twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ-ನಟಿ ಯಾರು?

    |

    ಕೋವಿಡ್ ಬಳಿಕ ಮನೊರಂಜನಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳೇ ಬಂದಿವೆ. ಅದರಲ್ಲಿ ಪ್ರಮುಖವಾದುದೆಂದರೆ ಒಟಿಟಿಗಳ ವೇಗದ ಬೆಳವಣಿಗೆ.

    ಕೋವಿಡ್‌ಗೆ ಮುಂಚೆಯೂ ಒಟಿಟಿಗಳಿದ್ದವಾದರೂ ಕೋವಿಡ್‌ ಸಮಯದಲ್ಲಿ ಕನಿಷ್ಟ 500 ಪಟ್ಟು ಇವುಗಳ ಬಳಕೆ ಹೆಚ್ಚಾಯಿತು. ಮಾತ್ರವಲ್ಲ, ಸಿನಿಮಾ, ಟಿವಿಗಳಿಗೆ ಪರ್ಯಾಯವಾಗಿ ಒಟಿಟಿ ವೀಕ್ಷಕರ ಬಳಗವೇ ಸೃಷ್ಟಿಯಾಯಿತು.

    ಅದೆಷ್ಟೆರ ಮಟ್ಟಿಗೆ ಒಟಿಟಿಗಳು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದುವೆಂದರೆ ಒಟಿಟಿಗಳಿಗಾಗಿಯೇ ಪ್ರತ್ಯೇಕವಾಗಿ ಸಿನಿಮಾ, ವೆಬ್ ಸರಣಿಗಳನ್ನು ಸಾಲು-ಸಾಲಾಗಿ ನಿರ್ಮಾಣ ಮಾಡುವಷ್ಟು. ಈಗಂತೂ ಒಟಿಟಿಗಳಿಗೆ ಮಾತ್ರವೇ ತಮ್ಮನ್ನು ಮೀಸಲು ಮಾಡಿಕೊಂಡ ಕೆಲವು ನಟ-ನಟಿಯರಿದ್ದಾರೆ. ದೊಡ್ಡ ಬಾಲಿವುಡ್ ಸ್ಟಾರ್ ನಟ-ನಟಿಯರು ಸಹ ಒಟಿಟಿಗಳ ಬಲ ಅರಿತು ಒಟಿಟಿಗಳತ್ತ ಮುಖ ಮಾಡಿದ್ದಾರೆ. ಹಾಗಿದ್ದರೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಒಟಿಟಿ ನಟ-ನಟಿ ಯಾರು? ಇಲ್ಲಿದೆ ಪಟ್ಟಿ.

    ದೊಡ್ಡ ಸಂಭಾವನೆ ಪಡೆದಿದ್ದ ಸೈಫ್ ಅಲಿ ಖಾನ್

    ದೊಡ್ಡ ಸಂಭಾವನೆ ಪಡೆದಿದ್ದ ಸೈಫ್ ಅಲಿ ಖಾನ್

    ಬಾಲಿವುಡ್ ನಟ ಸೈಫ್ ಅಲಿ ಖಾನ್, ಒಟಿಟಿಗಳ ಶಕ್ತಿಯನ್ನು ಮೊದಲು ಗ್ರಹಿಸಿದ ಬಾಲಿವುಡ್ ನಟ ಸೈಫ್ ಅಲಿ ಖಾನ್. ಅವರು ಕೋವಿಡ್ ಮುನ್ನವೇ ಒಟಿಟಿಗೆ ಕಾಲಿಟ್ಟಿದ್ದರು. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದ 'ಸೇಕ್ರೆಡ್ ಗೇಮ್ಸ್'ನಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸೈಫ್ ಕಾಣಿಸಿಕೊಂಡಿದ್ದರು. ಈ ವೆಬ್ ಸರಣಿಯಲ್ಲಿ ಸೈಫ್ ನಾಯಕನಾದರೂ ಹೆಚ್ಚು ಸ್ಕೋಪ್ ಇದ್ದಿದ್ದು ನವಾಜುದ್ದೀನ್ ಸಿದ್ಧಿಕಿ ಪಾತ್ರಕ್ಕೆ ಆದರೆ ಹೆಚ್ಚು ಸಂಭಾವನೆ ಪಡೆದಿದ್ದು ಮಾತ್ರ ಸೈಫ್. ಆ ವೆಬ್ ಸರಣಿಯಲ್ಲಿ ನಟಿಸಲು ಸೈಫ್ 15 ಕೋಟಿ ಪಡೆದಿದ್ದರಂತೆ. ಆ ಬಳಿಕ 'ತಾಂಡವ್' ವೆಬ್ ಸರಣಿಯಲ್ಲಿಯೂ ಸೈಫ್ ನಟಿಸಿದರು.

