For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT : ಬಿಗ್‌ಬಾಸ್ ಮನೆಯಲ್ಲಿ ಮೊದಲ ನಾಮಿನೇಶನ್: ಯಾರು ಸೇಫ್?

  |

  ಬಿಗ್‌ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಆರಂಭಗೊಂಡು 48 ಗಂಟೆ ಕಳೆದಿದೆ. ಸುದೀಪ್ ಅವರೆ ಹೇಳಿರುವಂತೆ ಶುಕ್ರವಾರ ರಾತ್ರಿ ಬಿಗ್‌ಬಾಸ್ ಸ್ಪರ್ಧಿಗಳು ಮನೆಯ ಒಳಗೆ ಪ್ರವೇಶಿಸಿದ್ದಾರೆ. ಶನಿವಾರ ರಾತ್ರಿಯಿಂದ ಬಿಗ್‌ಬಾಸ್ ಮನೆಯ ಲೈವ್ ಪ್ರಸಾರ ಆರಂಭಗೊಂಡಿದೆ.

  ಮೊದಲ ಎರಡು ದಿನ ಬಿಗ್‌ಬಾಸ್ ಮನೆ ಸ್ಪರ್ಧಿಗಳು ಆರಾಮವಾಗಿ ಕಾಲ ಕಳೆದಿದ್ದಾರೆ. ಹೆಚ್ಚೇನು ಟಾಸ್ಕ್‌ಗಳಿಲ್ಲದೆ ಸುಲಭವಾದ ಸರಳವಾದ ಟಾಸ್ಕ್‌ಗಳನ್ನು ಮುಗಿಸಿದ್ದಾರೆ.

  ಆರಾಮವಾಗಿ, ಹಾಡುತ್ತಾ, ಕುಣಿಯುತ್ತಾ ಎರಡು ದಿನ ಕಳೆದ ಸ್ಪರ್ಧಿಗಳು ಇದೀಗ ಮೊದಲ ಬಾರಿಗೆ ನಾಮಿನೇಶನ್ ಪ್ರಕ್ರಿಯೆಗೆ ಎದುರಾಗಿದ್ದಾರೆ. ಆಟಗಾರರು ಪರಸ್ಪರರನ್ನು ನಾಮಿನೇಶನ್ ಮಾಡಿ ಯಾರು ಮನೆಯಲ್ಲಿ ಇರಬೇಕು, ಯಾರು ಮನೆಯಿಂದ ಹೊರಗೆ ಹೋಗಬೇಕು ಎಂಬ ತಮ್ಮ ಅಭಿಪ್ರಾಯವನ್ನು ಹೊರಗೆ ಹಾಕಿದ್ದಾರೆ.

  ಬಿಗ್‌ಬಾಸ್ ಮನೆಯಲ್ಲಿ ಬಹಳ ಸದ್ದು ಮಾಡುತ್ತಿರುವ ಸೋನು ಶ್ರೀನಿವಾಸ್ ಗೌಡ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಅವರುಗಳು ನಾಮಿನೇಟ್ ಆಗಿರುವುದು ವಿಶೇಷ. ಇವರಿಬ್ಬರು ಮಾತ್ರವೇ ಅಲ್ಲದೆ ಹಲವರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇವರುಗಳಲ್ಲಿ ಒಬ್ಬರು ಈ ವಾರಾಂತ್ಯಕ್ಕೆ ಮನೆಯಿಂದ ಹೊರಗೆ ಹೋಗಲಿದ್ದಾರೆ.

  ಒಟ್ಟು ಎಂಟು ಮಂದಿಯ ಮೇಲೆ ನಾಮಿನೇಶನ್ ತೂಗುಗತ್ತಿ ನೇತಾಡುತ್ತಿದೆ. ಸೋನು ಗೌಡ, ಆರ್ಯವರ್ಧನ್, ಸ್ಪೂರ್ತಿ ಗೌಡ, ಜಯಶ್ರೀ ಆರಾಧ್ಯ, ನಂದಿನಿ, ಜಸ್ವಂತ್, ಕಿರಣ್ ಯೋಗೇಶ್ವರ್, ಅಕ್ಷತಾ ಕುಕ್ಕಿ ಅವರುಗಳನ್ನು ನಾಮಿನೇಟ್ ಮಾಡಲಾಗಿದೆ. ಇವರುಗಳಲ್ಲಿ ಒಬ್ಬರು ಸ್ಪರ್ಧಿ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಬರಲಿದ್ದಾರೆ.

