For Quick Alerts
  ALLOW NOTIFICATIONS  
  For Daily Alerts

  ಚಿತ್ರ ವಿಮರ್ಶೆ; ಹೊಸ 'ಸ್ಟೈಲ್'ನಲ್ಲಿ 'ಕಿಂಗ್' ಆದ ಗಣೇಶ್.!

  |

  ಪಟ ಪಟ ಅಂತ ಮಾತನಾಡುತ್ತಾ, ಕಿಲೋಮೀಟರ್ ಗಟ್ಟಲೆ ಡೈಲಾಗ್ ಹೊಡೆಯುತ್ತಾ, ಹುಡುಗಿಯರ ಕಾಲೆಳೆಯುತ್ತಾ, ಹುಡುಗಾಟದ ಹುಡುಗನ ಪಾತ್ರದಲ್ಲಿ ಮಿಂಚ್ತಿದ್ದ 'ಗೋಲ್ಡನ್ ಸ್ಟಾರ್' ಗಣೇಶ್ ರನ್ನ ನೀವೆಲ್ಲಾ ಇದುವರೆಗೂ ಬೆಳ್ಳಿ ಪರದೆ ಮೇಲೆ ನೋಡಿದ್ದೀರಾ....

  ಹೊಚ್ಚ ಹೊಸ ಗಣೇಶ್ ರವರ ಅವತಾರವನ್ನು ನೀವು ತೆರೆ ಮೇಲೆ ನೋಡ್ಬೇಕು ಅಂದುಕೊಂಡಿದ್ರೆ, ಅದರಲ್ಲೂ ಡಬಲ್ ಆಕ್ಟಿಂಗ್ ನಲ್ಲಿ ಗಣೇಶ್ ರನ್ನ ಕಣ್ತುಂಬಿಕೊಳ್ಳಬೇಕು ಅಂತ ಬಯಸಿದ್ರೆ, ತಪ್ಪದೇ 'ಸ್ಟೈಲ್ ಕಿಂಗ್' ಸಿನಿಮಾ ನೋಡಿ..! [ಗಣೇಶ್ 'ಬುಗುರಿ' ಆಟ ನೋಡಿ ವಿಮರ್ಶಕರು ಏನಂದ್ರು?]

  ಬರೀ ಸ್ಟೈಲ್ ನಲ್ಲಿ ಮಾತ್ರ ಅಲ್ಲ, ಸ್ಟಂಟ್ಸ್, ಡ್ಯಾನ್ಸ್, ಡೈಲಾಗ್ಸ್, ಲುಕ್ಸ್ ಎಲ್ಲದರಲ್ಲೂ 'ಕಿಂಗ್' ಆಗಿದ್ದಾರೆ ಗಣೇಶ್. ಅಷ್ಟರಮಟ್ಟಿಗೆ, ಗಣೇಶ್ ಅಭಿಮಾನಿಗಳನ್ನ ರಂಜಿಸುವಲ್ಲಿ 'ಸ್ಟೈಲ್ ಕಿಂಗ್' ಸಿನಿಮಾ ಯಶಸ್ವಿ ಆಗಿದೆ.

  'ಸ್ಟೈಲ್ ಕಿಂಗ್' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  Rating:
  3.5/5
  Star Cast: ಗಣೇಶ್, ರೇಮ್ಯಾ ನಂಬೀಶನ್, ರಂಗಾಯಣ ರಘು, ಸಾಧು ಕೋಕಿಲ, ಪದ್ಮಜಾ ರಾವ್
  Director: PC ಶೇಖರ್

  ಡಬಲ್ ಟ್ರಬಲ್.!

  ಡಬಲ್ ಟ್ರಬಲ್.!

  ಒಬ್ಬ ಕಾರ್ತಿಕ್ (ಗಣೇಶ್) ಇನ್ನೇನು ಪೊಲೀಸ್ ಆಗ್ಬೇಕು. ಅಷ್ಟರಲ್ಲಿ ಇನ್ನೊಬ್ಬ ಕಳ್ಳ ಕಾಶಿ (ಗಣೇಶ್) 5 ಕೋಟಿ ಮೌಲ್ಯದ ಡ್ರಗ್ಸ್ ಕದಿಯುತ್ತಾನೆ. ಇತ್ತ ಪೊಲೀಸ್ ಟ್ರೇನಿಂಗ್ ಮಾಡ್ಬೇಕು ಅಂದ್ರೆ ಕಾರ್ತಿಕ್ ಗೆ 25 ಲಕ್ಷ ಬೇಕು. ಇನ್ನೂ ಇಷ್ಟ ಪಟ್ಟ ಹುಡುಗಿ ಮದುವೆ ಆಗ್ಬೇಕು ಅಂದ್ರೂ 10 ಲಕ್ಷ ಕೊಟ್ಟು, ಒಡವೆ ಬಿಡಿಸಿಕೊಳ್ಳುವ ಜವಾಬ್ದಾರಿ ಕೂಡ ಕಾರ್ತಿಕ್ ಮೇಲಿದೆ.

