For Quick Alerts
  ALLOW NOTIFICATIONS  
  For Daily Alerts

  ಜೀ ಸ್ಟುಡಿಯೋಸ್ ತೆಕ್ಕೆಗೆ 'ಹೆಡ್‌ಬುಷ್': ದಾಖಲೆ ಬೆಲೆಗೆ ಸಿನಿಮಾ ರೈಟ್ಸ್ ಮಾರಾಟ!

  |

  ಗಾಂಧಿನಗರದಿಂದ ದುಬೈವರೆಗೂ ಡಾನ್ ಜಯರಾಜನ ಹಾವಳಿ ಶುರುವಾಗಿದೆ. ಬಹುನಿರೀಕ್ಷಿತ 'ಹೆಡ್‌ ಬುಷ್' ಸಿನಿಮಾ ಪ್ರಮೋಷನ್ ಭರದಿಂದ ಸಾಗ್ತಿದೆ. ರಾಜ್ ಕಪ್ ಕ್ರಿಕೆಟ್ ಪಂದ್ಯಕ್ಕಾಗಿ ದುಬೈಗೆ ಹೋಗಿರುವ ಧನಂಜಯ್ ಅಲ್ಲೂ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರತಂಡದ ಕಡೆಯಿಂದ ಮತ್ತೊಂದು ಸುದ್ದಿ ಬಂದಿದೆ. ಚಿತ್ರದ ಡಿಜಿಟಲ್, ಸ್ಯಾಟಲೈಟ್ ಹಾಗೂ ಥ್ರಿಯೇಟ್ರಿಕಲ್ ರೈಟ್ಸ್ ದಾಖಲೆಯ ಬೆಲೆಗೆ ಮಾರಾಟವಾಗಿದೆ.

  ಧನಂಜಯ್ 'ಹೆಡ್‌ ಬುಷ್' ಚಿತ್ರವನ್ನು ನಿರ್ಮಿಸಿ, ಡಾನ್ ಎಂ ಪಿ ಜಯರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು ಭೂಗತಲೋಕದ ನೈಜ ಕಥೆಯನ್ನು ಈ ಆಕ್ಷನ್ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಶೃತಿ ಹರಿಹರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಗ್ನಿ ಶ್ರೀಧರ್ ಚಿತ್ರಕ್ಕೆ ಚಿತ್ರಕತೆ ಬರೆದಿದ್ದು, ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪ್ರಗತಿಯಲ್ಲಿದೆ. ಎರಡು ಭಾಗಗಳಾಗಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ.

  ಧನಂಜಯ್ ಅಭಿನಯದ 'ಹೆಡ್‌ ಬುಷ್' ಸಿನಿಮಾ ಪರೋಕ್ಷವಾಗಿ ಟಾಂಗ್ ಕೊಟ್ಟ ಜಯರಾಜ್ ಸೊಸೆ!ಧನಂಜಯ್ ಅಭಿನಯದ 'ಹೆಡ್‌ ಬುಷ್' ಸಿನಿಮಾ ಪರೋಕ್ಷವಾಗಿ ಟಾಂಗ್ ಕೊಟ್ಟ ಜಯರಾಜ್ ಸೊಸೆ!

  'ಹೆಡ್‌ ಬುಷ್' ಸಿನಿಮಾ ಮೊದಲ ಭಾಗದಲ್ಲಿ 70- 80ರ ದಶಕದ ಬೆಂಗಳೂರು ಭೂಗತ ಲೋಕದ ಕಥೆಯನ್ನು ಹೇಳಲು ಹೊರಟಿದ್ದಾರೆ. ಮುಖ್ಯವಾಗಿ ಬೆಂಗಳೂರು ಪಾತಕ ಲೋಕದ ಆರಂಭದ ದಿನಗಳನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಜಯರಾಜ್, ಕೊತ್ವಾಲರಂತಹ ರೌಡಿಗಳು ಭೂಗತಲೋಕಕ್ಕೆ ಹೇಗೆ ಎಂಟ್ರಿ ಕೊಟ್ಟರು ಎನ್ನುವುದನ್ನು ಮೊದಲ ಭಾಗದಲ್ಲಿ ನೋಡಬಹುದು. ಅಕ್ಟೋಬರ್ 21ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ.

