For Quick Alerts
  ALLOW NOTIFICATIONS  
  For Daily Alerts

  ಬಿಗ್ ಮನೆಯಲ್ಲಿ ಸನ್ನಿ ಲಿಯೋನ್: ಸ್ಪರ್ಧಿಗಳಿಗೆ ಕೊಟ್ಟ ಟಾಸ್ಕ್ ನೋಡಿದ್ರೆ ಹೌಹಾರುತ್ತೀರ!

  |

  ಬಿಗ್ ಬಾಸ್ ಒಟಿಟಿ ದಿನದಿಂದ ದಿನಕ್ಕೆ ರೋಚಕತೆ ಪಡೆಕೊಳ್ಳುತ್ತಿದೆ. ಸ್ಪರ್ಧಿಗಳ ಕಿತ್ತಾಟ, ಫೈಟಿಂಗ್, ಪ್ರೀತಿ ಪ್ರೇಮದ ಜೊತೆಗೀಗ ಮತ್ತೊಂದು ಅಚ್ಚರಿ ಕಾದಿದೆ. ಬಿಗ್ ಬಾಸ್ ಮನೆಗೆ ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದು, ಬಿಗ್ ಬಾಸ್ ಮನೆ ಮತ್ತಷ್ಟು ರಂಗೇರಿದೆ. ಬಿಗ್ ಬಾಸ್ ಮನೆಗೆ ಸನ್ನಿ ಲಿಯೋನ್ ಬರ್ತಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿಬರ್ತಿತ್ತು. ಇದೀಗ ಎಂಟ್ರಿ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಸನ್ನಿ ಎಂಟ್ರಿಗಾಗಿ ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೀಗ ಬಿಗ್ ಮನೆಯಲ್ಲಿ ಸನ್ನಿ ನೋಡಿ ಫುಲ್ ಖುಷ್ ಆಗಿದ್ದಾರೆ. ಸನ್ನಿ ಲಿಯೋನ್ ಎಂಟ್ರಿ ಒಂದೆಡೆ ಅಭಿಮಾನಿಗಳ ಖುಷಿಗೆ ಕಾರಣವಾದರೆ ಮತ್ತೊಂದೆಡೆ ಸನ್ನಿ ಸ್ಪರ್ಧಿಗಳಿಗೆ ನೀಡಿದ ಮಾದಕ ಟಾಸ್ಕ್ ನೋಡುಗರ ಕಿಕ್ ಏರಿಸುವಂತಿದೆ. ಬಿಗ್ ಮನೆೆಗೆ ಎಂಟ್ರಿ ಕೊಡುತ್ತಿದ್ದಂತೆ ಸನ್ನಿ ಲಿಯೋನ್ ಸ್ಪರ್ಧಿಗಳಿಗೆ ಸಖತ್ ಟಾಸ್ಕ್ ನೀಡಿದ್ದಾರೆ. ತೆಂಗಿನ ಕಾಯಿಯ ಟಾಸ್ಕ್ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಈ ಟಾಸ್ಕ್ ನಲ್ಲಿ ನಟಿ ಶಮಿತಾ ಶೆಟ್ಟಿಗೆ ಜೋಡಿಯಾಗಿ ರಾಕೇಶ್ ಆಡಿದ್ದಾರೆ. ರಾಕೇಶ್ ಮತ್ತು ಶಮಿತಾ ನಡುವೆ ಈಗಾಗಲೇ ಪ್ರೀತಿ ಪ್ರೇಮದ ವಿಚಾರ ವೈರಲ್ ಆಗಿದೆ. ಇಬ್ಬರ ಮುತ್ತಿನ ಆಟಗಳು ಬಿಗ್ ಬಾಸ್ ಮನೆಯಲ್ಲಿ ಜೋರಾಗಿದೆ. ಪ್ರಾರಂಭದಲ್ಲಿ ಸಖತ್ ರೆಬೆಲ್ ಆಗಿದ್ದ ಶಮಿತಾ ಇದೀಗ ಅಷ್ಟೇ ಕೂಲ್ ಆಗಿದ್ದಾರೆ. ಸೈಲೆಂಟ್ ಆಗಿರುವ ಜೊತೆಗೆ ಸಹ ಸ್ಪರ್ಧಿ ರಾಕೇಶ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಇತ್ತೀಚಿಗೆ ರಾಕೇಶ್, ಶಮಿತಾ ಶೆಟ್ಟಿಗೆ ಜಾಸ್ತಿ ಕಿಸ್ ಕೊಡುತ್ತಿದ್ದು, ಬಿಗ್ ಮನೆಯಲ್ಲಿ ಇಬ್ಬರ ಕಿಸ್ ದೃಶ್ಯಗಳು ವೈರಲ್ ಆಗುತ್ತಿದೆ. ಊಟ ಮಾಡುತ್ತಿದ್ದ ಶಮಿತಾ, ರಾಕೇಶ್ ನನ್ನು ಕರೆದು ಮಾತನಾಡಿಸುತ್ತಾರೆ. ಅಷ್ಟೆಯಲ್ಲ ಈಗಲೇ ಇಲ್ಲಿ ಬಂದು ಕಿಸ್ ಕೊಡು ಎಂದು ಬೇಡಿಕೆ ಇಟ್ಟರು. ಶಮಿತಾ ಮಾತಿನಂತೆ ರಾಕೇಶ್ ತಕ್ಷಣ ಶಮಿತಾ ಬಳಿ ಹೋಗಿ ಕೆನ್ನೆಗೆ ಮುತ್ತಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  ರಾಕೇಶ್, ಶಮಿತಾಗೆ ಕಿಸ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಕಿಸ್ ಮಾಡಿ ಸುದ್ದಿಯಾಗಿದ್ದರು. ಶಮಿತಾ ಶೆಟ್ಟಿ ಮಲಗಿದ್ದಾಗ ಆಕೆಯನ್ನು ಎಬ್ಬಿಸಲು ಹೋದ ರಾಕೇಶ್, ಶಮಿತಾಗೆ ಮುತ್ತು ಕೊಟ್ಟು ಎಬ್ಬಿಸಿದ್ದರು. ಶಮಿತಾ ಸಹ ಮುಗುಳ್ನಗುತ್ತಾ ರಾಕೇಶ್ ನ ಸಿಹಿಮುತ್ತನ್ನು ಸ್ವೀಕರಿಸಿ, ಆ ನಂತರ ಹೊರಗೆ ಬಂದು ಇಬ್ಬರೂ ಒಟ್ಟಿಗೆ ಹಾಡಿಗೆ ಸಣ್ಣದಾಗಿ ಹೆಜ್ಜೆ ಸಹ ಹಾಕಿದ್ದರು.

