»   » ವಿಮರ್ಶೆ: ಡಿ- ಡೇ, ಥ್ರಿಲ್ ಮಿಸ್ ಮಾಡ್ಕೋ ಬೇಡಿ

ವಿಮರ್ಶೆ: ಡಿ- ಡೇ, ಥ್ರಿಲ್ ಮಿಸ್ ಮಾಡ್ಕೋ ಬೇಡಿ

Posted By:
Subscribe to Filmibeat Kannada

'ಡಿ' ಕಂಪನಿ ಕುರಿತಂತೆ ಹಲವಾರು ಚಿತ್ರ್ರಗಳು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಂದಿದೆ. ಅದರೆ, ನೈಜತೆ ಹತ್ತಿರವಾಗಿದ್ದು ಹಾಗೂ ಯಶಸ್ವಿಯಾಗಿದ್ದು ಕೆಲವೇ ಚಿತ್ರಗಳು ಮಾತ್ರ. ಈ ಸಾಲಿನಲ್ಲಿ ಎತ್ತರಕ್ಕೆ ನಿಲ್ಲಬಲ್ಲ ಚಿತ್ರ ಡಿ-ಡೇ.

ದಾವೂದ್ ಇಬ್ರಾಹಿಂ ಹಾಗೂ RAW ಅಧಿಕಾರಿಗಳ ಜಟಾಪಟಿಯೇ ಈ ಚಿತ್ರದ ಕಥಾವಸ್ತು. ಗ್ಯಾಂಗ್ ಸ್ಟರ್ ಹಿಡಿಯಲು ಹೊರಟ ಭೂಗತ ಏಜೆಂಟ್ ಗಳ ಕಷ್ಟ ಸುಖ ಇಲ್ಲಿ ಅನಾವರಣಗೊಂಡಿದೆ. ಡೆಡ್ ಆರ್ ಅಲೈವ್ ಎಂಬ ಅದೇಶದೊಂದಿಗೆ ಅಗ್ನಿಕುಂಡದಲ್ಲೇ ವಾಸಿವಾಗಿ ನೆಮ್ಮದಿಯ ಆಶಾಕಿರಣ ಹೊರಹಾಕುವ ಸೀಕ್ರೇಟ್ ಏಜೆಂಟ್ ಗಳ ಶ್ರಮ ಅದ್ಭುತವಾಗಿ ಇಲ್ಲಿ ಮೂಡಿ ಬಂದಿದೆ.

ನಿರ್ದೇಶಕ ನಿಖಿಲ್ ಅಡ್ವಾಣಿ ಅವರು ಕಲ್ ಹೋ ನಾ ಹೋ ಚಿತ್ರದ ನಂತರ ಇಂಥ ಥ್ರಿಲ್ಲರ್ ಚಿತ್ರಗಳಲ್ಲೂ ಭಾವನಾತ್ಮಕ, ಸಂಬಂಧಗಳ ಮಹತ್ವ, ಕರ್ತವ್ಯದ ಕರೆ ಎಲ್ಲವೂ ಒಂದು ಸೇರಿಸಿ ಪ್ಯಾಕೇಜ್ ಡೀಲ್ ಮಾಡಿದ್ದಾರೆ.

ಅರ್ಜುನ್ ರಾಮ್ ಪಾಲ್, ರಿಷಿಕಪೂರ್, ಇರ್ಫಾನ್ ಖಾನ್, ನಾಸೀರ್ ರಂಥ ನಟರ ಜೊತೆಗೆ ಹುಮಾ ಖುರೇಶಿ, ಶ್ರುತಿ ಹಾಸನ್, ಸಂದೀಪ್ ಕುಲಕರ್ಣಿ ಅವರ ಪಾತ್ರಕ್ಕೂ ಪ್ರಾಮುಖ್ಯತೆ ನೀಡಿ ಬಿಗಿಯಾಗಿ ಚಿತ್ರವನ್ನು ನಿರೂಪಿಸಿದ್ದಾರೆ.

ದೇಶದ ಗುಪ್ತಚರ ಇಲಾಖೆ RAW (Research and Analysis Wing) ನಂ.1 ವಾಟೆಂಡ್ ಕ್ರಿಮಿನಲ್ ನನ್ನು ಹಿಡಿದು ಕೊಂಡು ಬರಲು ರೂಪಿಸುವ ತಂತ್ರ ಹಾಗೂ ಅದರ ಯಶಸ್ಸಿನ ಕಥೆ ಇಲ್ಲಿ ಉಭಯ ದೇಶಗಳ ಸ್ಥಿತಿಯನ್ನು ಕ್ಲುಪ್ತವಾಗಿ ಎಲ್ಲವನ್ನೂ ಹೇಳಿಬಿಡುತ್ತದೆ. ಚಿತ್ರದ ಕಥೆ ಏನು? ತಾರಾಗಣ ಸೂಕ್ತವಾಗಿದೆ? ಸಣ್ಣ ಎಳೆ ಹೇಗೆ ನಿರೂಪಣೆಯಿಂದ ಜೀವ ಪಡೆದಿದೆ?  ಪ್ರೇಕ್ಷಕರಿಗೆ ಚಿತ್ರ ಏಕೆ ಮೆಚ್ಚುಗೆಯಾಗಿದೆ? ಎಂಬುದರ ಬಗ್ಗೆ ವಿವರ ಮುಂದಿನ ಚಿತ್ರಸರಣಿಯಲ್ಲಿ ಕಾಣಿರಿ.