   'ಹೆಡ್‌ ಬುಷ್' ಆಟಕ್ಕೆ ಜೀ ಸ್ಟುಡಿಯೋಸ್

  'ಹೆಡ್‌ ಬುಷ್' ಆಟಕ್ಕೆ ಜೀ ಸ್ಟುಡಿಯೋಸ್

  ಬೆಂಗಳೂರು ಪಾತಕ ಲೋಕದ ಆ ದಿನಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಕಷ್ಟು ಜನರಿಗಿದೆ. ಇಷ್ಟು ದಿನ ಜಯರಾಜ್, ಕೊತ್ವಾಲರಂತಹ ನಟೋರಿಯಸ್ ಡಾನ್‌ಗಳ ಬಗ್ಗೆ ಕೇಳಿದ್ದವರು ಅವರ ಆರ್ಭಟವನ್ನು ದೃಶ್ಯರೂಪದಲ್ಲಿ ನೋಡುವ ತವಕದಲ್ಲಿದ್ದಾರೆ. ಸದ್ಯ ಜೀ ಸ್ಟುಡಿಯೋಸ್ ಸಂಸ್ಥೆ ಚಿತ್ರದ ಡಿಜಿಟಲ್, ಸ್ಯಾಟಲೈಟ್ ಹಾಗೂ ಥ್ರಿಯೇಟ್ರಿಕಲ್ ರೈಟ್ಸ್ ಕೊಂಡುಕೊಂಡಿದೆ. ದಾಖಲೆ ಬೆಲೆಗೆ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ.

  ರಾತ್ರೋರಾತ್ರಿ ದುಬೈಗೆ ಬಂದ ಧನಂಜಯ್; ಶೂಟಿಂಗ್‌ಗಾಗಿ ಅಲ್ಲ ಅಪ್ಪು, ಅಣ್ಣಾವ್ರಿಗಾಗಿ!ರಾತ್ರೋರಾತ್ರಿ ದುಬೈಗೆ ಬಂದ ಧನಂಜಯ್; ಶೂಟಿಂಗ್‌ಗಾಗಿ ಅಲ್ಲ ಅಪ್ಪು, ಅಣ್ಣಾವ್ರಿಗಾಗಿ!

   ದುಬೈನಲ್ಲಿ ಬೆಲ್‌ಬಾಟಂ ಜಯರಾಜ್ ಹವಾ

  ದುಬೈನಲ್ಲಿ ಬೆಲ್‌ಬಾಟಂ ಜಯರಾಜ್ ಹವಾ

  ಇತ್ತೀಚೆಗೆ ಬಂಡಿ ಮಾಂಕಾಳಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 'ಹೆಡ್‌ ಬುಷ್' ಸಿನಿಮಾ ಪ್ರಚಾರಕ್ಕೆ ಚಿತ್ರತಂಡ ಚಾಲನೆ ಕೊಟ್ಟಿತ್ತು. ಇದೇ 24 ರಂದು ಶಾರ್ಜಾದಲ್ಲಿ ರಾಜ್ ಕಪ್‌ ಕ್ರಿಕೆಟ್ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ ಭಾಗಿಯಾಗಲೂ ನಟ ಧನಂಜಯ್ ವೈಟ್ ಆ್ಯಂಡ್ ವೈಟ್ ಬೆಲ್​ ಬಾಟಂ ಪ್ಯಾಂಟ್ ತೊಟ್ಟು ದುಬೈಗೆ ಹಾರಿದ್ದರು. ಏರ್​ಪೋರ್ಟ್‌ನಲ್ಲೂ ಡಾಲಿ ಜಯರಾಜನ ಗೆಟಪ್‌ನಲ್ಲಿ ದರ್ಶನ ಕೊಟ್ಟು ಎಲ್ಲರ ಗಮನ ಸೆಳೆದಿದ್ದರು. ಅದಕ್ಕೆ ಸಂಬಂಧಿಸಿದ ಫೋಟಿ, ವಿಡಿಯೋ ವೈರಲ್ ಆಗಿತ್ತು.

