For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನೆಟ್‌ಫ್ಲಿಕ್ಸ್‌: ಕಾರಣ ಆ ವಿಡಿಯೋ

  |

  ನಟ ಪ್ರಭಾಸ್‌, ಕೇವಲ ತೆಲುಗು ಅಥವಾ ಭಾರತೀಯ ಚಿತ್ರರಂಗದ ತಾರೆಯಲ್ಲ. ಪ್ರಭಾಸ್ ಈಗ ಗ್ಲೋಬಲ್ ಸ್ಟಾರ್. ಅವರ ಅಭಿಮಾನಿಗಳು ಸಹ ವಿಶ್ವದಾದ್ಯಂತ ಇದ್ದಾರೆ.

  'ಬಾಹುಬಲಿ' ಮೂಲಕ ಗ್ಲೋಬಲ್ ಸ್ಟಾರ್ ಆಗಿರುವ ಪ್ರಭಾಸ್‌ ಇತ್ತೀಚೆಗೆ ಸತತ ಸೋಲುಗಳಿಂದಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಸಿನಿಮಾ ಹಿಟ್ ಆಗಿಲ್ಲದಿದ್ದರು ಪ್ರಭಾಸ್ ಅಭಿಮಾನಿಗಳ ಸಂಖ್ಯೆಯಲ್ಲಾಗಲಿ, ಅಭಿಮಾನಿಗಳ ಜೋಶ್‌ ಆಗಲಿ ಕಡಿಮೆಯಾಗಿಲ್ಲ.

  ಸತತ ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್‌ ಗೆ ಟಾಂಗ್ ನೀಡಿ ಹಾಸ್ಯ ಮಾಡುವ ಪ್ರಯತ್ನವನ್ನು ಜನಪ್ರಿಯ ಒಟಿಟಿ ನೆಟ್‌ಫ್ಲಿಕ್ಸ್‌ ಮಾಡಿದ್ದು, ಇದೇ ಕಾರಣಕ್ಕೆ ಈಗ ಪ್ರಭಾಸ್ ಅಭಿಮಾನಿಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ.

  ಆಗಿದ್ದಿಷ್ಟು, ಪ್ರಭಾಸ್‌ರ ಹಳೆಯ ಸಿನಿಮಾ ವಿಡಿಯೋ ಒಂದನ್ನು ನೆಟ್‌ಫ್ಲಿಕ್ಸ್‌ ಇಂಡೋನೇಶಿಯಾ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ತಮಾಷೆ ಮಾಡಲಾಗಿತ್ತು. ಹೀಗಾಗಿ ನೆಟ್‌ಫ್ಲಿಕ್ಸ್‌ನ ವಿರುದ್ಧ ಪ್ರಭಾಸ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.

  ಹಳೆ ದೃಶ್ಯ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್‌

  ಹಳೆ ದೃಶ್ಯ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್‌

  'ಸಾಹೋ' ಸಿನಿಮಾದಲ್ಲಿ ನಟ ಪ್ರಭಾಸ್, ಮೊದಲಿಗೆ ಪ್ಯಾರಚೂಟ್ ಬ್ಯಾಗನ್ನು ಎಸೆದು ಬಳಿಕ ತಾನು ಮೇಲಿನಿಂದ ಕೆಳಗೆ ಹಾರಿ. ಆಕಾಶದಲ್ಲಿಯೇ ಏನೇನೋ ಸಾಹಸ ಮಾಡಿ ಕೊನೆಗೆ ಆ ಪ್ಯಾರಚೂಟ್ ಬ್ಯಾಗನ್ನು ಧರಿಸಿ, ಪರ್ಫೆಕ್ಟ್ ಆಗಿ ನೆಲದ ಮೇಲೆ ಲ್ಯಾಂಡ್ ಆಗುತ್ತಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಇಂಡೋನೇಷಿಯಾ ನೆಟ್‌ಫ್ಲಿಕ್ಸ್‌ 'ಇದೆಂಥಹಾ ಆಕ್ಷನ್ ದೃಶ್ಯ' ಎಂದು ಹೇಳಿ ತಮಾಷೆ ಮಾಡಿದೆ.

  ಸ್ಕ್ರೀನ್‌ಶಾಟ್ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು

  ಸ್ಕ್ರೀನ್‌ಶಾಟ್ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು

  ಕೆಲವು ನೆಟ್ಟಿಗರು, ಈ ದೃಶ್ಯ ಉತ್ತಮ ಆಕ್ಷನ್‌ ಎಸೆನ್ಸ್ ಹೊಂದಿಲ್ಲ ಎಂಬ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ, ಫಿಸಿಕ್ಸ್‌ ಲಾಗಳಿಗೆ ವಿರುದ್ಧವಾದುದು ಎಂದೂ ಸಹ ಹೇಳಿದ್ದಾರೆ. ಆದರೆ ಹಲವು ಪ್ರಭಾಸ್ ಅಭಿಮಾನಿಗಳು, ನೆಟ್‌ಫ್ಲಿಕ್ಸ್‌, ಪ್ರಭಾಸ್ ಸಿನಿಮಾದ ದೃಶ್ಯದ ಬಗ್ಗೆ ಹಾಸ್ಯ ಮಾಡಿರುವುದನ್ನು ಸಹಿಸಿಲ್ಲ. ಪ್ರಭಾಸ್ ಅಭಿಮಾನಿಗಳು ನೆಟ್‌ಫ್ಲಿಕ್ಸ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವರಂತೂ ನೆಟ್‌ಫ್ಲಿಕ್ಸ್‌ ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದಾರೆ.

  ಅನ್‌ಸಬ್‌ಸ್ಕ್ರೈಬ್‌ನೆಟ್‌ಫ್ಲಿಕ್ಸ್‌' ಅಭಿಯಾನ

  ಅನ್‌ಸಬ್‌ಸ್ಕ್ರೈಬ್‌ನೆಟ್‌ಫ್ಲಿಕ್ಸ್‌' ಅಭಿಯಾನ

  ನೆಟ್‌ಫ್ಲಿಕ್ಸ್‌ ವಿರುದ್ಧ ಅಭಿಯಾನ ಆರಂಬಿಸಿರುವ ಕೆಲವು ಅಭಿಮಾನಿಗಳು, 'ಅನ್‌ಸಬ್‌ಸ್ಕ್ರೈಬ್‌ನೆಟ್‌ಫ್ಲಿಕ್ಸ್‌' ಅನ್ನು ಟ್ರೆಂಡ್ ಮಾಡುತ್ತಿದ್ದಾರೆ. ಈ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಹಲವು ಟ್ವೀಟ್ ಮಾಡುತ್ತಿದ್ದು, ಹಲವು ನೆಟ್ಟಿಗರು, ತಾವು ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ರದ್ದು ಮಾಡಿರುವ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು 'ಅನ್‌ಸಬ್‌ಸ್ಕ್ರೈಬ್‌ನೆಟ್‌ಫ್ಲಿಕ್ಸ್‌' ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೂರು ವರ್ಷದ ಹಿಂದಿನ ವಿಡಿಯೋವನ್ನು ಹಂಚಿಕೊಂಡು ತಮಾಷೆ ಮಾಡುವುದು ನೆಟ್‌ಫ್ಲಿಕ್ಸ್‌ನಂಥಹಾ ಸಂಸ್ಥೆಯ ಘನತೆಗೆ ತಕ್ಕುದದ್ದಲ್ಲ ಎಂದು ಸಹ ಕೆಲವರು ವಾದಿಸಿದ್ದಾರೆ.

  ಹಲವು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

  ಪ್ರಭಾಸ್ ಪ್ರಸ್ತುತ ನಾಲ್ಕು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಭಾಸ್ ನಟಿಸಿ, ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿ. ಪ್ರಭಾಸ್ ನಟಿಸಿರುವ 'ಆದಿಪುರುಷ್' ಸಹ ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಸಿನಿಮಾವು ರಾಮಾಯಣ ಕತೆ ಹೊಂದಿದ್ದು, ಸೈಫ್ ಅಲಿ ಖಾನ್ ರಾವಣ ಹಾಗೂ ಕೃತಿ ಸೆನನ್ ಸೀತಾ ಮಾತೆಯ ಪಾತ್ರದಲ್ಲಿ ನಟಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಫ್ಯಾಂಟಸಿ ಸಿನಿಮಾದಲ್ಲಿಯೂ ಪ್ರಭಾಸ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಮಾರುತಿ ನಿರ್ದೇಶನದ ಹಾರರ್ ಕಾಮಿಡಿ ಸಿನಿಮಾದಲ್ಲಿಯೂ ಪ್ರಭಾಸ್ ನಟಿಸಲಿದ್ದಾರೆ.

  English summary
  Prabhas fans angry on Netflix for sharing a old action scene of Prabhas from Sahoo movie which is very unreal.
  Monday, November 7, 2022, 17:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X