Rating:
3.5/5

ಚಿತ್ರದ ಕಥೆ ಏನು?

ಕೆಲವು RAW ಏಜೆಂಟ್ ಗಳ ಜೀವನ ಕಥೆ ಆಧಾರಿತ ಚಿತ್ರ..ವಲಿ ಖಾನ್(ಇರ್ಫಾನ್ ಖಾನ್) ಮಾಜಿ ಯೋಧ ರುದ್ರ ಪ್ರತಾಪ್ ಸಿಂಗ್ (ಅರ್ಜುನ್ ರಾಂಪಾಲ್), ಸ್ಫೋಟಕಗಳ ತಜ್ಞೆ ಜೋಯಾ ರೆಹಮಾನ್ (ಹೂಮಾ ಖುರೇಷಿ) ಹಾಗೂ ಮುಂಬೈನ ಚಾಲಾಕಿ ಕಳ್ಳ ಅಸ್ಲಾಂ (ಅಕಾಶ್ ಧೈಯಾ) ಅವರು ಪಾಕಿಸ್ತಾನದೊಳಗೆ ನುಸುಳಿ ಕ್ರಿಮಿನಲ್ ಇಕ್ಬಾಲ್ ಸೇಠ್(ರಿಷಿ ಕಪೂರ್) ಹಿಡಿದು ತರುವಂತೆ ಭಾರತ ಸರ್ಕಾರ ಕಳಿಸುತ್ತದೆ.

RAW ಮುಖ್ಯಸ್ಥ ಅಶ್ವಿನಿ ರಾವ್ (ನಾಸ್ಸರ್) ಆದೇಶದಂತೆ ಸುಮಾರು 9 ವರ್ಷಗಳ ಕರಾಚಿಯಲ್ಲಿ ನೆಲೆಸಿ ಇಕ್ಬಾಲ್ ಸೇಠ್ ಅಲಿಯಾಸ್ ಗೋಲ್ಡ್ ಮನ್ ಮೇಲೆ ವಲಿ ಕಣ್ಣಿಟ್ಟಿರುತ್ತಾನೆ. ಆಪರೇಷನ್ ಗೋಲ್ಡ್ ಮನ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಯುತ್ತದೆ. ಮುಂದೆ ಓದಿ...

ಡಿ ಗ್ಯಾಂಗ್ ಕಥೆ

ಇಕ್ಬಾಲ್ ಸೇಠ್ ತನ್ನ ಮಗನ ಮದುವೆ ಸಂಭ್ರಮದಲ್ಲಿರುತ್ತಾನೆ. ಐಎಸ್ ಐ ಅದೇಶ, ಎಚ್ಚರಿಕೆಯನ್ನು ಮೀರಿ ಮದುವೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಭಾರತದ ಏಜೆಂಟುಗಳು ಅವನ ಮೇಲೆ ದಾಳಿ ನಡೆಸಲು ಮುಂದಾಗುತ್ತಾರೆ.

ಇತ್ತ ಭಾರತದಲ್ಲಿ RAW ಮುಖ್ಯಸ್ಥ ಅಶ್ವಿನಿ ಸ್ಥಾನಕ್ಕೆ ಕುತ್ತು ಬಂದಿರುತ್ತದೆ. ಬಿಗಿ ಭದ್ರತೆ ದಾಟಿ ಹೋಟೆಲ್ ನಿಂದ ಇಕ್ಬಾಲ್ ಹಿಡಿದು ಹೊರಕ್ಕೆ ತರುವಲ್ಲಿ ಭಾರತದ ತಂಡ ಯಶಸ್ವಿಯಾಗುತ್ತದೆ.

ಆದರೆ, ಇಕ್ಬಾಲ್ ತಪ್ಪಿಸಿಕೊಳ್ಳುತ್ತಾನೆ. ಭಾರತದ ಸಂಚು ಪಾಕಿಸ್ತಾನಕ್ಕೆ ತಿಳಿದು ಬಿಡುತ್ತದೆ. ಭಾರತದ ಪ್ರಧಾನಿ ಅವರು ಮೇಡಂ ಆದೇಶದಂತೆ RAW ಮುಖ್ಯಸ್ಥನನ್ನು ಬದಲಾಯಿಸಲು ಸೂಚಿಸುತ್ತಾರೆ. ಮುಂದೆ ಓದಿ...