  ಇನ್ನು ಸಾನಿಯಾ ಐಯ್ಯರ್, ಚೈತ್ರಾ ಹಳ್ಳಿಕೆರೆ, ರಾಕೇಶ್ ಅಡಿಗ, ಲೋಕೇಶ್, ಸೋಮಣ್ಣ ಮಾಚಿಮಾಡ, ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅರ್ಜುನ್ ಅವರುಗಳು ನಾಮಿನೇಟ್ ಆಗಿಲ್ಲ.

  ಆರ್ಯವರ್ಧನ್ ಅಂತೂ ಪತ್ರಕರ್ತ ಸೋಮಣ್ಣ ಮಾಚಿಮಾಡ ಅನ್ನು ನಿಲ್ಲಿಸಿ ಏಕೆ ನನ್ನನ್ನು ನಾಮಿನೇಟ್ ಮಾಡಿದಿರಿ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಖಾರವಾಗಿಯೇ ಉತ್ತರಿಸಿದ ಸೋಮಣ್ಣ, ನಿಮಗೆ ನಾನು ಉತ್ತರಿಸುವ ಅಗತ್ಯವಿಲ್ಲ, ಬಿಗ್‌ಬಾಸ್‌ ಕೇಳಿದರೆ ಉತ್ತರಿಸುವೆ ನಿಮಗೆ ಉತ್ತರಿಸುವ ಅಗತ್ಯವಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರ್ಯವರ್ಧನ್, ವಿಷಯವನ್ನು ಇನ್ನಷ್ಟು ಕೆದಕಿದ್ದಾರೆ.

  ಆಗ ಕಾರಣ ತಿಳಿಸಿದ ಸೋಮಣ್ಣ, ನಾನು ಬಂದ ದಿನ ನೀವು ನನ್ನೊಟ್ಟಿಗೆ ನಡೆದುಕೊಂಡ ರೀತಿ ನನಗೆ ಸರಿ ಬರಲಿಲ್ಲ. ನಾನು ಆಗಷ್ಟೆ ಬಂದಿದ್ದೀನಿ, ನನ್ನ ವೈಯಕ್ತಿಕ ವಿಷಯದ ಬಗ್ಗೆ ನೀವು ಪ್ರಶ್ನೆ ಮಾಡಿದಿರಿ. ಅದರ ಬಗ್ಗೆ ಮಾತನಾಡಬೇಡಿ ಎಂದರೂ ನೀವು ಕೆದಕಿ ಕೇಳಿದಿರಿ, ನಿಮ್ಮ ಬಗ್ಗೆ ಗೌರವ ಇದೆ, ನಿಮ್ಮನ್ನು ಗುರೂಜಿ ಎಂದು ಕರೆಯುತ್ತೇನೆ ಅದನ್ನು ಹಾಳುಗೆಡವಿಕೊಳ್ಳಬೇಡಿ ಎಂದು ಖಾರವಾಗಿಯೇ ಹೇಳಿದ್ದಾರೆ ಸೋಮಣ್ಣ ಮಾಚಿಮಾಡ.

  ಆ ನಂತರ ಹಲವರು ಆರ್ಯವರ್ಧನ್‌ಗೆ ಆ ಬಗ್ಗೆ ಬುದ್ಧಿ ಹೇಳಿದ್ದಾರೆ. ಆದರೂ ತನ್ನ ಹಠ ಬಿಡದ ಆರ್ಯವರ್ಧನ್ ಪದೇ ಪದೆ ಅದೇ ವಿಷಯವಾಗಿ ಮಾತನಾಡಿದ್ದಾರೆ ಆ ಮೂಲಕ ಸೋಮಣ್ಣ ಮಾಚಿಮಾಡಗೆ ಇನ್ನಷ್ಟು ಬೇಸರ ಮೂಡಿಸಿದ್ದಾರೆ.

  English summary
  Bigg Boss Kannada ott day 2 written update: Contestants participates in first nominations of the house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X