Just In
Don't Miss!
- Sports
ಪಂತ್ ತನ್ನನ್ನು ವಾಸಿಂ ಭಾಯ್ ಎನ್ನುವುದರ ಗುಟ್ಟು ಬಿಚ್ಚಿಟ್ಟ ಅಕ್ಸರ್ ಪಟೇಲ್
- Automobiles
ಕುಶಾಕ್ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಇಂಟಿರಿಯರ್ ಡಿಸೈನ್ ಬಹಿರಂಗ
- Finance
EPFO ಮಹತ್ವದ ಘೋಷಣೆ: 2020-21ರ ಪಿಎಫ್ ಬಡ್ಡಿ ದರ 8.5%
- News
ಕೊರೊನಾ ಲಸಿಕೆ ಪಡೆಯುವ ಮುನ್ನ, ನಂತರ ಏನು ಮಾಡಬೇಕು?
- Lifestyle
ನಿಮ್ಮ ಕೂದಲಿನ ಸಮಸ್ಯೆಗೆ ತುಪ್ಪ ಮಾಡಲಿದೆ ಮ್ಯಾಜಿಕ್!
- Education
NITK Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡಕ್ಕೆ ಆಲ್‌ಫ್ಲಿಕ್ಸ್ ಒಟಿಟಿ: ಶೀಘ್ರ ಸೇವೆ ಆರಂಭ
ಈಗೇನಿದ್ದರೂ ಒಟಿಟಿಗಳ ಜಮಾನಾ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಗಳು ಮಾತ್ರವಲ್ಲದೆ ಈಗ ಭಾರತದಲ್ಲಿ 50 ಕ್ಕೂ ಹೆಚ್ಚು ಒಟಿಟಿಗಳು ಮನೊರಂಜನಾ ಸೇವೆ ನೀಡುತ್ತಿವೆ.
ಭಾಷೆಗಳು ತಮ್ಮವೇ ಆದ ಪ್ರತ್ಯೇಕ ಒಟಿಟಿಗಳನ್ನು ಹೊಂದಿವೆ. ತೆಲುಗಿನ 'ಆಹಾ' ಒಟಿಟಿ ಒಳ್ಳೆಯ ಪ್ರಸಿದ್ಧಿ ಪಡೆದಿದೆ. ಕನ್ನಡದಲ್ಲಿ ಒಂದು ಒಟಿಟಿ ಕಾರ್ಯಾರಂಭ ಮಾಡಿತಾದರೂ ಅಷ್ಟೇನೂ ಗುಣಮಟ್ಟದ ಸೇವೆ ಅದು ನೀಡಲಿಲ್ಲ. ಈಗ ಮತ್ತೊಂದು ಹೊಸ ಒಟಿಟಿ ಬರಲು ಸಜ್ಜಾಗಿದೆ.
ಆಲ್‌ಫ್ಲಿಕ್ಸ್ ಎಂಬ ಹೊಸ ಕನ್ನಡದ ಒಟಿಟಿಯನ್ನು ತರಲು ನಿರ್ಮಾಪಕ, ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ಸಜ್ಜಾಗಿದ್ದಾರೆ. ಮೂರು ದಶಕದಿಂದಲೂ ಕನ್ನಡ ಸಿನಿಮಾರಂಗವನ್ನು ಹತ್ತಿರದಿಂದ ಕಂಡು ಅನುಭವ ಹೊಂದಿರುವ ಸೆಬಾಸ್ಟಿಯನ್ ಈ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ಆಲ್‌ಫ್ಲಿಕ್ಸ್ ಎಂಟರ್ಟೈನ್‌ಮೆಂಟ್ ಲಿಮಿಟೆಡ್ ಎಂಬ ಹೊಸ ಸಂಸ್ಥೆ ಪ್ರಾರಂಭಿಸಿದ್ದು, ಈ ಹೊಸ ಸಂಸ್ಥೆ ಮೂಲಕ ಆಲ್‌ಫ್ಲಿಕ್ಸ್ ಎಂಬ ಕನ್ನಡದ ಒಟಿಟಿ ಚಾನೆಲ್ ಅನ್ನು ಲಾಂಚ್ ಮಾಡಲಿದ್ದಾರೆ. ಪೂರ್ಣ ಕನ್ನಡದ ಸಿನಿಮಾಗಳು, ವೆಬ್ ಸರಣಿಗಳು ಮಾತ್ರವೇ ಈ ಆಲ್‌ಫ್ಲಿಕ್ಸ್‌ನಲ್ಲಿ ಇರಲಿವೆಯಂತೆ.
50,000 ಮಂದಿ ಬಳಕೆದಾರರು ಏಕಕಾಲಕ್ಕೆ ಈ ಆಪ್ ಬಳಸಿದರೂ ಏನೂ ಸಮಸ್ಯೆ ಆಗದಂತೆ ಆಪ್ ಅನ್ನು ವಿನ್ಯಾಸ ಮಾಡಲಾಗಿದೆ ಎಂದು ಸೆಬಾಸ್ಟಿಯನ್ ಹೇಳಿದ್ದಾರೆ. ಈಗಾಗಲೇ ಒಂದು ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕುರಿಬಾಂಡ್ ಖ್ಯಾತಿಯ ಸುನಿಲ್ ಆ ವೆಬ್ ಸರಣಿಯ ನಾಯಕರಂತೆ. ಬೇರೆ ಕೆಲವು ನಿರ್ಮಾಪಕರು ಸಹ ತಾವೂ ವೆಬ್ ಸರಣಿ ನಿರ್ಮಿಸುವುದಾಗಿ ಮುಂದೆ ಬಂದಿದ್ದಾರಂತೆ.
ಈ ಹಿಂದೆ 'ನಮ್ಮಫ್ಲಿಕ್ಸ್' ಹೆಸರಿನ ಸಂಪೂರ್ಣ ಕನ್ನಡದ ಸಿನಿಮಾ, ವೆಬ್ ಸರಣಿಗಳನ್ನು ನೀಡುವ ಒಟಿಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ 'ನಮ್ಮಫ್ಲಿಕ್ಸ್' ಅಷ್ಟಾಗಿ ಯಶಸ್ವಿ ಆಗಲಿಲ್ಲ.