Don't Miss!
- Sports
ಇಂಡಿಯನ್ ಓಪನ್ ಆಫ್ ಸರ್ಫಿಂಗ್ 3ನೇ ಆವೃತ್ತಿ: ಮಂಗಳೂರಿನಲ್ಲಿ ಇಂದಿನಿಂದ ಭಾರತದ ಅಗ್ರ ಸರ್ಫರ್ಗಳ ಸ್ಪರ್ಧೆ
- Finance
ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 30 ರೂ. ಏರಿಕೆ: ಕಾರಣವೇನು?
- News
ನಿರೂಪಕಿ ಅಮ್ರೀನ್ ಕೊಂದ ಭಯೋತ್ಪಾದಕರ ಹತ್ಯೆ
- Automobiles
ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್
- Education
Tumkur District Court Recruitment 2022 : 51 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಜಿಯೋದ ಈ ಪ್ಲ್ಯಾನಿನಲ್ಲಿ ಸಿಗುತ್ತೆ ಜಬರ್ದಸ್ತ್ ಡೇಟಾ ಮತ್ತು ವ್ಯಾಲಿಡಿಟಿ!
- Lifestyle
ಬ್ಯೂಟಿ ಟಿಪ್ಸ್: ತ್ವಚೆಗೆ ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Jersey Movie Review: ರೀಮೇಕ್ ಸಿನಿಮಾದಲ್ಲಿ ಮಿಂಚಿದ ಶಾಹಿದ್ ಕಪೂರ್
ಸಿನಿಮಾದಲ್ಲಿ ಒಂದು ದೃಶ್ಯವಿದೆ. ಕ್ರಿಕೆಟ್ ಕ್ರೀಡಾಂಗಣದಿಂದ ಶಾಹಿದ್ ಕಪೂರ್ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತ ತನ್ನ ಮಗನ ಕಡೆಗೆ ನೋಡುತ್ತಾನೆ. ಅಪ್ಪನ ಅದ್ಭುತ ಇನ್ನಿಂಗ್ಸ್ ನೋಡಿ ಖುಷಿಯಾಗಿ ಮಗ ಚಪ್ಪಾಳೆ ತಟ್ಟುತ್ತಿರುತ್ತಾನೆ. ಅವನ ಕಣ್ಣಲ್ಲಿ ಅಪ್ಪನಿಗೆ ಭಿನ್ನವಾದ ಗೌರವ ಭಾವ ಮೂಡಿದೆ. ಶಾಹಿದ್ ಕಪೂರ್ ಭಾವುಕನಾಗಿ ತಲೆ ಎತ್ತಿಕೊಂಡು, ಎದೆ ಉಬ್ಬಿಸಿಕೊಂಡು ಕ್ರೀಡಾಂಗಣದಿಂದ ಪೆವಿಲಿಯನ್ ಕಡೆಗೆ ನಡೆಯುತ್ತಾನೆ.
'ಮಗನಿಗೆ ಅಪ್ಪನೇ ಮೊದಲ ಹೀರೋ' ಎಂಬ ಮಾತಿದೆ. ಆ ಮಾತಿಗೆ ಪೂರ್ಣ ನಿಷ್ಠವಾಗಿ ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಗೌತಮ್ ತಿನ್ನೂರಿ. 2019ರಲ್ಲಿ ಬಿಡುಗಡೆ ಆಗಿದ್ದ ಗೌತಮ್ ತಿನ್ನೂರಿಯೇ ನಿರ್ದೇಶಿಸಿದ್ದ ತೆಲುಗಿನ 'ಜೆರ್ಸಿ' ಸಿನಿಮಾದ ನಿಷ್ಟಾವಂತ ರೀಮೇಕ್ ಆಗಿದೆ ಹಿಂದಿಯ 'ಜೆರ್ಸಿ'. ಆ ಸಿನಿಮಾದಲ್ಲಿ ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ಭಾವನಾತ್ಮಕ ಕತೆಯ ಮುಖ್ಯ ಭಾಗವಾಗಿದ್ದರು, ಇಲ್ಲಿ ಶಾಹಿದ್ ಕಪೂರ್ ಹಾಗೂ ಮೃಣಾಲ್ ಠಾಕೂರ್ ಆ ಪಾತ್ರಗಳನ್ನು ನಿರ್ವಹಿಸಿದ್ದಾರೆ.
KGF Chapter 2 : 'ಕೆಜಿಎಫ್ 2' ಬಗ್ಗೆ ಕನ್ನಡ ನಟರ ಮೌನವೇಕೆ? ಜನರ ಪ್ರಶ್ನೆ!
