For Quick Alerts
ALLOW NOTIFICATIONS  
For Daily Alerts

  ದುನಿಯಾ ಸೂರಿ 'ಕೆಂಡಸಂಪಿಗೆ'ಗೆ ಸಿಕ್ತಾ ವಿಮರ್ಶಕರ ಜೈಕಾರ?

  By Harshitha
  |

  'ಕಡ್ಡಿಪುಡಿ' ಚಿತ್ರದ ನಂತರ ದುನಿಯಾ ಸೂರಿ ನಿರ್ದೇಶನದ ಸಿನಿಮಾ 'ಕೆಂಡಸಂಪಿಗೆ'. ಇದೇ ಚಿತ್ರದ ಮೂಲಕ ವಿಕ್ಕಿ, ಮಾನ್ವಿತಾ ಹರೀಶ್ ಎಂಬ ಇಬ್ಬರು ಪ್ರತಿಭೆಗಳನ್ನ ದುನಿಯಾ ಸೂರಿ ಪರಿಚಯ ಮಾಡಿದ್ದಾರೆ.

  'ಕೆಂಡಸಂಪಿಗೆ' ಅಂತ ಟೈಟಲ್ ಇಟ್ಟ ಮಾತ್ರಕ್ಕೆ ದುನಿಯಾ ಸೂರಿ ಇಲ್ಲಿ ಪ್ರೇಮ ಕಥೆಯನ್ನ ಮಾತ್ರ ಹೇಳಿಲ್ಲ. ಪ್ರೇಮ್ ಕಹಾನಿಯ ಜೊತೆ ಜೊತೆಗೆ ಪೊಲೀಸ್ ಇಲಾಖೆಯ ಪಾತಕತನದ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

  ಅಪ್ಪಟ ಕ್ರೈಂ ಥ್ರಿಲ್ಲರ್ ಚಿತ್ರವಾಗಿರುವ 'ಕೆಂಡಸಂಪಿಗೆ'ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ದುನಿಯಾ ಸೂರಿಯ ಈ ಹೊಸ ಪ್ರಯತ್ನದ ಬಗ್ಗೆ ವಿಮರ್ಶಕರು ಏನು ಹೇಳ್ತಾರೆ?

  'ಕೆಂಡಸಂಪಿಗೆ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ.....

  ಕೆಂಡಸಂಪಿಗೆ: ಕ್ಲಾಸಿಕಲ್ ಕೆಂಡಸಂಪಿಗೆ - ವಿಜಯ ಕರ್ನಾಟಕ

  ರಕ್ತಸಿಕ್ತ ಕ್ರೈಂ ಸ್ಟೋರಿಯನ್ನು ಹಸಿಬಿಸಿಯಾಗಿ ತೋರಿಸಿ ಯಶಸ್ಸಿನ ಕಿರೀಟವನ್ನು ಧರಿಸಿದ್ದ ದುನಿಯಾ ಸೂರಿ ಈಗ ಮತ್ತೆ ಕ್ರೈಂ ಕತೆಯನ್ನು ಸಿನಿಮಾ ಮಾಡಿದ್ದಾರೆ. ಆದರೆ, ಭೂಗತ ಜಗತ್ತಿನ ಕತೆಯಲ್ಲ, ಪೋಲಿಸ್ ಇಲಾಖೆಯಲ್ಲಿರುವ ಪಾತಕತನದ ಕತೆ. ಅಲ್ಲಿ ಮಚ್ಚು ಲಾಂಗು ಇಲ್ಲ. ಆದರೆ, ಕ್ರಿಮಿನಲ್ ಮೈಂಡ್‌ನ ಪೋಲಿಸರ ಕ್ರೌರ್ಯ ಇದೆ. ಪ್ರೀತಿಯ ಎಳೆಯೊಂದಿಗೆ ಪೋಲಿಸ್ ಇಲಾಖೆಯಲ್ಲಿರುವ ರೌಡಿಗಳನ್ನು ಪರಿಚಯಿಸುವ ಕತೆಯನ್ನು 'ಕೆಂಡಸಂಪಿಗೆ' ಅತ್ಯಂತ ಸಹಜವಾಗಿ ತೋರಿಸಿದ್ದಾರೆ ನಿರ್ದೇಶಕ ಸೂರಿ. ಕೆಂಡದಂಥ ಕ್ರೌರ್ಯ, ಸಂಪಿಗೆಯಂಥ ಪ್ರೀತಿ ಚಿತ್ರದಲ್ಲಿದೆ. - ಪದ್ಮ ಶಿವಮೊಗ್ಗ

  ಕೆಂಡದಂಥ ಪ್ರೀತಿ, ಸೂರಿ ರೀತಿ - ಉದಯವಾಣಿ

  ಬೆಳಿಗ್ಗೆ ಮನೆಯಿಂದ ಹೊರಡುವಾಗ ಆತ ಫುಲ್ ಕ್ಲೀನ್. ದಾರಿ ಮಧ್ಯದಲ್ಲಿ ಡ್ರಗ್ಸ್ ಕೇಸಿನಲ್ಲಿ ಫಿಟ್ ಆಗುತ್ತಾನೆ. ಮಧ್ಯಾಹ್ನದ ಹೊತ್ತಿಗೆ ಪೊಲೀಸ್‌ ಅಧಿಕಾರಿಯನ್ನು ಕೊಂದ ಆರೋಪ ಹೊರುತ್ತಾನೆ. ರಾತ್ರಿ ಹೊತ್ತಿಗೆ ಹುಡುಗಿಯ ಕಿಡ್ನಾಪ್ ಕೇಸ್‌ ಸಹ ಸೇರಿಕೊಳ್ಳುತ್ತದೆ. ಒಬ್ಬ ಸಾಮಾನ್ಯ ಹುಡುಗ ಹೀಗೆ ರಾತ್ರೋರಾತ್ರಿ ಕ್ರಿಮಿನಲ್‌ ಆಗಿಬಿಡುತ್ತಾನೆ. ಒಂದು ಕಡೆ ಪೊಲೀಸರೇ ಅವನು ಮತ್ತು ಅವನ ಸಂಗಾತಿಯನ್ನು ಎನ್‌ಕೌಂಟರ್‌ ಮಾಡುವುದಕ್ಕೆ ಪ್ರಯತ್ನಿಸಿದರೆ, ಇನ್ನೊಂದು ಕಡೆ ಪೊಲೀಸರೇ ಅವರಿಬ್ಬರನ್ನು ರಕ್ಷಿಸುವುದಕ್ಕೆ ಪ್ರಯತ್ನಿಸುತ್ತಾರೆ. ಪೊಲಿಸರು ರಕ್ಷಕರಾಗುತ್ತಾರೋ, ರಕ್ಕಸರಾಗುತ್ತಾರೋ? ಇಷ್ಟು ಸಾಕು ಕುತೂಹಲ ಕೆರಳಿಸುವುದಕ್ಕೆ. ಒಂದು ಸಾಧಾರಣ ಲವ್‌ಸ್ಟೋರಿಗೆ ಅನೇಕ ಟ್ವಿಸ್ಟುಗಳನ್ನು ಕೊಟ್ಟು ನಿರ್ದೇಶಕ ಸೂರಿ ಹೊಸ ಪ್ರಯತ್ನವೊಂದನ್ನು ಮಾಡುವುದಕ್ಕೆ ಹೊರಟಿದ್ದಾರೆ. - ಚೇತನ್ ನಾಡಿಗೇರ್

  ಬೂದಿ ಮುಚ್ಚಿದ ಕೆಂಡ : ಕೆಂಡವಿದೇಕೋ, ಸಂಪಿಗೆ ಇದೇಕೋ : ಕನ್ನಡಪ್ರಭ

  ಮುಗ್ಧ ಪ್ರೇಮ, ಅದಕ್ಕೆ ತಡೆಯಾಗುವ ವರ್ಗ ತಾರತಮ್ಯ ಮತ್ತು ಭ್ರಷ್ಟ ಅಧಿಕಾರಶಾಹಿ ಭಾರತೀಯ ಚಿತ್ರರಂಗದ ಅತಿ ನೆಚ್ಚಿನ ಕಥಾವಸ್ತು. ಮೂರನ್ನು ಬೆಸೆದು ಥ್ರಿಲ್ಲರ್ ರೋಡ್ ಸಿನೆಮಾ ನೀಡುವಲ್ಲಿ ಸೂರಿ ಯಶಸ್ಸು ಕಂಡಿದ್ದರೂ, ಈ ವೇಗದ-ಉಸಿರು ಬಿಗಿ ಹಿಡಿದ ನಿರೂಪಣೆಯಲ್ಲಿ ರೋಡ್ ಸಿನೆಮಾಗಳಲ್ಲಿ ಅಥವಾ ಯಾವುದೇ ಸಿನೆಮಾಗಳಲ್ಲಿ ಅಗತ್ಯವಾದ ಆ 'ಮೌನ' ಬಲಿಯಾಗುತ್ತದೆ. ಭ್ರಷ್ಟ ಪೊಲೀಸರೆಂದರೆ ಕೇವಲ ಕೆಟ್ಟ ಮಾತುಗಳಲ್ಲಿ, ಕನ್ನಡದಲ್ಲಿ ಬೈದುಕೊಂಡು, ಕಿರುಚಾಡುವವರೇ ಎಂದು ಸಾಮಾನ್ಯವಾಗಿ ಚಿತ್ರಿಸಲ್ಪಡುವ ಸಂಪ್ರದಾಯವನ್ನು ಮುರಿದಿರುವ ಸೂರಿ ನಯ ನಾಜೂಕಿನ, ಇಂಗ್ಲಿಶ್ ಮಾತನಾಡುವ ಕ್ರೂರಿ ಡಿಸಿಪಿ (ಪ್ರಕಾಶ್ ಬೆಳವಾಡಿ) ಪಾತ್ರವನ್ನು ಚಿತ್ರಿಸುತ್ತಾ ಇಷ್ಟವಾದರೆ, ಪ್ರೇಮದ ವಿಷಯಕ್ಕೆ ಬಂದಾಗ ಅದೇ ಸಾಂಪ್ರದಾಯಕ ಪಾತ್ರಗಳಿಗೆ ಜೋತು ಬಿದ್ದಿದ್ದಾರೆ. ಅಲ್ಲದೆ ಸಿನೆಮಾ ಮಂದಿರದಿಂದ ಹೊರಬಿದ್ದಾಗ ಅಪೂರ್ಣತೆಯ ಭಾವ ಆವರಿಸಿಕೊಳ್ಳುತ್ತದೆ ಅಥವಾ ಇದು ಬೇಕಂತಲೇ ೨೦೧೬ ರಲ್ಲಿ ಬರಲಿರುವ 'ಕೆಂಡಸಂಪಿಗೆ - ಪಾರ್ಟ್ ೧ ಕಾಗೆಬಂಗಾರ ಕೇಸ್' ನೋಡಲೆಂದು ಮಾಡಿರುವ ಜಾಣತನವೇನೋ! - ಗುರುಪ್ರಸಾದ್

  ಘಮ ಘಮಾಡಿಸ್ಯಾವ ಸಂಪಿಗಿ - ಪ್ರಜಾವಾಣಿ

  ಸೂರಿ ಅವರ ಈವರೆಗಿನ ಸಿನಿಮಾಗಳ ಕಥೆಗಳಲ್ಲಿ ಒಂದು ಬಗೆಯ ವಿಕ್ಷಿಪ್ತತೆ ಅಂತರ್ಗತವಾಗಿದೆ. ಬದುಕಿನ ಬಗ್ಗೆ ಪ್ರೀತಿ ಉಕ್ಕಿಸುವ ಭಾವೋದ್ದೀಪಕ ಅಂಶಗಳ ಜೊತೆಗೆ ಕ್ರೌರ್ಯವನ್ನೂ ಕುಸುರಿ ಕಲೆಗಾರಿಕೆಯಲ್ಲಿ ಹೆಣೆಯುವ ತಂತ್ರ ಅದು. ಆ ನೆತ್ತರು ಮತ್ತು ಗುಲಾಬಿಯ ಕಸಿಯಿಂದ ಪಾರಾಗಿರುವುದು ‘ಕೆಂಡಸಂಪಿಗೆ'ಯ ವಿಶೇಷ. ತಮ್ಮ ಶೈಲಿಯನ್ನು ಬಿಟ್ಟುಕೊಡದ ಸೂರಿ, ತಮ್ಮ ಚಿತ್ರಿಕೆಗಳಿಗೆ ತಾವೇ ಮರುಳಾಗುವ ಆಮಿಷದಿಂದಲೂ ಪಾರಾಗಿರುವುದು ಗಮನಾರ್ಹ. ಬಿಡಿ ದೃಶ್ಯಾವಳಿಗಳು ಹಾಗೂ ಕಚಗುಳಿಯ ಸಂಭಾಷಣೆಗಳ ಮೂಲಕ ಸಿನಿಮಾವನ್ನು ಆಕರ್ಷಕಗೊಳಿಸುವ ತಂತ್ರವೂ ಇಲ್ಲಿಲ್ಲ. ಇಡೀ ಸಿನಿಮಾವನ್ನು ಏಕನಿಷ್ಠೆಯಲ್ಲಿ ಪೋಷಿಸಿರುವ ನಿರ್ದೇಶಕರು ಸಿನಿಮಾದ ಅಂತ್ಯಕ್ಕೆ ಮಾನವೀಯ ಆಯಾಮವೊಂದನ್ನು ಕಲ್ಪಿಸಿದ್ದಾರೆ. - ರಘುನಾಥ.ಚ.ಹ

  Movie Review: Kendasampige

  ​Kendasampige is a masterful surprise by director Suri. Setting aside the question of whether he thrives only when he handles newcomers, this film will stand notches above his Duniya and Inti Ninna Preetiya. The rough edges of his other films like Junglee and Jackie have vanished and here is a film that is near-perfect. - Shyam Prasad S

  English summary
  Duniya Soori directorial Kannada Movie 'Kendasampige' has received thumps up from the critics. Here is the collection of reviews from leading Kannada News Papers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more