For Quick Alerts
  ALLOW NOTIFICATIONS  
  For Daily Alerts

  ಕೀರ್ತಿ ಸುರೇಶ್ ನಟನೆಯ ಬಹುನಿರೀಕ್ಷಿತ ತಮಿಳು ಚಿತ್ರ ಪೆಂಗ್ವಿನ್ ಟ್ರೇಲರ್

  By ಜೇಮ್ಸ್ ಮಾರ್ಟಿನ್
  |

  ಕೀರ್ತಿ ಸುರೇಶ್ ನಟನೆಯ ಬಹುನಿರೀಕ್ಷಿತ ತಮಿಳು ಚಿತ್ರ ಪೆಂಗ್ವಿನ್ ಟ್ರೇಲರ್ ಅಮೆಜಾನ್ ಪ್ರೈಮ್ ನಲ್ಲಿ ಅನಾವರಣಗೊಂಡಿದೆ. ಮೈನವಿರೇಳಿಸುವ ಈ ಅಪರಾಧ ತ್ರಿಲ್ಲರ್ ನಲ್ಲಿ ಕೀರ್ತಿ ಸುರೇಶ್ (ಮಹಾನಟಿ) ಅವರು ತಮ್ಮ ಹಿಂದಿನ ಕಥೆಯ ರಹಸ್ಯಗಳನ್ನು ಭೇದಿಸಿ, ತಮ್ಮ ಪ್ರಿತಿಪಾತ್ರರನ್ನು ರಕ್ಷಿಸುವ ಅಪಾಯಕಾರಿ ಮತ್ತು ದೈಹಿಕ ಶ್ರಮದ ಯಾತ್ರೆಯಲ್ಲಿ ಹೊರಡುವ ಗರ್ಭಿಣಿಯಾಗಿ ನಟಿಸಿದ್ದಾರೆ.

  ಪೆಂಗ್ವಿನ್ ಅನ್ನು ಕಾರ್ತಿಕ್ ಸುಬ್ಬರಾಜ್ (ಜಿಗರ್ ಥಂಡ) ಅವರು ನಿರ್ಮಿಸಿದ್ದು, ಈಶ್ವರ್ ಕಾರ್ತಿಕ್ ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. 19 ಜೂನ್ ನಿಂದ ಭಾರತದ ಮತ್ತು ವಿಶ್ವದ 200 ಕ್ಕೂ ಹೆಚ್ಚು ದೇಶಗಳ ಮತ್ತು ಪ್ರದೇಶಗಳ ಪ್ರೈಂ ಸದಸ್ಯರು ಈ ಬಹುನಿರೀಕ್ಷಿತ ಚಿತ್ರವನ್ನು ತಮಿಳು, ತೆಲುಗು ಮತ್ತು ಮಲಯಾಳಿಯ ಡಬ್ಬಿಂಗ್ ನಲ್ಲಿ ನೋಡಬಹುದು.

  ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!

  "ನಾನು ಇದುವರೆಗೂ ಕೆಲಸ ಮಾಡಿರುವಂತಹ ಬಹು ರೋಮಾಂಚಕ ಮತ್ತು ಆಸಕ್ತಿದಾಯಕ ಯೋಜನೆಗಳಲ್ಲಿ ಪೆಂಗ್ವಿನ್ ಖಂಡಿತ ಒಂದು," ಎನ್ನುತ್ತಾರೆ ಪೆಂಗ್ವಿನ್ ನಟರಾದ ಕೀರ್ತಿ ಸುರೇಶ್. "ಒಬ್ಬ ತಾಯಿಯಾಗಿ, ರಿದಂ ನಯವಾಗಿಯೂ ಮತ್ತು ಕಾಳಿಜಿಯುಕ್ತಳೂ ಆಗಿದ್ದಾರೆ, ಆದರೆ ಬಹಳ ದೃಢವಾಗಿಯೂ ಇರುತ್ತಾಳೆ. ಆಕೆಯು ಬಹಳ ಜಟಿಲ ಆದರೆ ಪ್ರಾಮಾಣಿಕಳು, ಮತ್ತು ಆಕೆಯು ವೀಕ್ಷಕರನ್ನು ಆಕರ್ಷಿಸುತ್ತಾಳೆ ಎಂದು ನನಗೆ ಅನಿಸುತ್ತದೆ. ಅತ್ಯಂತ ಪ್ರತಿಭಾನ್ವಿತರಾದ ಈಶ್ವರ್ ಕಾರ್ತಿಕ್ ರೊಂದಿಗೆ ಕೆಲಸ ಮಾಡುತ್ತ ಈ ಕಥೆಗೆ ಜೀವ ತುಂಬುತ್ತಾ ನಾನು ಒಂದು ಅದ್ಭುತವಾದ ಸಮಯವನ್ನು ಕಳೆದಿದ್ದೇನೆ. ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಗುವ ತಮಿಳು, ತೆಲುಗಿನ ಚಿತ್ರವನ್ನು ನೋಡುವುದು ಅದ್ಭುತವಾಗಿರುತ್ತದೆ."

