For Quick Alerts
  ALLOW NOTIFICATIONS  
  For Daily Alerts

  ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ನಯನತಾರ ಹೊಸ ಚಿತ್ರ

  |

  ಲೇಡಿ ಸೂಪರ್ ಸ್ಟಾರ್ ನಯನತಾರ ನಟನೆಯ ಭಕ್ತಿ ಪ್ರಧಾನ ಚಿತ್ರ 'ಮೂಕುತಿ ಅಮ್ಮನ್' ಸಿನಿಮಾ ಬಿಡುಗಡೆ ಕುರಿತು ಸಾಕಷ್ಟು ಚರ್ಚೆಯಾಗ್ತಿದೆ.

  ಅಕ್ಟೋಬರ್ 15 ರಿಂದ ದೇಶಾದ್ಯಂತ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಮೂಲಕ ಸಿನಿಮಾ ಮಂದಿರ ಕಾರ್ಯನಿರ್ವಹಿಸಬಹುದು ಎಂದು ಸೂಚಿಸಿದೆ.

   ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ

  ಚಿತ್ರಮಂದಿರಕ್ಕೆ ಅನುಮತಿ ಸಿಕ್ಕಿದ್ದರೂ ಕೆಲವು ಚಿತ್ರಗಳು ಆನ್‌ಲೈನ್ ವೇದಿಕೆಯ ಮೊರೆ ಹೋಗುತ್ತಿವೆ. ಇದಕ್ಕೆ ನಯನತಾರ ನಟಿಸಿರುವ 'ಮೂಕುತಿ ಅಮ್ಮನ್' ಚಿತ್ರವೂ ಹೊರತಾಗಿಲ್ಲ ಎಂದು ಹೇಳಲಾಗಿದೆ.

  ಹೌದು, 'ಮೂಕುತಿ ಅಮ್ಮನ್' ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ಡಿಸ್ನಿ+ ಹಾಟ್‌ಸ್ಟಾರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಆರ್‌ಜೆ ಬಾಲಾಜಿ ಸುಳಿವು ನೀಡಿದ್ದಾರೆ. ಇದಕ್ಕೂ ಮುಂಚೆ ಮೇ 1 ರಂದು ಚಿತ್ರ ಬಿಡುಗಡೆಗೆ ಯೋಜಿಸಲಾಗಿತ್ತು. ಆದ್ರೆ, ಕೊರೊನಾ ಲಾಕ್‌ಡೌನ್ ಆದ ಪರಿಣಾಮ ಯೋಜನೆ ತಲೆಕೆಳಗಾಗಿತ್ತು.

  ಫಿಕ್ಸ್ ಆಯ್ತು ಕಾಜಲ್ ಮದುವೆ, ಹುಡುಗ ಯಾರು ಗೊತ್ತಾ | Filmibeat Kannada

  ಇನ್ನುಳಿದಂತೆ ಸ್ಮೃತಿ ವೆಂಕಟ್, ಊರ್ವಶಿ, ಅಜಯ್ ಘೋಷ್, ಮತ್ತು ಇಂಧುಜಾ ರವಿಚಂದ್ರನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ವಿಶೇಷ ಅಂದ್ರೆ ನಿರ್ದೇಶಕ ಆರ್‌ಜೆ ಬಾಲಾಜಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಗಿರೀಶ್ ಜಿ ಸಂಗೀತ ಒಳಗೊಂಡಿದೆ.

  Read more about: nayanatara tamil ತಮಿಳು
  English summary
  Tamil actress Nayanthara’s upcoming movie Mookuthi Amman set to Release On Disney+ Hotstar On Diwali 2020?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X