ಅರ್ಜುನ್ (ಶಾಹಿದ್ ಕಪೂರ್) ಪುತ್ರ ಕೇತನ್ 'ಜೆರ್ಸಿ' ಹೆಸರಿನ ಪುಸ್ತಕದ ಪ್ರತಿಯೊಂದನ್ನು ಇಬ್ಬರು ಓದುಗರಿಗೆ ನೀಡುತ್ತಾನೆ. ಅದು ಅವನ ತಂದೆಯ ಜೀವನದ ಕತೆ. ಆ ಓದುಗರಿಬ್ಬರೂ ಕೇತನ್‌ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ಕೇತನ್ ನೆನಪುಗಳಿಗೆ ಜಾರುತ್ತಾನೆ, ಅಲ್ಲಿಂದ ಸಿನಿಮಾದ ಕತೆ ಶುರುವಾಗುತ್ತದೆ. ಫ್ಲಾಷ್‌ಬ್ಯಾಕ್ ಹೋಗುವುದು ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಕ್ರೀಡಾಂಗಣಕ್ಕೆ, ಅಲ್ಲಿ ಅರ್ಜುನ್ ಅದ್ಭುತ ಬ್ಯಾಟಿಂಗ್ ಮಾಡುತ್ತಾ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಿದ್ದಾನೆ, ಅವನ ಗರ್ಲ್ ಫ್ರೆಂಡ್ ಮೃಣಾಲ್ ಠಾಕೂರ್ ಚಪ್ಪಾಳೆ ಹೊಡೆಯುತ್ತಾ ಹುರಿದುಂಬಿಸುತ್ತಿದ್ದಾಳೆ.


ಕತೆ ಚೆನ್ನಾಗಿದೆ
ಆ ಶಾಟ್ ಕಟ್ ಆಗುತ್ತಿದ್ದಂತೆ ಹತ್ತು ವರ್ಷ ಮುಂದಕ್ಕೆ ಕತೆ ಹೊರಳುತ್ತದೆ. ಮುಂದಿನ ದೃಶ್ಯದಲ್ಲಿ ಅರ್ಜುನ್ ತನ್ನ ಹತ್ತು ವರ್ಷದ ಮಗನ ಪಕ್ಕ ಇದ್ದಾನೆ, ಮಗ ನಿದ್ದೆ ಮಾಡಿದ್ದಾನೆ. ಪತ್ನಿ ಅವರ ಪಕ್ಕದಲ್ಲಿಯೇ ಸೋಫಾ ಮೇಲೆ ಮಲಗಿದ್ದಾಳೆ. ಅವರ ಸುತ್ತಾ ಮಳೆಯ ನೀರನ್ನು ಹಿಡಿಯಲೆಂದು ಕ್ಯಾನ್‌ಗಳನ್ನು ಇಡಲಾಗಿದೆ. ದೇಸಿ ಕ್ರಿಕೆಟ್‌ನ ಸ್ಟಾರ್ ಆಗಿದ್ದವ ಈಗ ವಿದ್ಯಾಳ ಸಂಪಾದನೆಯಲ್ಲಿ ಬದುಕು ಸಾಗಿಸುತ್ತಿದ್ದಾನೆ. ಭ್ರಷ್ಟಾಚಾರದ ಆರೋಪ ಹೊರಿಸಿ ಅವನನ್ನು ಫೂಡ್ ಕಾರ್ಪೊರೇಷನ್‌ನ ಕೆಲಸದಿಂದ ಕಿತ್ತು ಹಾಕಲಾಗಿದೆ.

ತಿರುವು ಸಿಗುವುದು ಆ ದೃಶ್ಯದಿಂದ
ಅರ್ಜುನ್ ಕ್ರಿಕೆಟ್‌ನಿಂದಲೂ ದೂರಾಗಿಬಿಟ್ಟಿದ್ದಾನೆ. ಆದರೆ ಅವನ ಕೋಚ್ ಕಿಟ್ಟು ಜೊತೆ ಸ್ನೇಹ ಇನ್ನೂ ಹಾಗೆಯೇ ಇದೆ. ಅರ್ಜುನ್‌ಗೆ ಕ್ರಿಕೆಟ್ ಕೋಚರ್ ಆಗಿ ಕೆಲಸ ಕೊಡಿಸುವ ಯತ್ನದಲ್ಲಿ ಕಿಟ್ಟು ಇದ್ದಾರೆ. ಹೀಗಿದ್ದಾಗ ಒಮ್ಮೆ ಅರ್ಜುನ್ ಪುತ್ರ ತನ್ನ ಹುಟ್ಟುಹಬ್ಬಕ್ಕೆ ಜೆರ್ಸಿ ಒಂದನ್ನು ಉಡುಗೊರೆಯಾಗಿ ಕೊಡುವಂತೆ ಕೇಳುತ್ತಾನೆ. ಅಲ್ಲಿಂದ ಅರ್ಜುನ್ ದಿಕ್ಕು ಬದಲಾಗುತ್ತದೆ. ಇಡೀಯ ಪ್ರಪಂಚ ಆತನನ್ನು ಸೋತವ ಎಂದು ಒಪ್ಪಿಕೊಂಡಿರುತ್ತದೆ, ಆದರೆ ತನ್ನ ಮಗನ ಕಣ್ಣಲ್ಲಿ ಹೀರೋ ಆಗಿ ಉಳಿಯಲು ಅವನು ಹೋರಾಟ ಆರಂಭಿಸುತ್ತಾನೆ.

ನಿರ್ದೇಶನ ಹೇಗಿದೆ?
ರೀಮೇಕ್ ಸಿನಿಮಾ ಮಾಡುವಾಗ ಮೂಲ ಸಿನಿಮಾದಲ್ಲಿರುವ ಭಾವನಾತ್ಮಕ ಅಂಶವನ್ನು, ಆ ಸಿನಿಮಾದ ಆರ್ದ್ರತೆಯನ್ನು ಹಾಗೆಯೇ ಉಳಿಸಿಕೊಳ್ಳುವುದು ದೊಡ್ಡ ಸವಾಲು. ಆದರೆ ಇಲ್ಲಿ ಮೂಲ ಸಿನಿಮಾದ ಭಾವನಾತ್ಮಕ ಅಂಶವನ್ನು ಹಾಗೆಯೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ ನಿರ್ದೇಶಕ ಗೌತಮ್. ಮುಖ್ಯ ಪಾತ್ರದ ಜೊತೆಗೆ ಪ್ರೇಕ್ಷಕ ತನ್ನನ್ನು ತಾನು ಕನೆಕ್ಟ್ ಮಾಡಿಕೊಳ್ಳುವಂತೆ ನಿರ್ದೇಶಕ ಮಾಡಿದ್ದಾರೆ. ನಿಧಾನಕ್ಕೆ ಆವರಿಸಿಕೊಳ್ಳುವ ಕತೆಯನ್ನು ಅದೇ ಸರಳತೆಯಿಂದ ಗೌತಮ್ ಹೇಳಿದ್ದಾರೆ. ಸಿನಿಮಾದ ನಾಯಕ ಆದರ್ಶವಲ್ಲ ಆದರೆ ಜೀವನ ದೊಡ್ಡದಾಗಿರಬೇಕು, ಉದ್ದವಾಗಿ ಅಲ್ಲ ಎಂಬ ಸಂದೇಶ ನೀಡುವ ವ್ಯಕ್ತಿ. ಸಿನಿಮಾದಲ್ಲಿನ ಕ್ರಿಕೆಟ್ ದೃಶ್ಯಗಳು ಸಹ ಆಸಕ್ತಿಕರವಾಗಿದೆ. ನನ್ನ ಪಾಲಿಗೆ ಈ ಸಿನಿಮಾ ವಿಜಯೋತ್ಸವದ ಕತೆ ಅಲ್ಲ ಬದಲಿಗೆ ಅಪ್ಪ-ಮಗನ ಸಂಬಂಧದ ಕತೆ. ಆದರೆ ಸಿನಿಮಾದ ಕೊರತೆಯೆಂದರೆ ಇಂಟರ್ವೆಲ್‌ಗೆ ಮುನ್ನ ಸಿನಿಮಾ ತುಸು ಎಳೆದಂತೆ ಭಾಸವಾಗುತ್ತದೆ.

ನಟರ ಪ್ರದರ್ಶನ ಹೇಗಿದೆ?
ಮೂಲ ಸಿನಿಮಾದಲ್ಲಿ ನಾನಿ ಹಾಗೂ ಶ್ರದ್ಧಾ ಇಬ್ಬರೂ ಅದ್ಭುತವಾಗಿ ನಟಿಸಿದ್ದರು. ಶಾಹಿದ್ ಸಹ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಆದರೆ ಎಲ್ಲೂ ನಾನಿಯನ್ನು ಅವರು ಕಾಪಿ ಮಾಡಿದ್ದಾರೆ ಎನಿಸುವುದಿಲ್ಲ. ನಾನಿಯ ಪ್ರಭಾವಕ್ಕೆ ಸಿಲುಕದೆ, ಒಳ್ಳೆಯ ನಟನಾಗಿ ಹಲವು ಹೊಸ ಅಂಶಗಳನ್ನು ಅವರು ತಮ್ಮ ಪಾತ್ರದೊಳಕ್ಕೆ ತುಂಬಿದ್ದಾರೆ. ಪ್ಲೇ ಬಾಯ್ ಮಾದರಿಯ ಕ್ರಿಕೆಟರ್‌ನಿಂದ ಹಿಡಿದು, ದಯನೀಯ ತಂದೆಯ ಪಾತ್ರದವರೆಗೂ ತಮ್ಮನ್ನು ತಾವು ಪಾತ್ರಕ್ಕೆ ಅರ್ಪಿಸಿಕೊಂಡಿದ್ದಾರೆ ಶಾಹಿದ್ ಕಪೂರ್.

ಶಾಹಿದ್ ಕಪೂರ್ ತಂದೆಯೂ ಚೆನ್ನಾಗಿ ನಟಿಸಿದ್ದಾರೆ
ಮೃಣಾಲ್ ಠಾಕೂರ್, ಶ್ರದ್ಧಾ ಶ್ರೀನಾಥ್ ನಟಿಸಿದ್ದ ಪಾತ್ರದಲ್ಲಿ ನಟಿಸಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸುಲಭವಲ್ಲದ, ಸಾಕಷ್ಟು ಭಾವನಾತ್ಮಕ ದೃಶ್ಯಗಳು ಇರುವ ಕತೆಯಲ್ಲಿ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ ನಟಿ. ಕೋಚ್ ಪಾತ್ರದಲ್ಲಿ ಪಂಕಜ್ ಕಪೂರ್ ಈ ಸಿನಿಮಾ ಮೂಲಕ ತಾವು ಅದ್ಭುತ ನಟನೆಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಶಾಹಿದ್ ಕಪೂರ್ ಸಿನಿಮಾದ ಹೃದಯವಾದರೆ, ನಿಜ ಜೀವನದಲ್ಲಿ ಶಾಹಿದ್ ತಂದೆಯಾಗಿರುವ ಪಂಕಜ್ ಕಪೂರ್ ಸಿನಿಮಾದ ಬೆನ್ನೆಲುಬು. ಗೀಕಿತಾ ಮಹೇಂದ್ರ, ಜೆಸ್ಲಿನ್ ಶೇರ್ಗಿಲ್ ಮತ್ತು ಪ್ರಿತ್ ಕಮಾನಿ ಅವರುಗಳೆಲ್ಲ ಚೆನ್ನಾಗಿ ನಟಿಸಿದ್ದಾರೆ.

ತಾಂತ್ರಿಕ ಅಂಶಗಳು ಹೇಗಿವೆ?
ಸಿನಿಮಾಟೊಗ್ರಾಫರ್ ಅನಿಲ್ ಮೆಹ್ತಾ, ಸಿನಿಮಾದಲ್ಲಿ ಕೆಲವು ಅತ್ಯುತ್ತಮ ದೃಶ್ಯಗಳನ್ನು ನೀಡಿದ್ದಾರೆ. ಕ್ರಿಕೆಟ್ ಆಟದ ರೋಚಕ ಕ್ಷಣಗಳು, ತಂದೆ-ಮಗನ-ಪತ್ನಿಯ ನಡುವಿನ ಭಾವುಕ ಕ್ಷಣಗಳು ಎಲ್ಲವನ್ನೂ ಚೆನ್ನಾಗಿ ಸೆರೆಹಿಡಿದಿದ್ದಾರೆ. ಎಡಿಟರ್ ನವೀನ್ ಕೆಲಸವೂ ಸಿನಿಮಾದ ಧನಾತ್ಮಕ ಅಂಶಗಳು. ಸಿನಿಮಾದ ಕೆಲವು ಹಾಡುಗಳು ನೆನಪುಳಿಯುವಂತಿವೆ. ಸಾಚೆಟ್ ಟಂಡನ್ ನೀಡಿರುವ ಹಿನ್ನೆಲೆ ಸಂಗೀತವೂ ಚೆನ್ನಾಗಿದೆ.