ಅರ್ಥಪೂರ್ಣ ಕ್ಲೈಮ್ಯಾಕ್ಸ್

ಈ ಮಧ್ಯೆ RAW ತನ್ನ ಏಜೆಂಟ್ ಗಳ ವಿರುದ್ಧವೆ ತಿರುಗಿ ಬೀಳುತ್ತದೆ. ಇತ್ತ ಐಎಸ್ಐ, ದಾವೂದ್ ಗ್ಯಾಂಗ್ ಹಾಗೂ RAW ಮೂರು ಕಡೆಗಳಿಂದ ಸುತ್ತುವರೆದು ಸೀಕ್ರೆಟ್ ಏಜೆಂಟ್ ಗಳ ಉಸಿರುಗಟ್ಟಿಸುತ್ತಾರೆ.

ವಲಿ ತನ್ನ ಕುಟುಂಬವನ್ನು ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಸಂಬಂಧವಿಲ್ಲದೆ ಕೆಲಕಾಲ ಹತ್ತಿರವಾಗಿದ್ದ ವೇಶ್ಯೆ ಸುರೈಯಾ(ಶ್ರುತಿ ಹಾಸನ್) ಸಾವು ರುದ್ರನ ಮನ ಕಲುಕುತ್ತದೆ. ಎಲ್ಲೆಡೆಯಿಂದ ತಿರುಗು ಬಾಣ ಅಪ್ಪಳಿಸುತ್ತಿರುತ್ತದೆ.

ಈ ಸಂದರ್ಭದಲ್ಲಿ ಏಜೆಂಟ್ ಗಳು ತೆಗೆದುಕೊಳ್ಳುವ ನಿರ್ಧಾರವೇನು? ಇಕ್ಬಾಲ್ ನನ್ನು ಸೆರೆ ಹಿಡಿದು 'ಆಪರೇಷನ್ ಗೋಲ್ಡ್ ಮನ್' ಪೂರ್ಣ ಗೊಳಿಸುತ್ತಾರಾ? ಎಂಬುದು ಚಿತ್ರದ ಉಳಿದ ಭಾಗದ ಕುತೂಹಲಕಾರಿ ಅಂಶವಾಗಿದೆ. ಕೊನೆಗೆ ಅರ್ಥಪೂರ್ಣ ಕ್ಲೈಮ್ಯಾಕ್ಸ್ ನೀಡಲಾಗಿದೆ.

ನಟನೆಯೇ ಜೀವಾಳ

'ರಾಜ್ ನೀತಿ' ನಂತರ ಅರ್ಜುನ್ ರಾಂಪಾಲ್ ಅದ್ಭುತ ಅಭಿನಯ ನೀಡಿದ್ದಾರೆ. ಇರ್ಫಾನ್ ಖಾನ್ ಹಾಗೂ ರಾಂಪಾಲ್ ಜುಗಲ್ ಬಂದಿ ಉತ್ತಮವಾಗಿ ಮೂಡಿ ಬಂದಿದೆ. ಇರ್ಫಾನ್ ಖಾನ್ ಕಣ್ಣುಗಳು ಕಥೆಯನ್ನು ಹೇಳಿ ಬಿಡುತ್ತವೆ. ಮಗನನ್ನು ನೋಡಬೇಕು ಎಂಬ ತುಡಿತ, ಕೊನೆಯಲ್ಲಿ ಹುತಾತ್ಮನಾಗುವಾಗ ಪ್ರಜ್ಞೆ ಇಷ್ಟವಾಗುತ್ತದೆ.

ಹುಮಾ ಪಾತ್ರಕ್ಕೆ ಇನ್ನಷ್ಟು ಸ್ಕೋಪ್ ನೀಡಬಹುದಿತ್ತು. ಶ್ರುತಿ ಪಾತ್ರಕ್ಕೂ ಅಷ್ಟೇ. ಶ್ರುತಿ ಪಾತ್ರಕ್ಕೆ ಶೃಂಗಾರ ಹಾವ ಭಾವ, ಕೀಟಲೆ ವರ್ತನೆ ಬೇಕಿತ್ತು ಎನಿಸುತ್ತದೆ. ನಾಸರ್, ರಿಷಿ ಕಪೂರ್, ಶ್ರೀಸ್ವರ(ವಲಿ ಪತ್ನಿ) ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ತಾಂತ್ರಿಕ ವರ್ಗ

