಿಯಾ ಸೇನ್ ಜೊತೆ ಸಿಕ್ಸರ್ ಸಿಂಗ್ ಹೆಸರು ಸೇರಿಕೊಂಡಿತು. ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದ ಇವರಿಬ್ಬರು, ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದು ಮಾಧ್ಯಮಗಳ ಕಣ್ಣಿಗೆ ಬಿದ್ದಿತ್ತು. ಆ ನಂತರ ಇದು ಕೂಡ ಹಾಗೆ ಮೂಲೆ ಗುಂಪಾಯಿತು.

  ಮಿನಿಶಾ ಲಂಬಾ ವಿತ್ ಯುವಿ

  ಮಿನಿಶಾ ಲಂಬಾ ವಿತ್ ಯುವಿ

  ಮಿನಿಶಾ ಲಂಬಾ ಮತ್ತು ಯುವರಾಜ್ ಸಿಂಗ್ ಕಿಸ್ಸ ಮಾಡುತ್ತಿರುವ ಫೋಟೋವೊಂದು 2011ರಲ್ಲಿ ಲೀಕ್ ಆಗಿತ್ತು. ಈ ಫೋಟೋ ಬಳಿಕ ಇವರಿಬ್ಬರ ಮಧ್ಯೆ ಸಂಥಿಂಗ್ ಏನೋ ಇದೆ ಎಂದು ದೊಡ್ಡ ಸುದ್ದಿಯಾಯಿತು. ನಂತರ ಅದು ನನ್ನ ಫೋಟೋ ಅಲ್ಲ ಎಂದು ಮಿನಿಶಾ ಲಂಬಾ ಯುವರಾಜ್ ಜೊತೆಗಿನ ಸಂಬಂಧವನ್ನ ಅಲ್ಲೆಗೆಳೆದರು.

  ನೇಹಾ ಧುಪಿಯಾ

  ನೇಹಾ ಧುಪಿಯಾ

  ಇನ್ನು ಬಾಲಿವುಡ್ ನಟಿ ನೇಹಾ ದೂಪಿಯಾ ಜೊತೆಯಲ್ಲೂ ಯುವರಾಜ್ ಸಿಂಗ್ ಹೆಸರು ಅಂಟಿಕೊಂಡಿತ್ತು. ಬರ್ತಡೇ ಕಾರ್ಯಕ್ರಮವೊಂದರಲ್ಲಿ ನೇಹಾ ಮತ್ತು ಯುವರಾಜ್ ಸಿಂಗ್ ಒಟ್ಟಿಗೆ ಆಗಮಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ನಂತರ ಸ್ವತಃ ನೇಹಾ ನಮ್ಮಿಬ್ಬರ ಮಧ್ಯೆ ಅಂತಹದ್ದೇನು ಇಲ್ಲ ಎಂದು ಪುಲ್ ಸ್ಟಾಪ್ ಇಟ್ಟರು. ಇದೆಲ್ಲ ಆದ್ಮೇಲೆ ಯುವರಾಜ್ ಸಿಂಗ್ ಮದುವೆ ಆದರು.

  English summary
  2011 world cup hero yuvraj singh retired from international cricket. he officially announced today. check it his alleged love affairs with bollywood actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X