For Quick Alerts
  ALLOW NOTIFICATIONS  
  For Daily Alerts

  ಹಿಂದಿಯೇತರ ಪಾತ್ರಗಳನ್ನು ಕೀಳಾಗಿ ಚಿತ್ರಿಸಿದೆ ಬಾಲಿವುಡ್: ಸಿದ್ಧಾರ್ಥ್

  |

  ಬಹುಭಾಷಾ ನಟ ಸಿದ್ಧಾರ್ಥ್ ತಮ್ಮ ಅಭಿಪ್ರಾಯವನ್ನು ಗಟ್ಟಿಯಾಗಿ ಹೇಳುವ ಧೈರ್ಯವಂತ ನಟರಲ್ಲಿ ಒಬ್ಬರು. ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳ ಬಗ್ಗೆ ನಿರ್ಭೀತಿಯಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಸಿದ್ಧಾರ್ಥ್.

  ಬಾಲಿವುಡ್ ಹಲವು ದಶಕಗಳಿಂದ ದಕ್ಷಿಣ ಭಾರತದವರನ್ನು ಹೇಗೆ ನಡೆಸಿಕೊಂಡಿತು, ಯಾವ ದೃಷ್ಟಿಯಿಂದ ನೋಡುತ್ತಿತ್ತು ಎಂಬುದನ್ನು ಸಿದ್ಧಾರ್ಥ್ ಹೇಳಿದ್ದಾರೆ. ಸಿದ್ಧಾರ್ಥ್‌ರ ಈ ಹೇಳಿಕೆ ಬಾಲಿವುಡ್‌ ಮಂದಿಯ ಕಣ್ಣನ್ನು ಇನ್ನಷ್ಟು ಕೆಂಪಗೆ ಮಾಡಲಿದೆ ಎಂಬುದು ಖಾತ್ರಿ.

  ಸಿದ್ಧಾರ್ಥ್‌, 'ಎಸ್ಕೈಪ್ ಪ್ಲಾನ್' ಹೆಸರಿನ ವೆಬ್ ಸರಣಿಯೊಂದರಲ್ಲಿ ನಟಿಸಿದ್ದು, ಈ ವೆಬ್ ಸರಣಿಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ಧಾರ್ಥ್, ''ಬಾಲಿವುಡ್‌ನಲ್ಲಿ ವರ್ಷಗಳಿಂದಲೂ ದಕ್ಷಿಣ ಭಾರತದ ಅಥವಾ ಹಿಂದಿಯೇತರ ಭಾಷಿಕ ಪಾತ್ರಗಳನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ'' ಎಂದಿದ್ದಾರೆ.

  ''ಹಿಂದಿನ ಸಿನಿಮಾಗಳಲ್ಲಿ ಕಮಿಡಿಯನ್ ಮೆಹಮೂದ್ ಮಾಡುತ್ತಿದ್ದ ಪಾತ್ರಗಳು ಬಹಳ ವಿಚಿತ್ರವಾಗಿಯೂ, ಅವಾಸ್ತವಿಕವಾಗಿಯೂ ಇದ್ದವು. ಆದರೆ ಜನ ಅವನ್ನು ಮೆಚ್ಚಿದ್ದರು. ಆದರೆ ಈಗ ಮೆಹಮೂದ್ ಅವರ ಆ ಪಾತ್ರಗಳನ್ನು ನೋಡಿದರೆ ಬೇಸರ ಎನಿಸುತ್ತದೆ'' ಎಂದಿದ್ದಾರೆ ಸಿದ್ಧಾರ್ಥ್. ಬಾಲಿವುಡ್‌ನ ಜನಪ್ರಿಯ ಹಾಸ್ಯನಟ ಮೆಹಮೂದ್ ತಮ್ಮ ಹಲವು ಸಿನಿಮಾಗಳಲ್ಲಿ ದಕ್ಷಿಣ ಭಾರತದ ವ್ಯಕ್ತಿಯ ಪಾತ್ರಗಳನ್ನು ಮಾಡಿದ್ದಾರೆ. ಆ ಪಾತ್ರಗಳು ದಡ್ಡ, ವ್ಯಂಗ್ಯ ರೀತಿಯ ವ್ಯಕ್ತಿತ್ವವನ್ನೇ ಹೊಂದಿದ್ದವು.

  ''ಮಿಥುನ್ ಚಕ್ರವರ್ತಿ ಸಿನಿಮಾ ಒಂದರಲ್ಲಿ ಕೃಷ್ಣ ಐಯ್ಯರ್ ಎಂದು ಹೆಸರಿಟ್ಟುಕೊಂಡು ಎಳನೀರು ಮಾರುತ್ತಿರುತ್ತಾರೆ. ಆಗೆಲ್ಲ ಆ ಸಿನಿಮಾಗಳನ್ನು ಒಪ್ಪಿಕೊಂಡರು ಆದರೆ ಈಗ ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಕನ್ನಡಿಗನನ್ನೊ, ಕಾಶ್ಮೀರಿಯನ್ನೊ ಹಾಗೆ ತೋರಿಸಿದರೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಯುದ್ಧವನ್ನೇ ಸಾರುತ್ತಾರೆ'' ಎಂದಿದ್ದಾರೆ ಸಿದ್ಧಾರ್ಥ್.

  ನಟ ಸಿದ್ಧಾರ್ಥ್, 'ಎಸ್ಕೈಪ್ ಲೈವ್' ವೆಬ್ ಸರಣಿಯಲ್ಲಿ ಕನ್ನಡಿಗನ ಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿಯ ಟ್ರೇಲರ್‌ನಲ್ಲಿ ದೃಶ್ಯವೊಂದಿದೆ. ವ್ಯಕ್ತಿಯೊಬ್ಬ ಸಿದ್ಧಾರ್ಥ್‌ಗೆ 'ಮಲಯಾಳಿ' ಎಂದು ಮೂದಲಿಸುವ ರೀತಿಯಲ್ಲಿ ಹೇಳುತ್ತಾನೆ. ಆಗ ಸಿದ್ಧಾರ್ಥ್, ''ಹೇ ಮಗಾ, ನಾನು ಕನ್ನಡಿಗ, ನೀನು ಇರುವುದು ಕರ್ನಾಟಕದಲ್ಲಿ'' ಎನ್ನುತ್ತಾರೆ.

  ಸಿದ್ಧಾರ್ಥ್ ನಟಿಸಿರುವ 'ಎಸ್ಕೈಪ್ ಲೈವ್' ವೆಬ್ ಸರಣಿಯು ಸಾಮಾಜಿಕ ಜಾಲತಾಣದ ಕೆಡುಕುಗಳ ಕುರಿತಾದ ಕತೆ ಹೊಂದಿದೆ, ಟಿಕ್‌ ಟಾಕ್ ಇನ್ನಿತರೆ ಕಿರು ವಿಡಿಯೋ ಆಪ್‌ಗಳು ಹೇಗೆ ಯುವಕರನ್ನು ಮರುಳು ಮಾಡಿ, ಹಣಕ್ಕೆ, ನಂಬರ್ ಒನ್ ಆಗುವ ಆಸೆ ತೋರಿಸಿ ಅಥವಾ ಸ್ಟಾರ್ ಆಗುವ ಆಸೆ ತೋರಿಸಿ ಅವರ ದಿಕ್ಕು ತಪ್ಪಿಸಿ ತಾವು ಹಣ ದೋಚುತ್ತಿವೆ ಎಂಬ ಕತೆಯನ್ನು ಹೊಂದಿದೆ. ವೆಬ್ ಸರಣಿಯ ಟ್ರೇಲರ್ ಬಹಳ ವೈರಲ್ ಆಗಿದೆ.

  ನಟ ಸಿದ್ಧಾರ್ಥ್, ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರಂಗ್ ದೇ ಬಸಂತಿ', 'ಸ್ಟ್ರೈಕರ್', 'ಚಷ್ಮೇ ಬಹದ್ದೂರ್', 'ದಿ ಹೌಸ್ ನೆಕ್ಸ್ಟ್ ಡೋರ್'ಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಹಿಂದಿ ವೆಬ್ ಸರಣಿಗಳಾದ 'ಲೈಲಾ' ಹಾಗೂ ಈಗ 'ಎಸ್ಕೈಪ್ ಲೈವ್' ನಲ್ಲಿ ನಟಿಸಿದ್ದಾರೆ.

  English summary
  Actor Siddharth said Bollywood portrayed non Hindi characters as caricatures. He gave example of comedy actor Mehmood and Mithun Chakraborty.
  Wednesday, May 18, 2022, 13:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X