For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಜೋಕಾಲಿ, ಮತ್ತೊಂದು ಪ್ರೇಮಕಥೆ

  By * ದೇವಶೆಟ್ಟಿ ಮಹೇಶ್
  |

  ಈ ತಿರುಳಿನ ಕತೆಗಳು ಕನ್ನಡದಲ್ಲಿಹಲವಾರು ಬಂದಿವೆ. ಅದೇ ಹಾದಿಯಲ್ಲಿ ಬಂದಿರುವ ಮತ್ತೊಂದು ಚಿತ್ರ-ಜೋಕಾಲಿ. ನಿರ್ದೇಶಕ ದೀಪಕ್ ಇಲ್ಲಿ ಇರುವುದರಲ್ಲೇ ಇನ್ನೊಂದು ಆಯಾಮ ತೋರುವ ಪ್ರಯತ್ನ ಮಾಡಿದ್ದಾರೆ.

  ಒಬ್ಬ ಟೆಂಟ್‌ನಲ್ಲಿ ಟಿಕೆಟ್ ಹರಿಯುವ ಹುಡುಗ ಅದೇ ಊರಿನ ರಾಜಕಾರಣಿಯ ತಂಗಿಯ ಪ್ರೇಮ ಪ್ರಕರಣವನ್ನು 'ಜೋಕಾಲಿ' ಮೇಲಿಟ್ಟು ತೂಗಿದ್ದಾರೆ ದೀಪಕ್. ಇಲ್ಲಿ ಎಲ್ಲ ಇವೆ. ಪ್ರೀತಿಯ ಪರದಾಟ, ಹೊಡೆದಾಟ, ಕಾದಾಟ, ಕಿತ್ತಾಟ, ಮತ್ತೆ ರಾಮ ರಾವಣರ ಆಟ... ಎಲ್ಲವನ್ನೂ ಸಹಿಸಿಕೊಂಡು ನೋಡಿದರೆ ಒಂದಷ್ಟು ಅಂಶಗಳು ಇಷ್ಟವಾಗುತ್ತದೆ.

  ಅದನ್ನು ಬಿಟ್ಟು ಬಿಡಿ ಬಿಡಿಯಾಗಿ ಒಂದೊಂದನ್ನೇ ತೋರಿಸಿಬಿಡಿ ಎನ್ನುವ ಪ್ರೇಕ್ಷಕ ಇಲ್ಲಿ ನಿರಾಶೆಯಿಂದ ನಿರಶನಕ್ಕೆ ನಿಲ್ಲುತ್ತಾನೆ! ನಾಯಕ ಗೌರಿಶಂಕರ್ ಗವ್ ಎನ್ನುವ ಮಧ್ಯರಾತ್ರಿಯಲ್ಲಿ ಮೂಡುವ ಚಂದ್ರನಂತೆ ಕಾಣುತ್ತಾನೆ. ಹೊಸ ಲುಕ್ಕು, ಹೊಸ ಹಾವಭಾವ... ಅಂದರೆ, ತೆಲುಗು-ತಮಿಳು ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡುತ್ತಿರುವ ಯುವಕರಂತೆ ಲವಲಿಯಾಗಿದ್ದಾನೆ ಗೌರಿ!

  ನಾಯಕಿ ಉದಯ ತಾರಾ ನಕ್ಕರೆ ನಾಲ್ಕು ಮುತ್ತು ಉದುರಿದಂತೆ ಅನಿಸುತಿದೆ ಯಾಕೋ ಇಂದು... ರಂಗಾಯಣ ರಘು ಎಂದಿನಂತೇ ರಂಗುರಂಗಾಗಿ ಬಂಗಿ ನೆಡುತ್ತಾರೆ. ರವಿಕಾಳೆ, ಮುನಿ, ಉಮಾಶ್ರೀ ಎಲ್ಲರೂ ಆಗ ಈಗ ಬಂದುಹೋಗುವ ಬಸ್ಸುಗಳಂತೇ. ಬುಲೆಟ್ ಪ್ರಕಾಶ್ ಕಾಮಿಡಿ ಹೆಚ್ಚು ಪ್ರಕಾಶಿಸುವುದಿಲ್ಲ. ಎಸ್.ಎ. ರಾಜ್ ಕುಮಾರ್ ಸಂಗೀತದಲ್ಲಿ ಎರಡು ಹಾಡುಗಳು ಪರವಾಗಿಲ್ಲ. ಹಾಡುಗಳ ಲೊಕೇಷನ್ ಮತ್ತು ಛಾಯಾಗ್ರಹಣದ ಬಗ್ಗೆ

  ಮರುಮಾತಿಲ್ಲ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X