For Quick Alerts
  ALLOW NOTIFICATIONS  
  For Daily Alerts

  ತೆರೆಗೆ ಬರಲಿದೆ ಟಾಟಾ ಕುಟುಂಬದ ಕತೆ: ಸಿನಿಮಾ ಅಥವಾ ವೆಬ್ ಸರಣಿ?

  |

  ಬಾಲಿವುಡ್‌ನಲ್ಲಿ ಕೆಲ ವರ್ಷಗಳಿಂದಲೂ ಬಯೋಪಿಕ್‌ಗಳು ಒಂದರ ಹಿಂದೊಂದರಂತೆ ಬರುತ್ತಲೇ ಇವೆ. ಅದರಲ್ಲಿಯೂ ಕ್ರೀಡಾಪಟುಗಳ ಬಗ್ಗೆಯಂತೂ ವಿಪರೀತ ಎನಿಸುವಷ್ಟು ಬಯೋಪಿಕ್‌ಗಳು ಬಂದಿವೆ. ಆದರೆ ಈಗ ಭಾರತದ ದೊಡ್ಡ ಉದ್ಯಮವೊಂದರ ಬಗ್ಗೆ ಉದ್ಯಮದ ಹಿಂದಿನ ಕುಟುಂಬದ ಬಗ್ಗೆ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

  ಭಾರತದ ಅತ್ಯುತ್ತಮ ಬ್ಯುಸಿನೆಸ್ ಗ್ರೂಪ್ ಆದ ಟಾಟಾ ಕುರಿತಾದ ಸಿನಿಮಾ ತೆರೆಗೆ ಬರಲಿದ್ದು, ಟಿ ಸೀರೀಸ್ ಹಾಗೂ ಆಲ್‌ಮೈಟಿ ಮೋಷನ್ ಪಿಕ್ಚರ್ಸ್‌ನವರು ಟಾಟಾ ಗ್ರೂಪ್‌ನ ಕತೆಯ ಹಕ್ಕುಗಳನ್ನು ಖರೀದಿಸಿದ್ದು, ಇವರೇ ಸಿನಿಮಾದ ನಿರ್ಮಾಣ ಸಹ ಮಾಡಲಿದ್ದಾರೆ.

  ಧೀರ್ಘ ಇತಿಹಾಸವಿರುವ ಟಾಟಾ ಕುಟುಂಬದ ಕತೆಯ ಜೊತೆಗೆ ಟಾಟಾ ಗ್ರೂಪ್ ಬೆಳೆದ ಕತೆಯನ್ನು ಸಹ ಈ ಸಿನಿಮಾ ಒಳಗೊಂಡಿರಲಿದೆ. ತಯಾರಾಗಲಿರುವ ಸಿನಿಮಾವು 'ದಿ ಟಾಟಾಸ್' ಹೆಸರಿನ ಪುಸ್ತಕವನ್ನು ಆಧರಿಸಿದ್ದಾಗಿರಲಿದೆ. ಪುಸ್ತಕವನ್ನು ಹಿರಿಯ ಪತ್ರಕರ್ತ ಗಿರೀಶ್ ಕುಬೇರ್ ಬರೆದಿದ್ದಾರೆ.

  ಈ ಬಗ್ಗೆ ಅಧಿಕೃತ ಹೇಳಿಕೆ ಹೊರಡಿಸಿರುವ ಟಿಸೀರೀಸ್, ''ಟಿ ಸೀರೀಸ್ ಹಾಗೂ ಆಲ್‌ಮೈಟಿ ಮೋಷನ್ ಪಿಕ್ಚರ್ಸ್ ಒಟ್ಟಿಗೆ ಟಾಟಾ ಕುಟುಂಬದ ಕತೆಯ ಹಕ್ಕುಗಳನ್ನು ಖರೀದಿಸಿದ್ದು ಹೆಮ್ಮೆ ಎನಿಸುತ್ತಿದೆ. ಮೂರು ಪೀಳಿಗೆಗಳಿಂದಲೂ ಭಾರತವನ್ನು ಕಟ್ಟುವ ಕೆಲಸ ಮಾಡುತ್ತಿರುವ ಹೆಮ್ಮೆಯ ಕುಟುಂಬದ ಕತೆಯನ್ನು ಪರಿಚಯಿಸುತ್ತಿರುವುದಕ್ಕೆ ಹೆಮ್ಮೆ ಇದೆ'' ಎಂದಿದ್ದಾರೆ.

  ಆದರೆ ಟಾಟಾ ಕುಟುಂಬದ ಕತೆ ಸಿನಿಮಾ ಆಗುತ್ತದೆಯೋ ಅಥವಾ ವೆಬ್ ಸರಣಿ ಆಗುತ್ತದೆಯೋ ಎಂಬ ಬಗ್ಗೆ ಟೀ ಸೀರಿಸ್ ಆಗಲಿ ಆಲ್‌ಮೈಟಿ ಮೋಷನ್ ನವರಾಗಲಿ ಗುಟ್ಟಿ ಬಿಟ್ಟುಕೊಟ್ಟಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಟಾಟಾ ಕುಟುಂಬದ ಕತೆ ವೆಬ್ ಸರಣಿ ಆಗಿರಲಿದೆಯಂತೆ.

  1839 ರ ಜೆಮ್‌ಶೆಡ್‌ ಜೀ ಟಾಟಾ ಅವರಿಂದ ಆರಂಭಿಸಿ ಈಗಿನ ರತನ್ ಟಾಟಾ ವರೆಗೆ ಮೂರು ತಲೆಮಾರಿನ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿರಲಿದೆ. ಟಾಟಾ ಕುಟುಂಬ ಮತ್ತು ಟಾಟಾ ಗ್ರೂಪ್ಸ್ ಎದುರಿಸಿದ ಸವಾಲುಗಳು, ಅವುಗಳನ್ನು ಮೆಟ್ಟಿನಿಂತ ರೀತಿ. ಭಾರತದ ಅತಿ ವಿಶ್ವಾಸಾರ್ಹ ಸಂಸ್ಥೆಯಾಗಿ ಹೊರಹೊಮ್ಮಿದ ರೀತಿ ಇತರೆ ವಿಷಯಗಳ ಬಗ್ಗೆ ಈ ವೆಬ್ ಸರಣಿ ಬೆಳಕು ಚೆಲ್ಲಲಿದೆ.

  English summary
  Tata family story rights acquired by T Series and Almighty motion pictures. Tata families story will be made as a web series.
  Tuesday, May 24, 2022, 20:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X