»   » 'ದೇವರ ನಾಡಿಗೆ' ವಿಮರ್ಶಕರು ಜೈಕಾರ ಹಾಕಿದ್ರಾ?

'ದೇವರ ನಾಡಿಗೆ' ವಿಮರ್ಶಕರು ಜೈಕಾರ ಹಾಕಿದ್ರಾ?

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಪುಟ್ಟಕ್ಕನ ಹೈವೆ' ಸಿನಿಮಾ ಮಾಡಿದ್ದ ನಿರ್ದೇಶಕ ಬಿ.ಸುರೇಶ ಅವರು 'ದೇವರ ನಾಡಲ್ಲಿ' ಎಂಬ ವಿಭಿನ್ನ ಸಿನಿಮಾ ಮಾಡಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

  ಇನ್ನು 'ಪುಟ್ಟಕ್ಕನ ಹೈವೆ' ಸಿನಿಮಾದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುವ ಸ್ಥಿತಿಯ ಬಗ್ಗೆ ಚರ್ಚಿಸಿದರೆ, 'ದೇವರ ನಾಡಲ್ಲಿ' ಕರಾವಳಿಯ ಸಮಸ್ಯೆ ಇಟ್ಟುಕೊಂಡು 'ಕೋಮುವಾದ'ದ ಬಗ್ಗೆ ಚರ್ಚಿಸಿದ್ದಾರೆ.['ದೇವರ ನಾಡಲ್ಲಿ' ಒಂದು ರೌಂಡ್ ಹಾಕಿ ಬರಲು ನೀವು ರೆಡಿನಾ? ]

  ಸಮಾಜದಲ್ಲಿ ಅಹಿತಕರ ಘಟನೆಗಳು ನಡೆದಾಗ ಅದಕ್ಕೆ ಏನೆಲ್ಲಾ ಬಣ್ಣ ಹಚ್ಚಿ ಪ್ರಚಾರ ಮಾಡುತ್ತಾರೆ ಎಂಬುದನ್ನು ನಿರ್ದೇಶಕ ಬಿ ಸುರೇಶ್ ಅವರು ತಮ್ಮ 'ದೇವರ ನಾಡಲ್ಲಿ' ಸಿನಿಮಾದ ಮೂಲಕ ಪ್ರೇಕ್ಷಕರಿಗೆ ತೋರಿಸಿಕೊಟ್ಟಿದ್ದಾರೆ.

  ಬಹುಭಾಷಾ ನಟ ಪ್ರಕಾಶ್ ರೈ, ಅಚ್ಯುತ್ ಕುಮಾರ್, ಸಿಹಿ ಕಹಿ ಚಂದ್ರು ಹಾಗೂ ಹೊಸಬರಾದ ನಟಿ ದಿಶಾ ಮತ್ತು ನಟ ಮನು ಹೆಗಡೆ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ದೇವರ ನಾಡಲ್ಲಿ' ಫೆಬ್ರವರಿ 5 ರಂದು ಇಡೀ ಕರ್ನಾಟಕದಾದ್ಯಂತ ತೆರೆ ಕಂಡಿದೆ.[50ರ ಹರೆಯದಲ್ಲಿ ಗಂಡು ಮಗುವಿಗೆ ತಂದೆಯಾದ ಪ್ರಕಾಶ್ ರೈ]

  ನಿರ್ದೇಶಕ ಬಿ.ಸುರೇಶ್ ಆಕ್ಷನ್-ಕಟ್ ಹೇಳಿರುವ 'ದೇವರ ನಾಡಲ್ಲಿ' ಚಿತ್ರ ಖ್ಯಾತ ವಿಮರ್ಶಕರಿಂದ ವಿಭಿನ್ನ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ವಿಮರ್ಶೆಗಳ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  'ದಕ್ಕಿದಷ್ಟು ಕಾಡುವ ದೇವರ ನಾಡು' - ವಿಜಯ ಕರ್ನಾಟಕ

  ಅದು ಸೌಹಾರ್ದತೆಯ ಶಿಕ್ಷಣ ಪಠಿಸುವ ಕಾಲೇಜು. ಕೈಗಾರಿಕಾ ಮಂತ್ರಿಗಳು ಅಲ್ಲಿಗೆ ಆಗಮಿಸುವ ಮುನ್ನವೇ ಕಾಲೇಜಿನ ಕೊಠಡಿಯಲ್ಲಿ ಬಾಂಬ್ ಸಿಡಿಯುತ್ತದೆ. ಈ ಬಾಂಬ್ ಹಾಕಿದವರು ಯಾರು ಅನ್ನುವ ತನಿಖೆಯನ್ನು ಆರಂಭಿಸುತ್ತಾರೆ ಪೊಲೀಸ್ ಅಧಿಕಾರಿಗಳು. ಒಬ್ಬೊಬ್ಬರದ್ದು ಒಂದೊಂದು ಲೆಕ್ಕಾಚಾರ. ಬಹುಸಂಖ್ಯಾತರದ್ದು ಅಲ್ಪಸಂಖ್ಯಾತ ಕೋಮಿನ ಮೇಲೆ ಅನುಮಾನ. ತಮ್ಮ ಕೈಗಾರಿಕಾ ನೀತಿಯ ವಿರುದ್ಧ ಹೋರಾಟ ಮಾಡುತ್ತಿರುವ ಚಳವಳಿಗಾರರೇ ಈ ಕೃತ್ಯ ಮಾಡಿದ್ದಾರೆ ಅನ್ನುವುದು ಕೈಗಾರಿಕಾ ಮಂತ್ರಿಯ ಗುಮಾನಿ. ಆದರೆ, ಬಾಂಬ್ ಸಿಡಿದದ್ದು ಮತ್ತೇನೋ ಕಾರಣಕ್ಕೆ. ಸತ್ಯ ಗೊತ್ತಿದ್ದವರದ್ದು ತಟಸ್ಥ ಧೋರಣೆ. ಇದನ್ನು ಅನೇಕ ರೂಪಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. - ಶರಣು ಹುಲ್ಲೂರು.

  'ಸಿಕ್ಕುಗಳ ಗಮನಾರ್ಹ ಬಂಧ' - ಪ್ರಜಾವಾಣಿ

  ಕಡಲ ತಡಿಯ ಹೊನ್ನೂರಿನ ಕಿನಾರೆ ಕಾಲೇಜಿನಲ್ಲಿ ಬಾಂಬ್ ಸ್ಫೋಟವಾಗುವ ಮೂಲಕ ದೇವರ ನಾಡಿನಲ್ಲಿ ತಲ್ಲಣ ಆರಂಭ. ಈ ಬಾಂಬ್ ಇಟ್ಟವರು ಯಾರು ಎಂಬುದು ಅವರವರ ಕಲ್ಪನೆಗೆ ತಕ್ಕಂತೆ ನಿಲುಕುತ್ತದೆ. ಅಮಾಯಕರಿಗೆ ಸಿಗುವುದು ಬೂಟಿನ ಏಟು. ಧರ್ಮ, ರಾಜಕಾರಣ, ಎಸ್‌ಇಝೆಡ್ ನಂಟಿನ ಸುಳಿಯೂ ಇಲ್ಲುಂಟು. ಭಟ್ಟ, ಶೆಟ್ಟಿ, ಮ್ಯಾಡಿಯ ಸ್ನೇಹದ ಬೆಸುಗೆ ಇದೆ. ಒಂದೇ ಧರ್ಮದ, ಆದರೆ ಜಾತಿಯ ತಾರತಮ್ಯ ಎದುರಿಸಬೇಕಾದ ಪ್ರೇಮಿಗಳ ಕಥೆ-ವ್ಯಥೆಯೂ ಪ್ರಮುಖ ಎಳೆ. ಈ ಪ್ರೇಮ ಅನ್ಯಧರ್ಮೀಯ ಸ್ನೇಹಿತರನ್ನು ಹೇಗೆ ಆಪತ್ತಿಗೆ ಸಿಕ್ಕಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ ನಿರ್ದೇಶಕರು. - ಡಿ.ಎಂ ಕುರ್ಕೆ ಪ್ರಶಾಂತ್.

  'ಬಾವುಟಗಳ ಊರಲ್ಲಿ ರಾಜಕೀಯದ ಆವುಟ' - ಉದಯವಾಣಿ

  ಬಿ. ಸುರೇಶ್ ಅವರ ಕಳಕಳಿ ಸ್ಪಷ್ಟವಾಗಿದೆ. ದೇವರ ನಾಡಲ್ಲಿ ನಡೆಯುತ್ತಿರುವ ದೈವಿಕವಲ್ಲದ ಘಟನೆಗಳತ್ತ ಅವರ ಕಾಳಜಿಯಿದೆ. ಒಂದು ನಾಡನ್ನು ಹೇಗೆ ಒಬ್ಬೊಬ್ಬರೂ ತಮಗಿಷ್ಟ ಬಂದ ಹಾಗೆ ಪಳಗಿಸುತ್ತಾ ಹೋಗುತ್ತಾರೆ ಮತ್ತು ಪ್ರಜಾಪ್ರಭುತ್ವ ಹೇಗೆ ಕ್ರಮೇಣ ನಮ್ಮ ಹಿಡಿತದಿಂದ ತಪ್ಪಿ ಹೋಗುತ್ತಿದೆ ಅನ್ನುವುದು ಚಿತ್ರದಲ್ಲಿ ಢಾಳಾಗಿ ಕಾಣಿಸುತ್ತದೆ. ಧರ್ಮನಿರಪೇಕ್ಷತೆ ಅನ್ನುವುದು ಕೂಡ ಒಂದು ಆಯುಧವಾಗಬಲ್ಲದು ಎಂಬುದನ್ನೂ ಚಿತ್ರ ಪಿಸುಮಾತಲ್ಲಿ ಹೇಳುತ್ತದೆ. ಹೀಗಾಗಿ ಚಿತ್ರದ ಆಶಯ ಗಮನಾರ್ಹವಾಗಿದೆ. - ಜೋಗಿ.

  'ದೇವರ ನಾಡಿನ ಮೌನ ಗಂಟೆ' - ಕನ್ನಡಪ್ರಭ

  ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಈ ಸಿನಿಮಾ ಎಲ್ಲವನ್ನೂ ಸೂಕ್ಷ್ಮವಾಗಿ ಹೇಳುತ್ತಲೇ ಹೋಗುತ್ತದೆ. ಒಮ್ಮೆ ರಾಜಕಾರಣ ಬೆತ್ತಲಾಗುತ್ತದೆ. ಮತ್ತೊಮ್ಮೆ ಕಾರ್ಪೋರೇಟ್ ಜಗತ್ತಿನ ಅಸಲಿ ಮುಖವಾಡ ಕಳಚುತ್ತದೆ. ಧರ್ಮ ಮತ್ತು ಸಂಸ್ಕೃತಿ ರಕ್ಷಕರ ಬಣ್ಣ ಬಯಲಾಗುತ್ತದೆ. ಪೊಲೀಸ್ ವ್ಯವಸ್ಥೆ ಹಾದಿ ತಪ್ಪುತ್ತದೆ. ಅಭಿವೃದ್ಧಿಯ ಹಿಂದಿನ ಸಂಚು ತೆರೆದುಕೊಳ್ಳುತ್ತದೆ. ಅಮಾಯಕರು ಶಿಕ್ಷೆಗೆ ಗುರಿಯಾಗುತ್ತಾರೆ. ಪೂರ್ವಗ್ರಹದ ಮನಸ್ಸುಗಳಿಗೆ ಕನ್ನಡಿ ಹಿಡಿಯುತ್ತದೆ. ಇದರ ನಡುವೆ ಮಾಧ್ಯಮದ ಜಗತ್ತನ್ನೂ ಮುಟ್ಟಿ ನೋಡಿಕೊಳ್ಳುವಂತೆ ಎಚ್ಚರಿಸುತ್ತದೆ. ಹಾಗಂತ ಈ ಎಲ್ಲಾ ಅಂಶಗಳು ಇದುವರೆಗೂ ಯಾವ ಚಿತ್ರಗಳಲ್ಲೂ ಬಂದಿಲ್ಲವೆ ಎಂದರೆ ಬಂದಿರಬಹುದು, ಅದೂ ಸಿನಿಮಾ ಆಗಿ. ಈ ಕಾರಣಕ್ಕೆ 'ದೇವರ ನಾಡಲ್ಲಿ' ಚಿತ್ರ ಚರ್ಚಿಸುವ ವಸ್ತು ಮತ್ತು ಅದು ಎತ್ತುವ ಪ್ರಶ್ನೆಗಳು ಸಾರ್ವಕಾಲಿಕ ಎನ್ನುವಷ್ಟರ ಮಟ್ಟಿಗೆ ನಿರ್ದೇಶಕರು ಈ ಚಿತ್ರದ ಕಥೆಯನ್ನು ಕಟ್ಟಿ ಕೊಡುತ್ತಾರೆ. -ಆರ್ ಕೇಶವಮೂರ್ತಿ.

  English summary
  Kannada Movie 'Devara Naadalli' Critics Review. Actor Prakash Rai, Actor Achyuth, Actor Sihi Kahi Chandru Starrer 'Devara Naadalli' has received mixed response from the critics. here is the collection of reviews by Top News Papers of Karnataka. The movie is directed by B Suresha.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more