   ಚಿತ್ರತಂಡಕ್ಕೆ ಜಯರಾಜ್ ಸೊಸೆ ಟಾಂಗ್

  ಚಿತ್ರತಂಡಕ್ಕೆ ಜಯರಾಜ್ ಸೊಸೆ ಟಾಂಗ್

  ಡಾನ್ ಜಯರಾಜ್ ಜೀವನ ಚರಿತ್ರೆಯನ್ನು 'ಹೆಡ್‌ ಬುಷ್' ಚಿತ್ರದಲ್ಲಿ ಹೇಳಲಾಗುತ್ತಿದೆ. ಆದರೆ ಇದಕ್ಕೆ ಜಯರಾಜ್ ಪುತ್ರ ಅಜಿತ್ ಜಯರಾಜ್ ವಿರೋಧ ವ್ಯಕ್ತಪಡಿಸುತ್ತಲೇ ಬರ್ತಿದ್ದಾರೆ. ಇತ್ತ ಧನಂಜಯ್ ಜಯರಾಜ್ ಅವತಾರದಲ್ಲಿ ಪ್ರಚಾರ ಶುರು ಮಾಡುತ್ತಿದ್ದಂತೆ ಜಯರಾಜ್ ಸೊಸೆ ಇಂಪನಾ ಅಜಿತ್ ಜಯರಾಜ್ ಚಿತ್ರತಂಡದ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. "ರಾಜ ಯಾವಾಗಲೂ ರಾಜನಾಗಿಯೇ ಇರುತ್ತಾರೆ. ಅವರಂತೆ ಆಗಲು ಯಾರಿಂದಲೂ ಸಾಧ್ಯವಿಲ್ಲ." ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಡಾಲಿ 26ನೇ ಸಿನಿಮಾ: ಡಾಲಿ 26ನೇ ಸಿನಿಮಾ: "ಕ್ವಾಲಿಟಿ ಬೇಕು, ಕ್ವಾಂಟಿಟಿ ಅಲ್ಲ".. "ದೊಡ್ಡ ಸಿನಿಮಾ ಮಾಡಿ ಚಿಕ್ಕದು ಬೇಡ"

   ಚಿತ್ರತಂಡಕ್ಕೆ ಜಯರಾಜ್ ಸಹೋದರಿ ಬೆಂಬಲ

  ಚಿತ್ರತಂಡಕ್ಕೆ ಜಯರಾಜ್ ಸಹೋದರಿ ಬೆಂಬಲ

  'ಹೆಡ್ ಬುಷ್' ಚಿತ್ರವನ್ನು ಜಯರಾಜ್ ಪುತ್ರ ಅಜಿತ್ ಹಾಗೂ ಸೊಸೆ ಇಂಪನಾ ವಿರೋಧಿಸುತ್ತಿದ್ದಾರೆ, ಆದರೆ ಕಡೆ ಜಯರಾಜ್ ಸಹೋದರಿ ಬೆಂಬಲಿಸಿದ್ದಾರೆ. 'ಹೆಡ್ ಬುಷ್' ಸಿನಿಮಾವನ್ನು ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. " ನಿಜವಾಗಲೂ ಜಯರಾಜ್ ಹಾಗೂ ಅವರ ಬದುಕನ್ನು ಜಗತ್ತಿಗೆ ತೋರಿಸಲು ಹೊರಟಿರೋರೇ ನಿಜವಾದ ಅಣ್ಣತಮ್ಮಂದಿರು. ಅವರು ಹೆಡ್ ಬುಷ್ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ." ಎಂದು ಜಯರಾಜ್ ಸಹೋದರಿ ಹೇಮಾವತಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  English summary
  Zee Studios join hands with Daali Dhanajnay for Head Bush. This periodic thriller set in the 1980s. The film is about Bangalore’s former don M P Jayaraj and Dhananjay is seen in the role of Jayaraj. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X