  ಹಾವು ಏಣಿ ಆಟ

  ಹಾವು ಏಣಿ ಆಟ

  ಸಬ್ ಇನ್ಸ್ ಪೆಕ್ಟರ್ ಆಗಿ ಮದುವೆ ಮಾಡಿಕೊಳ್ಳಲು ಹಣ ಹೊಂದಿಸುವ ಟೆನ್ಷನ್ ನಲ್ಲಿ ಕಾರ್ತಿಕ್ ಇದ್ರೆ, ಕದ್ದ ಮಾಲು ಉಳಿಸಿಕೊಳ್ಳುವ ಒತ್ತಡದಲ್ಲಿ ಕಾಶಿ. ಈ ಮಧ್ಯೆ ನಡೆಯುವ ಕಳ್ಳ-ಪೊಲೀಸ್-ರೌಡಿಗಳ ಹಾವು ಏಣಿ ಆಟವೇ 'ಸ್ಟೈಲ್ ಕಿಂಗ್' ಸಿನಿಮಾ.

  ಗಣೇಶ್ ಡಬಲ್ ಆಕ್ಟಿಂಗ್.!

  ಗಣೇಶ್ ಡಬಲ್ ಆಕ್ಟಿಂಗ್.!

  ಮೊಟ್ಟ ಮೊದಲ ಬಾರಿಗೆ ಡಬಲ್ ಆಕ್ಟಿಂಗ್ ಮಾಡಿರುವ ಗಣೇಶ್ ಉತ್ತಮ ಅಭಿನಯ ನೀಡಿದ್ದಾರೆ. ಕಾರ್ತಿಕ್ ಪಾತ್ರದಲ್ಲಿ ಗಣೇಶ್ ಎಂದಿನಂತೆ ಸರಳ.

  ಕಳ್ಳನಾಗಿ ಗಣೇಶ್.!

  ಕಳ್ಳನಾಗಿ ಗಣೇಶ್.!

  ಇನ್ನೂ ಕಳ್ಳ ಕಾಶಿ ಆಗಿಯೂ ಕಾಣಿಸಿಕೊಂಡಿರುವ ಗಣೇಶ್ ಸೂಪರ್ ಸ್ಟಂಟ್ಸ್ ಮಾಡಿದ್ದಾರೆ. ಅಷ್ಟೇ ಸಲೀಸಾಗಿ ಸ್ಟೈಲಿಶ್ ಸ್ಟೆಪ್ ಹಾಕಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕೇಡಿ ಪಾತ್ರದಲ್ಲಿ ಅವರ ಮ್ಯಾನರಿಸಂ ಸಿಂಪ್ಲಿ ಸೂಪರ್. ಸಿಗರೇಟ್ ಹಚ್ಚುವುದರಿಂದ ಹಿಡಿದು, ಮಾತನಾಡುವವರೆಗೂ ಗಣೇಶ್ ಸ್ಪೆಷಲ್ ಸ್ಟೈಲ್ ಮೇನ್ಟೇನ್ ಮಾಡಿದ್ದಾರೆ.

  ರಮ್ಯಾ ನಂಬೀಸನ್ ನಟನೆ ಹೇಗಿದೆ?

  ರಮ್ಯಾ ನಂಬೀಸನ್ ನಟನೆ ಹೇಗಿದೆ?

  ಮಲೆಯಾಳಂ ಬೆಡಗಿ ರಮ್ಯಾ ನಂಬೀಸನ್ ನಟನೆ ಚೆನ್ನಾಗಿದೆ.

  ರಂಗಾಯಣ ರಘು-ಸಾಧು ಕೋಕಿಲ ಬಂದ್ರೆ ಮಜಾ.!

  ರಂಗಾಯಣ ರಘು-ಸಾಧು ಕೋಕಿಲ ಬಂದ್ರೆ ಮಜಾ.!

  ತೆರೆ ಮೇಲೆ ರಂಗಾಯಣ ರಘು ಹಾಗೂ ಸಾಧು ಕೋಕಿಲ ಕಾಣಿಸಿಕೊಂಡಾಗೆಲ್ಲಾ ಪ್ರೇಕ್ಷಕರು ನಗೆಗಡಲಲ್ಲಿ ತೇಲುತ್ತಾರೆ.

  ಮಂದಗತಿ ಇಲ್ಲ.!

  ಮಂದಗತಿ ಇಲ್ಲ.!