ನಿಖಿಲ್ ಅಡ್ವಾಣಿ ಸ್ವತಃ ಎಡಿಟಿಂಗ್ ಟೇಬಲ್ ಮೇಲೆ ಕುಳಿತು ಸಾಕಷ್ಟು ಕಾಲ ವ್ಯರ್ಥ ಮಾಡಿದ್ದು ಫಲ ನೀಡಿದೆ. ಸಂಕಲನ ಚಿತ್ರದ ಕಿಂಗ್, ಇಲ್ಲದಿದ್ದರೆ ಥ್ರಿಲ್ ಕಳೆದುಕೊಳ್ಳುತ್ತಿತ್ತು.ತುಷಾರ್ ಅವರ ಕೆಮೆರಾ ವರ್ಕ್ ಆಗಾಗ ಕೈ ಕೊಟ್ಟಿದ್ದು ಬಿಟ್ಟರೆ ಉತ್ತಮ.

ಶಂಕರ್ ಎಹಸಾನ್ ಲಾಯ್ ಅವರ ಸಂಗೀತ ಚಿತ್ರದ ಓಟಕ್ಕೆ ರಿಲೀಫ್ ನೀಡುತ್ತದೆ. ಆದರೆ, ಥ್ರಿಲ್ಲಿಂಗ್ ಚಿತ್ರದಲ್ಲಿ ಹಾಡುಗಳು ಬೇಕಿತ್ತಾ ಎನಿಸುತ್ತದೆ. ಬಾಲಿವುಡ್ ಫಾರ್ಮೂಲಾ ಇನ್ನೂ ಬದಲಾಗಿಲ್ಲ. ಹಿನ್ನೆಲೆ ಸಂಗೀತ ಇನ್ನಷ್ಟು ರೋಚಕತೆ ಮೂಡಿಸಬೇಕಿತ್ತು.

ಚಿತ್ರ ಏಕೆ ನೋಡಬೇಕು?

ಉತ್ತಮ ನಟನೆ ಹಾಗೂ ನಿರೂಪಣೆ ಹಾಗೂ ಥ್ರಿಲ್ ಗಾಗಿ ಚಿತ್ರ ನೋಡಲಡ್ಡಿಯಿಲ್ಲ. ಅದ್ಭುತವಲ್ಲದಿದ್ದರೂ ಹಾಲಿವುಡ್ ಥ್ರಿಲ್ಲರ್ ಗಳ ಸಾಲಿನಲ್ಲಿ ನಿಲ್ಲಬಲ್ಲ ಚಿತ್ರ ಎನಿಸಿದೆ. ಭೂಗತ ಜಗತ್ತಿನ ನೈಜ ಚಿತ್ರಣ ಹಾಗೂ RAW ಏಜೆಂಟ್ ಗಳ ಕಷ್ಟ ಸುಖಗಳನ್ನು ಸಂಕ್ಷಿಪ್ತವಾಗಿ ತೆರೆದಿಡುತ್ತದೆ. ಕೆಲವು ತಾಂತ್ರಿಕ ದೋಷಗಳನ್ನು ಹೊರತುಪಡೆಸಿದರೆ ಚಿತ್ರ ಪ್ರೇಕ್ಷಕರಿಗೆ ಮುದ ನೀಡುತ್ತದೆ.

ಪ್ರತಿಕ್ರಿಯೆ ಹೇಗಿದೆ?

ಜುಲೈ 19, 2013 ರಂದು ಚಿತ್ರ 1200 ಸ್ಕ್ರೀನ್ ಗಳಲ್ಲಿ ಬಿಡುಗಡೆಗೊಂಡಿತು. 30 ಕೋಟಿ ಬಜೆಟ್ ನಲ್ಲಿ ತಯಾರಾದ ಚಿತ್ರ ತನ್ನ ಅಸಲನ್ನು ಪಡೆದು ಲಾಭದತ್ತ ದಾಪುಗಾಲಿಟ್ಟಿದೆ.

ಬಾಲಿವುಡ್ ಹಂಗಾಮ-ತರಣ್ ಆದರ್ಶ್ 4 ಸ್ಟಾರ್, ಸಿಎನ್ ಎನ್ ಐಬಿಎನ್ ರಾಜೀವ್ ಮಸಂದ್ 3 ಸ್ಟಾರ್, ರೀಡಿಫ್ ನ ಪಲೊಮಾ ಶರ್ಮ ನಟರಿಗೆ ಸ್ಮರಣೀಯ ಚಿತ್ರ ಎಂದರೆ, ಎನ್ ಡಿಟಿವಿ 3 ಸ್ಟಾರ್(5) ನೀಡಿದೆ.

English summary
Nikhil Advani's movie D-Day, that features Arjun Rampal, Irfan Khan Rishi Kapoor in leads, is based on the RAW agents. D-Day is based on the country's intelligence agency RAW (Research and Analysis Wing) and its operations to bring back the most wanted man in India.
 Read D-Day Movie Review.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada