For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ನೋಡಲ್ಪಟ್ಟ ಸಿನಿಮಾ ಇದು

  |

  ಒಟಿಟಿ ದೈತ್ಯ ಅಮೆಜಾನ್ ಪ್ರೈಂ ಭಾರತದ ನೆಚ್ಚಿನ ಒಟಿಟಿ ಫ್ಲ್ಯಾಟ್‌ಫಾರ್ಮ್ ಆಗಿದೆ. ನೆಟ್‌ಫ್ಲಿಕ್ಸ್‌ಗೆ ಹೋಲಿಸಿದರೆ ಬಹಳ ಕಡಿಮೆ ವೆಚ್ಚದ ಅಮೆಜಾನ್ ಪ್ರೈಂ ಭಾರತೀಯ ಸಿನಿಮಾಗಳಿಗೆ ನೆಟ್‌ಫ್ಲಿಕ್ಸ್‌ಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ.

  ಕನ್ನಡ, ಮಲಯಾಳಂ, ತಮಿಳು, ಮರಾಠಿ, ತೆಲುಗು ಹಾಗೂ ಹಿಂದಿ ಭಾಷೆಗಳ ಹಲವು ಸಿನಿಮಾಗಳನ್ನು ಎಕ್ಸ್‌ಕ್ಲೂಸಿವ್ ಆಗಿ ಬಿಡುಗಡೆ ಮಾಡಿ ಅತ್ಯಂತ ಕಡಿಮೆ ಮೊತ್ತಕ್ಕೆ ಮನೆ ಮಂದಿಯೆಲ್ಲ ಒಟ್ಟಿಗೆ ಮನೆಯಲ್ಲಿಯೇ ಸಿನಿಮಾ ನೋಡುವ ಅವಕಾಶವನ್ನು ಅಮೆಜಾನ್ ಪ್ರೈಂ ಮಾಡಿಕೊಡುತ್ತಿದೆ.

  ಕಳೆದ ವರ್ಷಾರಂಭದಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದಲೂ ಹಲವಾರು ಭಾರತೀಯ ಭಾಷೆಯ ಸಿನಿಮಾಗಳನ್ನು ಅಮೆಜಾನ್ ಪ್ರೈಂ ಬಿಡುಗಡೆ ಮಾಡಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ವೀಕ್ಷಕರಿಗೆ ಒದಗಿಸಿದೆ. ಅಮೆಜಾನ್‌ನಲ್ಲಿ ಬಿಡುಗಡೆ ಆದ ಹಲವು ಸಿನಿಮಾಗಳನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ. ಆದರೆ ಎಲ್ಲ ಸಿನಿಮಾಗಳಿಗಿಂತಲೂ ಹೆಚ್ಚು ನೋಡಲ್ಪಟ್ಟ ಸಿನಿಮಾ ಹಿಂದಿಯ 'ಶೇರ್ಷಾ'.

  ಹೌದು, ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಹೆಗ್ಗಳಿಕೆ ಇತ್ತೀಚೆಗಷ್ಟೆ ಬಿಡುಗಡೆ ಆದ 'ಶೇರ್ಷಾ'ಗೆ ಪ್ರಾಪ್ತಿಯಾಗಿದೆ. ಈ ಸಿನಿಮಾದ ನಾಯಕ ನಟ ಸಿದ್ಧಾರ್ಥ್ ಮಲ್ಹೋತ್ರಾ ಈ ಖುಷಿಯ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

  'ಶೇರ್ಷಾ' ಸಿನಿಮಾವು ಭಾರತದ 4100ಕ್ಕೂ ಹೆಚ್ಚು ನಗರಗಳಲ್ಲಿ ಅಮೆಜಾನ್ ಪ್ರೈಂ ಮೂಲಕ ನೋಡಲ್ಪಟ್ಟಿದೆ. 210ಕ್ಕೂ ವಿವಿಧ ದೇಶಗಳಲ್ಲಿ ಜನರು ಅಮೆಜಾನ್ ಪ್ರೈಂ ಮೂಲಕ ಈ ಸಿನಿಮಾವನ್ನು ನೋಡಿದ್ದಾರೆ. ಆ ಮೂಲಕ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಸಿನಿಮಾ ಇದೆಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸಿನಿಮಾಕ್ಕೆ ಐಎಂಬಿಡಿಯಲ್ಲಿ 10 ಕ್ಕೆ 8.9 ಅಂಕಗಳನ್ನು ನೀಡಲಾಗಿದೆ.

  'ಶೇರ್ಷಾ' ಸಿನಿಮಾವು ದಿವಂಗತ ಕ್ಯಾಪ್ಟನ್ ವಿಕ್ರಂ ಭಾತ್ರಾ ಜೀವನದ ಕತೆ ಹೊಂದಿದೆ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೈನ್ಯದ ಜೊತೆ ಹೋರಾಡಿದ ವಿಕ್ರಂ ಭಾತ್ರಾ ಅದೇ ಯುದ್ಧದಲ್ಲಿ ಅಮರರಾಗಿದ್ದರು. ಅವರ ಜೀವನದ ಕತೆಯನ್ನೇ ಸಿನಿಮಾ ಮಾಡಲಾಗಿದ್ದು ವಿಕ್ರಂ ಭಾತ್ರಾ ಪಾತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ.

  'ಶೇರ್ಷಾ' ಸಿನಿಮಾವು ಆಗಸ್ಟ್ 12 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಸಿನಿಮಾವನ್ನು ತಮಿಳಿನ ವಿಷ್ಣುವರ್ಧನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 'ಶೇರ್ಷಾ' ಸಿನಿಮಾಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಧನಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ನಟ ಕಮಲ್ ಹಾಸನ್ ಸಹ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡಿದ್ದರು.

  English summary
  Hindi movie Sheshaah is Amazon Prime's most watched movie. It streamed in more than 210 countries across the world.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X