  ಇನ್ನು ಸನ್ನಿ ಲಿಯೋನ್ ವಿಚಾರಕ್ಕೆ ಬರುವುದಾದರೆ, ಅಸಲಿಗೆ ಸನ್ನಿ ಲಿಯೋನ್‌ ಅನ್ನು ಭಾರತಕ್ಕೆ ಪರಿಚಯಿಸಿದ್ದು, ಜನಪ್ರಿಯಗೊಳಿಸಿದ್ದು ಬಿಗ್‌ಬಾಸ್ ರಿಯಾಲಿಟಿ ಶೋ. 2011ರಲ್ಲಿ ಪ್ರಸಾರವಾಗಿದ್ದ ಬಿಗ್‌ಬಾಸ್ ಸೀಸನ್ 5ಗೆ ಮೊದಲ ಬಾರಿಗೆ ಸನ್ನಿ ಲಿಯೋನ್ ಅನ್ನು ಕರೆತರಲಾಗಿತ್ತು. 49 ದಿನಗಳ ನಂತರ ಸನ್ನಿ ಬಿಗ್‌ಬಾಸ್ ಮನೆಗೆ ಬಂದರು. ಆ ನಂತರ ಭಾರತದಲ್ಲಿ ಸನ್ನಿ ಲಿಯೋನ್ ಜನಪ್ರಿಯತೆ ಧಿಡೀರನೆ ಮೇಲಕ್ಕೇರಿತು. ಸನ್ನಿ ಬಿಗ್‌ಬಾಸ್ ಮನೆಯಲ್ಲಿರುವಾಗಲೇ ಮಹೇಶ್ ಭಟ್ ಸನ್ನಿಗೆ ಸಿನಿಮಾ ಅವಕಾಶ ನೀಡುವುದಾಗಿ ಹೇಳಿದರು. ಮನೆಯಿಂದ ಹೊರಗೆ ಬಂದ ಮೇಲೆ ಪೂಜಾ ಬೇಡಿ ಸನ್ನಿಗೆ ಮೊದಲ ಬಾಲಿವುಡ್ ಸಿನಿಮಾದಲ್ಲಿ ಅವಕಾಶ ನೀಡಿದ್ದರು.

  ಸನ್ನಿ ಲಿಯೋನ್‌ಗೆ ರಿಯಾಲಿಟಿ ಶೋ ಹೊಸದೇನೂ ಅಲ್ಲ. ಬಿಗ್ ಬಾಸ್ ಜೊತೆಗೆ ಅನೇಕ ಶೋಗಳಲ್ಲಿ ಭಾಗಿಯಾಗಿದ್ದಾರೆ. ಭಾರತೀಯ ಮನೊರಂಜನಾ ಮಾರುಕಟ್ಟೆಯನ್ನು ಸನ್ನಿ ಪ್ರವೇಶಿಸಿದ್ದೆ ರಿಯಾಲಿಟಿ ಶೋ ಮೂಲಕ. ಬಿಗ್‌ಬಾಸ್ ಸೀಸನ್ 5 ಆದ ಬಳಿಕ 'ಹಾಂಟೆಡ್ ವೀಕೆಂಡ್ಸ್ ವಿತ್ ಸನ್ನಿ ಲಿಯೋನ್', 'ಎಂಟಿವಿ ಸ್ಪಿಟ್ ವಿಲ್ಲಾ', 'ಬಾಕ್ಸ್ ಕ್ರಿಕೆಟ್ ಲೀಗ್', 'ಮ್ಯಾನ್ ವರ್ಸಸ್ ವೈಲ್ಡ್ ವಿತ್ ಸನ್ನಿ ಲಿಯೋನ್'ಗಳನ್ನು ಸನ್ನಿ ಭಾಗವಹಿಸಿದ್ದರು. ಇದೀಗ ಮತ್ತೆ ಸನ್ನಿ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.

  English summary
  Bollywood Actress Sunny Leone hoted Bigg Boss OTT show, video viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X