  ಡಿಜಿಟಲ್ ವೇದಿಕೆಯಲ್ಲಿ ಕೀರ್ತಿ ಚಿತ್ರ

  ಡಿಜಿಟಲ್ ವೇದಿಕೆಯಲ್ಲಿ ಕೀರ್ತಿ ಚಿತ್ರ

  "ಪ್ರೈಂ ವೀಡಿಯೊದ ಎಂದಿಗೂ ಬೆಳೆಯುತ್ತಿರುವ ಜಾಗತಿಕ ಸಮುದಾಯದ ಭಾಗವಾಗಿರಲು ನಮಗೆ ಸಂತಸವಾಗಿದೆ," ಎನ್ನುತ್ತಾರೆ ನಿರ್ಮಾಪಕ ಕಾರ್ತಿಕೇಯನ್ ಸಂತಾನಂ, ಸ್ಟೋನ್ ಬೆಂಚ್ ಫಿಲಂಸ್. "ಡಿಜಿಟಲ್ ವೇದಿಕೆಗಳಲ್ಲಿ ಕೆಲಸ ಮಾಡುವುದು ನಮಗೆ ಹೊಸದಲ್ಲವಾದರೂ, ಇಂತಹ ಪ್ರಮುಖವಾದ ಯೋಜನೆಗೆ ಅಮೆಜಾನ್ ಪ್ರೈಂ ವೀಡಿಯೊದಂತಹ ಜಾಗತಿಕ ಪಾಲುದಾರರೊಂದಿಗೆ ಸಹಯೋಗ ಮಾಡಿಕೊಂಡಿರುವುದು ನಮಗೆ ಅದ್ಭುತವೆನಿಸಿದೆ."

  "ಸ್ಟೋನ್ ಬೆಂಚ್ ಫಿಲಂಸ್ ನಲ್ಲಿ, ನಾವು ಅನನ್ಯವಾದ ಕಥೆಗಳನ್ನು ಹೇಳುತ್ತಾ, ಹೊಸ ಧ್ವನಿಗಳು ಮತ್ತು ದೃಷ್ಟಿಕೋನಗಳನ್ನು ತೋರಿಸುವ ದಕ್ಷಿಣ ಚಿತ್ರಗಳ ಹೊಸ ಅಲೆಯನ್ನು ತರಲು ನಾವು ಬದ್ಧರಾಗಿದ್ದೇವೆ. ಇದು ಅತ್ಯಂತ ಪ್ರತಿಭಾನ್ವಿತ ಈಶ್ವರ್ ಕಾರ್ತಿಕ್ ಅವರ ಮೊದಲ ನಿರ್ದೇಶನವಾಗಿದ್ದು, ಇದು ಅವರೇ ಬರೆದ ಕಥಾನಿರೂಪಣೆಯಾಗಿದೆ. ಸಂಪೂರ್ಣವಾದ ಹೊಸ ಪಾತ್ರದಲ್ಲಿ ಅದ್ಭುತ ನಟಿಯಾದ ಕೀರ್ತಿ ಸುರೇಶ್ ಅವರನ್ನು ನೋಡಲು ಸಿದ್ಧರಾಗಿರಿ." ಎನ್ನುತ್ತಾರೆ ಖ್ಯಾತ ನಿರ್ಮಾಫಕ ಕಾರ್ತಿಕ್ ಸುಬ್ಬರಾಜ್, ಸ್ಟೋನ್ ಬೆಂಚ್ ಫಿಲಂಸ್.

  ಪೆಂಗ್ವಿನ್ ಕಥೆ ಸಾರಾಂಶ

  ಪೆಂಗ್ವಿನ್ ಕಥೆ ಸಾರಾಂಶ

  ಸುಖ ಜೀವನ ನಡೆಸುತ್ತಾ, ತನ್ನ ಎರಡನೇ ಮಗುವಿಗೆ ಜನ್ಮ ನೀಡಲು ಸಿದ್ಧವಾದ ರಿದಂ, ತಾನು ಕಾಣುವ ಕೆಟ್ಟಕನಸುಗಳಿಂದ ದಿಗ್ಭ್ರಾಂತರಾಗುತ್ತಾರೆ; ಕನಸಿನಲ್ಲಿ ಅವರು ಒಬ್ಬ ಕೊಡೆಯನ್ನು ಹಿಡಿದ ವ್ಯಕ್ತಿಯು ತನ್ನ ಮಗನನ್ನು ಹಿಂಸಿಸಿತ್ತಿರುವುದು ಕಾಣಿಸುತ್ತದೆ. ಆಗ ಅವರು ತಮ್ಮ ತರಬೇತಿ ಪಡೆದ ನಾಯಿಯೊಂದಿಗೆ ಒಂದು ಅಪಾಯಕಾರಿಯಾದ ಪ್ರಯಾಣಕ್ಕೆ ಹೊರಟು, ಈ ಕೆಟ್ಟಕನಸುಗಳ ಹಿಂದಿನ ರಹಸ್ಯವನ್ನು ಭೇದಿಸಿ, ತಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಮುಂದಾಗುತ್ತಾರೆ.