  'ಸ್ಟೈಲ್ ಕಿಂಗ್' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಇದೇ. ಕದ್ದ ಮಾಲು ಇರುವ ಒಂದು ಬ್ಯಾಗ್ ಇಟ್ಕೊಂಡು ಇಡೀ ಚಿತ್ರಕಥೆ ರಚಿಸಿರುವ ನಿರ್ದೇಶಕ ಪಿ.ಸಿ.ಶೇಖರ್, ಅಲ್ಲಲ್ಲಿ ಹೆಚ್ಚು ಟ್ವಿಸ್ಟ್ ಗಳು, ಹಾಸ್ಯ ಪಾತ್ರಗಳನ್ನ ತಂದಿರುವುದರಿಂದ ಪ್ರೇಕ್ಷಕರು ನಿದ್ದೆಗೆ ಜಾರುವುದಿಲ್ಲ.

  ಡಬಲ್ ಮೀನಿಂಗ್

  ಡಬಲ್ ಮೀನಿಂಗ್

  'ಸ್ಟೈಲ್ ಕಿಂಗ್' ಚಿತ್ರದ ಹಾಸ್ಯ ಸನ್ನಿವೇಶಗಳಲ್ಲಿ ಡಬಲ್ ಮೀನಿಂಗ್ ಹೆಚ್ಚು. ಪಡ್ಡೆ ಹುಡುಗರು ಅದನ್ನ ಎಂಜಾಯ್ ಮಾಡುತ್ತಾರೆ. ಆದ್ರೆ, ಫ್ಯಾಮಿಲಿ ಆಡಿಯನ್ಸ್ ಗೆ ಸ್ವಲ್ಪ ಮುಜುಗರ ಆಗಬಹುದೇನೋ..?

  ಸಂಗೀತ ಅಷ್ಟಕಷ್ಟೆ.!

  ಸಂಗೀತ ಅಷ್ಟಕಷ್ಟೆ.!

  ಅರ್ಜುನ್ ಜನ್ಯ ಸಂಗೀತ ಕಮಾಲ್ ಮಾಡಿಲ್ಲ. ಹಾಡುಗಳು ಅಷ್ಟಕಷ್ಟೆ.

  ಟೆಕ್ನಿಕಲಿ ಸಿನಿಮಾ ಹೇಗಿದೆ?

  ಟೆಕ್ನಿಕಲಿ ಸಿನಿಮಾ ಹೇಗಿದೆ?

  ಸಣ್ಣ-ಪುಟ್ಟ ತಪ್ಪುಗಳು ಬಿಟ್ಟರೆ, ಟೆಕ್ನಿಕಲಿ 'ಸ್ಟೈಲ್ ಕಿಂಗ್' ಸಿನಿಮಾ ಚೆನ್ನಾಗಿದೆ. ಹಾಡುಗಳಲ್ಲಿ ಛಾಯಾಗ್ರಹಣ ಬೊಂಬಾಟ್. ಸಂಕಲನ ಚುರುಕಾಗಿದೆ. ಆಕ್ಷನ್ ಎಷ್ಟು ಬೇಕು ಅಷ್ಟಿದೆ. ಅಬ್ಬರ ಇಲ್ಲದೆ, ತಣ್ಣಗೆ ಕೂತು ನೋಡಬಹುದಾದ ಚಿತ್ರ 'ಸ್ಟೈಲ್ ಕಿಂಗ್'. ಈ ಹಿಂದಿನ ಗಣೇಶ್ ಸಿನಿಮಾಗಳಿಗಿಂತ 'ಸ್ಟೈಲ್ ಕಿಂಗ್' ಸ್ವಲ್ಪ ಡಿಫರೆಂಟ್ ಅನ್ನೋದು ಸತ್ಯ.

  ಫೈನಲ್ ಸ್ಟೇಟ್ ಮೆಂಟ್

  ಫೈನಲ್ ಸ್ಟೇಟ್ ಮೆಂಟ್

  ಲಾಜಿಕ್ ಮರೆತು ಕೇವಲ ಮನರಂಜನೆ ಇಷ್ಟ ಪಡುವ ಪ್ರೇಕ್ಷಕರಿಗೆ 'ಸ್ಟೈಲ್ ಕಿಂಗ್' ಸಿನಿಮಾ ಹೇಳಿ ಮಾಡಿಸಿದ್ದು. ಅದರಲ್ಲೂ ಹಾಸ್ಯ ಇಷ್ಟಪಡುವ ಪ್ರೇಕ್ಷಕರಿಗೆ ಈ ಸಿನಿಮಾ ಕಚಗುಳಿ ಇಡುವುದರಲ್ಲಿ ಡೌಟ್ ಬೇಡ. ನೀವು ಗಣೇಶ್ ಅಭಿಮಾನಿ ಆಗಿದ್ದರೆ, ಈಗಲೇ 'ಸ್ಟೈಲ್ ಕಿಂಗ್' ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿ....

  English summary
  Kannada movie Style King Review : Kannada actor Golden Star Ganesh steals the show in double role with never before stylish acting. Director P.C. Shekar has blended comedy quite well in this action packed movie. Actress Remya Nambeesan is pleasing to watch.
  Wednesday, September 26, 2018, 23:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X