    ಎರಡನೇ ಸ್ಥಾನದಲ್ಲಿ ಮನೋಜ್ ಬಾಜಪೇಯಿ

    ಎರಡನೇ ಸ್ಥಾನದಲ್ಲಿ ಮನೋಜ್ ಬಾಜಪೇಯಿ

    ನಟ ಮನೋಜ್ ಬಾಜಪೇಯಿ ಪ್ರತಿಭಾವಂತ ನಟ ಆದರೆ ಅವರಿಗೆ ಹೆಚ್ಚು ಸಂಭಾವನೆ ಕರುಣಿಸಿದ್ದು ಒಟಿಟಿ, ಸಿನಿಮಾ ಅಲ್ಲ. 'ಫ್ಯಾಮಿಲಿ ಮ್ಯಾನ್' ಮೊದಲ ಸರಣಿ ಹಿಟ್ ಆದ ಬಳಿಕ ಎರಡನೇ ಸರಣಿಗೆ ಮನೋಜ್ ಬಾಜಪೇಯಿ ಸಂಭಾವನೆ ಹೆಚ್ಚಿಸಿಕೊಂಡ ಕಾರಣ ಅವರಿಗೆ 10 ಕೋಟಿ ಸಂಭಾವನೆ ನೀಡಲಾಯಿತು. ಮೂರನೇ ಸರಣಿಗೆ ಇನ್ನೂ ದೊಡ್ಡ ಮೊತ್ತದ ಸಂಭಾವನೆ ಮನೋಜ್ ಪಾಲಾಗಲಿದೆ. ಏಕೆಂದರೆ ಎರಡನೇ ಸೀಸನ್ ಭಾರಿ ದೊಡ್ಡ ಹಿಟ್ ಆಗಿದೆ.

    ನವಾಜುದ್ದೀನ್ ಸಿದ್ಧಿಕಿ ಸಂಭಾವನೆ ಎಷ್ಟು?

    ನವಾಜುದ್ದೀನ್ ಸಿದ್ಧಿಕಿ ಸಂಭಾವನೆ ಎಷ್ಟು?

    'ಸೇಕ್ರೆಡ್ ಗೇಮ್ಸ್' ಮೊದಲ ಸೀಸನ್ ಭಾರಿ ದೊಡ್ಡ ಹಿಟ್ ಆದ ಬಳಿಕ ಬಿಡುಗಡೆ ಆದ ಎರಡನೇ ಸೀಸನ್‌ ನಲ್ಲಿ ನವಾಜುದ್ದೀನ್ ಸಿದ್ಧಿಕಿಯೇ ಪ್ರಮುಖ ಪಾತ್ರ. ಹಾಗಾಗಿ ಈ ಸೀಸನ್‌ಗೆ ದೊಡ್ಡ ಸಂಭಾವನೆಯನ್ನೇ ನವಾಜ್‌ಗೆ ನೀಡಲಾಯ್ತು. ಸೇಕ್ರೆಡ್ ಗೇಮ್ಸ್ 2 ಗೆ ನವಾಜ್‌ಗೆ 10 ಕೋಟಿ ಸಂಭಾವನೆ ನೀಡಲಾಯ್ತು. ಮೂರನೇ ಸೀಸನ್‌ಗೆ ಸಂಭಾವನೆ ದುಪ್ಪಟ್ಟಾಗುವುದರಲ್ಲಿ ಅನುಮಾನವಿಲ್ಲ.

    ಪಂಕಜ್ ತ್ರಿಪಾಠಿಗೆ ದುಬಾರಿ ಸಂಭಾವನೆ

    ಪಂಕಜ್ ತ್ರಿಪಾಠಿಗೆ ದುಬಾರಿ ಸಂಭಾವನೆ

    ಕನ್ನಡದ 'ಚಿಗುರಿದ ಕನಸು' ಸಿನಿಮಾ ಮೂಲಕ ನಟನೆಗೆ ಬಂದ ಪಂಕಜ್ ತ್ರಿಪಾಠಿ, ಬಾಲಿವುಡ್‌ನ ಬಹುಬೇಡಿಕೆಯ ಪೋಷಕ ನಟ ಹಾಗೂ ವಿಲನ್. ಇವರು ಅಮೆಜಾನ್‌ನ ಸೂಪರ್ ಹಿಟ್ 'ಮಿರ್ಜಾಪುರ್' ವೆಬ್ ಸರಣಿಯ ಎರಡನೇ ಭಾಗಕ್ಕೆ ಬರೋಬ್ಬರಿ 10 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದರು.

    ಸಮಂತಾಗೆ ಎಷ್ಟು ಸಂಭಾವನೆ

    ಸಮಂತಾಗೆ ಎಷ್ಟು ಸಂಭಾವನೆ

    ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಸಮಂತಾ, 'ಫ್ಯಾಮಿಲಿ ಮ್ಯಾನ್ 2' ಮೂಲಕ ಒಟಿಟಿಗೆ ಕಾಲಿಟ್ಟರು. ಈ ವೆಬ್ ಸರಣಿಯಲ್ಲಿ ವಿಲನ್ ಆಗಿ ನಟಿಸಿದ್ದ ಸಮಂತಾ, ವೆಬ್ ಸರಣಿಗಾಗಿ ಸ್ಟಂಟ್‌ಗಳನ್ನು ಸಹ ತಾವೇ ಮಾಡಿದ್ದರು. ಈ ವೆಬ್ ಸರಣಿಗಾಗಿ ಸುಮಾರು ಐದು ಕೋಟಿ ರುಪಾಯಿ ಸಂಭಾವನೆಯನ್ನು ಸಮಂತಾ ಪಡೆದಿದ್ದರು. ಇದೀಗ ಮತ್ತೊಂದು ಒಟಿಟಿ ಪ್ರಾಜೆಕ್ಟ್‌ನಲ್ಲಿ ಸಮಂತಾ ತೊಡಗಿಸಿಕೊಂಡಿದ್ದಾರೆ.

    ರಾಧಿಕಾ ಆಪ್ಟೆ ಸಂಭಾವನೆ ಎಷ್ಟು?

    ರಾಧಿಕಾ ಆಪ್ಟೆ ಸಂಭಾವನೆ ಎಷ್ಟು?

    ಚಿತ್ರರಂಗ ಬಿಟ್ಟು ಬಹುತೇಕ ಒಟಿಟಿಯಲ್ಲಿಯೇ ತೊಡಗಿಕೊಂಡಿರುವ ರಾಧಿಕಾ ಆಪ್ಟೆಗೂ ಸಂಭಾವನೆ ಕೋಟಿಗಟ್ಟಲೆ ಲೆಕ್ಕದಲ್ಲಿದೆ. 'ಸೇಕ್ರೆಡ್ ಗೇಮ್ಸ್', 'ಮಿರ್ಜಾಪುರ್' ಸೇರಿದಂತೆ ಹಲವು ವೆಬ್ ಸರಣಿ, ಒಟಿಟಿ ಸ್ಪೆಷನ್ ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಆಪ್ಟೆ ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಾರಂತೆ.

    ಹೆಚ್ಚು ಸಂಭಾವನೆ ಪಡೆವ ಒಟಿಟಿ ನಟರು

    ಹೆಚ್ಚು ಸಂಭಾವನೆ ಪಡೆವ ಒಟಿಟಿ ನಟರು

    ಮೇಲಿನವರನ್ನು ಹೊರತುಪಡಿಸಿ ಕೆಲವು ನಟರು ಕೇವಲ ಒಟಿಟಿ ಮಾತ್ರದಲ್ಲೇ ನಟಿಸಿ ಅದರಿಂದಲೇ ಜನಪ್ರಿಯತೆ ಗಳಿಸಿದ್ದಾರೆ ಅವರಲ್ಲಿ ಮೊದಲ ಹೆಸರು ಬರುವುದು ಜಿತೇಂದ್ರ ಕುಮಾರ್ ಅವರದ್ದು. 'ಪಂಚಾಯತ್' ಹೆಸರಿನ ಸರಳವಾದ ಆದರೆ ಸುಂದರ ವೆಬ್ ಸರಣಿಯಲ್ಲಿ ನಟಿಸಿರುವ ಜಿತೇಂದ್ರ ಅವರಿಗೆ ದೊಡ್ಡ ಖ್ಯಾತಿ ದೊರೆತಿದೆ. ಅವರ ಸಂಭಾವನೆ ಪ್ರತಿ ಎಪಿಸೋಡ್‌ಗೆ ಹದಿನೈದು ಲಕ್ಷ. ಒಂದು ಸೀಸನ್‌ಗೆ ಸುಮಾರು 2 ಕೋಟಿ ಆಗುತ್ತದೆ. ಮಿರ್ಜಾಪುರದ ನಟ ಅಲಿ ಫಜಲ್‌ಗೆ ಸಹ ಎಪಿಸೋಡ್‌ಗೆ ಹದಿನೈದು ಲಕ್ಷ ನೀಡಲಾಗುತ್ತದೆ. ಇನ್ನು 'ಸ್ಕ್ಯಾಮ್' ಖ್ಯಾತಿಯ ಪ್ರತೀಕ್ ಗಾಂಧಿಗೆ ಆ ವೆಬ್ ಸರಣಿಗೆ ಪ್ರತಿ ಎಪಿಸೋಡ್‌ಗೆ 5 ಲಕ್ಷ ನೀಡಲಾಗಿತ್ತು.

    English summary
    Here is the list of highest paid OTT actors in India. Saif Ali Khan is on top. Samantha also in the list.
    Monday, December 5, 2022, 18:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X