  ಹಲವು ಭಾಷೆಗಳ ಚಿತ್ರ, ಒರಿಜಿನಲ್ಸ್

  ಹಲವು ಭಾಷೆಗಳ ಚಿತ್ರ, ಒರಿಜಿನಲ್ಸ್

  ಪೆಂಗ್ವಿನ್ ಪ್ರೈಂ ವೀಡಿಯೊ ಪಟ್ಟಿಯಲ್ಲಿರುವ ಅನೇಕ ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರ ಮತ್ತು ಟಿವಿ ಪ್ರದರ್ಶನಗಳನ್ನೂ ಸೇರುತ್ತದೆ, ಇದರಲ್ಲಿ ಭಾರತೀಯರು ನಿರ್ಮಿಸಿದ ಅಮೆಜಾನ್ ಒರಿಜಿನಲ್ ಸರಣಿಯಾದ ಫೋರ್ ಮೋರ್ ಶಾಟ್ಸ್ ಪ್ಲೀಸ್, ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್, ಇನ್ಸೈಡ್ ಎಡ್ಜ್ ಮತ್ತು ಮೇಡ್ ಇನ್ ಹೆವನ್ ಮತ್ತು ಪ್ರಶಸ್ತಿ ವಿಜೇತ ಮತ್ತು ಪ್ರಶಂಸೆ ಪಡೆದ ಜಾಗತಿಕ ಅಮೆಜಾನ್ ಒರಿಜಿನಲ್ ಸರಣಿಯಾದ ಟಾಂ ಕ್ಲಾನ್ಸಿಸ್ ಜ್ಯಾಕ್ ರಯಾನ್, ಹಂಟರ್ಸ್, ಫ್ಲೀಬ್ಯಾಗ್ ಮತ್ತು ದಿ ಮಾರ್ವೆಲಸ್ ಮಿಸಸ್ ಮೈಸೆಲ್ ಗಳೂ ಸೇರಿದೆ ಮತ್ತು ಇವೆಲ್ಲವೂ ಪ್ರೈಂ ವೀಡಿಯೊದಲ್ಲಿ ಸಿಗಲಿದೆ, ಇದು ಅಮೆಜಾನ್ ಪ್ರೈಂ ಸದಸ್ಯರಿಗೆ ಹೆಚ್ಚು ವೆಚ್ಚವಿಲ್ಲದೆ ಲಭ್ಯವಿದೆ. ಈ ಸೇವೆಗಳಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬೆಂಗಾಲಿ ಚಿತ್ರಗಳೂ ಲಭ್ಯವಿದೆ.

   ಮಾಸಿಕ ರೂ. 129 ಗೆ ಪ್ರೈಂ ಸದಸ್ಯತ್ವ

  ಮಾಸಿಕ ರೂ. 129 ಗೆ ಪ್ರೈಂ ಸದಸ್ಯತ್ವ

  ಪ್ರೈಂ ಸದಸ್ಯರು ಪೆಂಗ್ವಿನ್ ಎಲ್ಲಾ ಸಂಚಿಕೆಗಳನ್ನೂ ಎಲ್ಲಿಯಾದರೂ, ಯಾವ ಸಮಯದಲ್ಲಾದರೂ, ಸ್ಮಾರ್ಟ್ ಟಿವಿ, ಮೊಬೈಲ್, ಫಿರ್ ಟಿವಿ, ಪೈಟ್ ಟಿವಿ ಸ್ಟಿಕ್, ಫೈರ್ ಟಾಬ್ಲೆಟ್, ಆಪಲ್ ಟಿವಿ, ಏರ್ಟೆಲ್, ವೊಡಾಫೋನ್ ಇತ್ಯಾದಿ ಪ್ರೈಂ ವೀಡಿಯೊ ಆಪ್ ಗಳಲ್ಲಿ ನೋಡಬಹುದು. ಪ್ರೈಂ ವೀಡಿಯೊ ಆಪ್ ನಲ್ಲಿ ಸದಸ್ಯರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಚಿಕೆಗಳನ್ನು ತಮ್ಮ ಮೊಬೈಲ್ ಉಪಕರಣಗಳಲ್ಲಿ ಡೌನ್ಲೋಡ್ ಮಾಡಿ ನೋಡಬಹುದು. ಭಾರತದಲ್ಲಿ ಪ್ರೈಂ ವೀಡಿಯೊ ಹೆಚ್ಚುವರಿ ವೆಚ್ಚವಿಲ್ಲದೆ ವಾರ್ಷಿಕ ರೂ. 999 ಅಥವಾ ಮಾಸಿಕ ರೂ. 129 ಗೆ ಪ್ರೈಂ ಸದಸ್ಯತ್ವದಲ್ಲಿ ಲಭ್ಯವಿದೆ. ಉಚಿತ 30 ದಿನಗಳ ಪ್ರಾಯೋಗಿಕವನ್ನೂ ಪಡೆಯಬಹುದು.

  English summary
  The spine-chilling crime thriller stars Keerthy Suresh (Mahanati) as a pregnant mother who sets out on a dangerous and physically demanding journey to unravel a mystery from her past and save her loved ones.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X