ಇಮ್ರಾನ್ ಹಶ್ಮಿ ಹಾರರ್ ಚಿತ್ರಕ್ಕೆ ಒಟಿಟಿಯಿಂದ ಭರ್ಜರಿ ಆಫರ್

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮಲಯಾಳಂ ಹಿಟ್ ಸಿನಿಮಾ ರಿಮೇಕ್‌ವೊಂದರಲ್ಲಿ ನಟಿಸುತ್ತಿದ್ದಾರೆ. 2017ರಲ್ಲಿ ತೆರೆಕಂಡಿದ್ದ ಹಾರರ್ ಸಿನಿಮಾ 'ಎಜ್ರಾ' ಮಾಲಿವುಡ್ ಇಂಡಸ್ಟ್ರಿಯಲ್ಲಿ ಯಶಸ್ಸು ಕಂಡಿತ್ತು. ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಹೆಚ್ಚು ಲಾಭ ಮಾಡಿತ್ತು.

ಈ ಚಿತ್ರವನ್ನು ಹಿಂದಿಯಲ್ಲಿ ಇಮ್ರಾನ್ ಹಶ್ಮಿ ಮಾಡಿದ್ದು, 'ಡೈಬುಕ್' (Dybbuk) ಎಂದು ಹೆಸರಿಡಲಾಗಿದೆ. ಈ ಸಿನಿಮಾ ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಇದೀಗ, ಒಟಿಟಿಯಿಂದ ಭರ್ಜರಿ ಬೆಲೆಗೆ ಡಿಜಿಟಲ್ ಹಕ್ಕು ಸೇಲ್ ಆಗಿದೆ ಎಂಬ ಸುದ್ದಿ ಹೊರಬಿದ್ದಿದೆ.

ಎಜ್ರಾ ಸಿನಿಮಾದ ಹಿಂದಿ ರಿಮೇಕ್‌ಗಾಗಿ ಭರ್ಜರಿ 36 ಕೋಟಿ ಆಫರ್ ಬಂದಿದೆಯಂತೆ. ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಯಲ್ಲಿ ರಿಲೀಸ್ ಮಾಡಿ ಎಂದು ಕೇಳಿದೆಯಂತೆ. ಆದರೆ, ನಿರ್ಮಾಪಕರು ಈ ಚಿತ್ರವನ್ನು ಥಿಯೇಟರ್‌ನಲ್ಲೇ ಬಿಡುಗಡೆ ಮಾಡಬೇಕು ಎಂಬ ನಿರ್ಧಾರದಲ್ಲಿದ್ದಾರೆ. ಹಾಗಾಗಿ, ಈ ವರ್ಷ ಚಿತ್ರವನ್ನು ಬಿಡುಗಡೆ ಮಾಡುವುದು ಎಂಬ ತೀರ್ಮಾನವೂ ಆಗಿದೆಯಂತೆ.

Emraan Hashmi Ezra remake to have a direct OTT release?

ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಜಯ್ ಕೃಷ್ಣನ್ ಹಿಂದಿಯಲ್ಲೂ ಆಕ್ಷನ್ ಕಟ್ ಹೇಳಿದ್ದಾರೆ. ಭೂಷಣ್ ಕುಮಾರ್, ಕುಮಾರ್ ಮಂಗತ್ ಪತಾಕ್, ಕೃಷ್ಣನ್ ಕುಮಾರ್ ಹಾಗೂ ಅಭಿಷೇಕ್ ಪತಾಕ್ ಈ ಚಿತ್ರ ನಿರ್ಮಿಸಿದ್ದಾರೆ.

ಎಜ್ರಾ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಪ್ರಿಯಾ ಆನಂದ್, ಟೊವಿನೋ ಥಾಮಸ್ ಮತ್ತು ಸುಜಿತ್ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಟೈಗರ್ 3 ಚಿತ್ರದಲ್ಲಿ ನಾನಿಲ್ಲ

ಇನ್ನು ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟಿಸುತ್ತಿರುವ ಟೈಗರ್ 3 ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಪ್ರಮುಖ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಇಮ್ರಾನ್ ಸ್ಪಷ್ಟಪಡಿಸಿದ್ದಾರೆ.

ಪಿಂಕ್‌ವಿಲ್ಲಾ ಜೊತೆ ಈ ಬಗ್ಗೆ ಮಾತನಾಡಿರುವ ಇಮ್ರಾನ್ ''ಟೈಗರ್ 3 ಚಿತ್ರದಲ್ಲಿ ನಾನು ಇದ್ದೇನೆ ಎಂದು ನಿಮಗೆ ಯಾರು ಹೇಳಿದ್ದು? ನಾನು ಚಿತ್ರೀಕರಣ ಮಾಡಿದ್ದೇನೆ ಅಂತ ಜನ ಹೇಳಿಕೊಳ್ಳುತ್ತಿದ್ದಾರೆ ಅಷ್ಟೇ. ಆದರೆ ನಾನು ಶೂಟ್ ಮಾಡಿಲ್ಲ. ನಿಜ ಏನಪ್ಪಾ ಅಂದ್ರೆ ನಾನು ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಆದರೂ ಜನ ಏಕೆ ಈ ರೀತಿ ಸುದ್ದಿ ಹರಡಿಸುತ್ತಿದ್ದಾರೆ ಗೊತ್ತಿಲ್ಲ. ಈ ಹಿಂದೆ ನಾನು ಎಲ್ಲಿಯೂ ಟೈಗರ್-3 ಚಿತ್ರದ ಬಗ್ಗೆ ಮಾತನಾಡಿಲ್ಲ ಹಾಗೂ ನಟಿಸುತ್ತಿದ್ದೇನೆ ಅಂತ ಹೇಳಲೇ ಇಲ್ಲ' ಎಂದು ಮಾಹಿತಿ ನೀಡಿದ್ದಾರೆ.

More from Filmibeat

English summary
Bollywood actor Emraan Hashmi’s 'Ezra' remake to have a direct OTT release; Movie rights sold for Rs 36 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X