Don't Miss!
- News
ಜನವರಿ 30ರಂದು 291 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?
ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ. ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.
ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.
ಒಟಿಟಿ,
ಟಿವಿ
ಎರಡರಲ್ಲೂ
ಮಿಂಚಿದ
ಸಾನ್ಯಾ
ಐಯ್ಯರ್,
ಬಿಗ್‌ಬಾಸ್
ಮನೆಯಲ್ಲಿದ್ದಿದ್ದು
ಎಷ್ಟು
ದಿನ?
ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ.

'ಕಾಂತಾರ' ಸಿನಿಮಾ ಒಟಿಟಿಗೆ ಲಗ್ಗೆ
ಚಿತ್ರಮಂದಿರಗಳಲ್ಲಿ ಈಗಲೂ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿರುವ 'ಕಾಂತಾರ' ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೆಲ ದಿನಗಳ ಹಿಂದಷ್ಟೆ ಅಮೆಜಾನ್ ಪ್ರೈಂನಲ್ಲಿ 'ಕಾಂತಾರ' ಸಿನಿಮಾ ಬಿಡುಗಡೆ ಆಗಿದೆ. ಆದರೆ ವಿವಾದಕ್ಕೆ ಒಳಗಾಗಿದ್ದ 'ವರಾಹ ರೂಪಂ' ಹಾಡು ಒಟಿಟಿಯಲ್ಲಿ ಪ್ರಸಾರವಾಗುತ್ತಿಲ್ಲ ಬದಲಿಗೆ ಬೇರೊಂದು ಸಂಗೀತವನ್ನು ಆ ಹಾಡಿಗೆ ನೀಡಿ ಪ್ರಸಾರ ಮಾಡಲಾಗುತ್ತಿದೆ. ಅಮೆಜಾನ್ ಪ್ರೈಂನಲ್ಲಿಯೂ ಸಿನಿಮಾ ಸೂಪರ್ ಹಿಟ್ ಆಗಿದೆ.

ಆಸ್ಕರ್‌ಗೆ ಎಂಟ್ರಿ ಗಳಿಸಿರುವ 'ಲಾಸ್ಟ್ ಫಿಲಂ ಶೋ'
'RRR' ಸಿನಿಮಾವನ್ನು ಹಿಂದಿಕ್ಕಿ 2023 ರ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿರುವ ಗುಜರಾತಿ ಸಿನಿಮಾ ಚೆಲ್ಲೊ ಶೋ ಅಥವಾ 'ಲಾಸ್ಟ್ ಫಿಲಂ ಶೋ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ. ಸಿನಿಮಾದ ಬಗ್ಗೆ ಅತಿಯಾದ ಆಸಕ್ತಿಯುಳ್ಳ ಬಾಲಕನೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಈ ಬಾರಿ ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಕಳಿಸಲ್ಪಡುತ್ತದೆ ಎಂದುಕೊಳ್ಳುತ್ತಿರುವಾಗ 'ಲಾಸ್ಟ್ ಫಿಲಂ ಶೋ' ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿದೆ.

ಮೆಚ್ಚುಗೆ ಗಳಿಸಿದ್ದ 'ಚುಪ್'
ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭಾರಿ ಮೆಚ್ಚುಗೆ ಗಳಿಸಿದ್ದ ಹಿಂದಿ ಸಿನಿಮಾ 'ಚುಪ್' ಜೀ 5 ನಲ್ಲಿ ಈ ವಾರ ತೆರೆಗೆ ಬಂದಿದೆ. ಖ್ಯಾತ ನಿರ್ದೇಶಕ ಗುರುದತ್ ಗೌರವಾರ್ಥ ಮಾಡಲಾಗಿರುವ ಈ ಸಿನಿಮಾವು ಸರಣಿ ಕೊಲೆಗಾರನೊಬ್ಬ ಸಿನಿಮಾ ವಿಮರ್ಶಕರನ್ನು ಕೊಲ್ಲುವ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಸನ್ನಿ ಡಿಯೋಲ್, ಮಲಯಾಳಂ ನಟ ದುಲ್ಕರ್ ಸಲ್ಮಾನ್ ಇನ್ನಿತರರು ನಟಿಸಿದ್ದಾರೆ. ಸಿನಿಮಾದ ಬಗ್ಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಲಯಾಳಂ ಸಿನಿಮಾಗಳು
ನಿವೀನ್ ಪೌಲಿ ನಟನೆಯ 'ಪಡವೆಟ್ಟು' ಮಲಯಾಳಂ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರದಿಂದ ಸ್ಟ್ರೀಮ್ ಆಗುತ್ತಿದೆ. ರಾಜಕೀಯ ಹಿಂಸೆ, ಸಮುದಾಯಗಳ ಜಗಳ, ನಕ್ಸಲಿಸಂ ಇನ್ನಿತರ ವಿಷಯಗಳನ್ನು ಒಳಗೊಂಡಿರುವ ಆಕ್ಷನ್ ಥ್ರಿಲ್ಲರ್ ಕತೆಯನ್ನು 'ಪಟವೆಟ್ಟು' ಹೊಂದಿದೆ. ಅಕ್ಟೋಬರ್‌ನಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.

ತಮಿಳು, ತೆಲುಗು ಸಿನಿಮಾ
ಶಿವಕಾರ್ತಿಕೇಯನ್ ನಟನೆಯ ತಮಿಳು ಸಿನಿಮಾ 'ಪ್ರಿನ್ಸ್' ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಈ ವಾರದಿಂದ ತೆರೆಗೆ ಬಂದಿದೆ. ಬ್ರಿಟೀಷ್ ಯುವತಿಯೊಬ್ಬಾಕೆಯನ್ನು ಶಾಲಾ ಶಿಕ್ಷಕನೊಬ್ಬ ಪ್ರೀತಿಸುವ ಹಾಗೂ ಅದರಿಂದ ಎದುರಿಸುವ ಸಮಸ್ಯೆಗಳನ್ನು ಒಳಗೊಂಡ ಸಿನಿಮಾ ಇದಾಗಿದೆ. ಹಾಸ್ಯಪ್ರಧಾನ ಸಿನಿಮಾ ಇದಾಗಿದೆ. ಸಿನಿಮಾವನ್ನು ಅನುದೀಪ್ ಕೆವಿ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ತೆಲುಗಿನ 'ಮೀಟ್ ಕ್ಯೂಟ್' ಹೆಸರಿನ ಸಿನಿಮಾ ಸೋನಿ ಲಿವ್‌ನಲ್ಲಿ ತೆರೆ ಕಂಡಿದೆ. ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿದೆ.